ಬೆಂಗಳೂರು (ಮಾ. 21): ಕಿಚ್ಚ ಸುದೀಪ್ ಅಭಿನಯದ ’ಮೈ ಆಟೋಗ್ರಾಫ್’ ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಎಲ್ಲರನ್ನೂ ಒಂದು ಕ್ಷಣ ಭಾವುಕರನ್ನಾಗಿ ಮಾಡುವ ಚಿತ್ರವಿದು. ಈ ಚಿತ್ರದಲ್ಲಿ ಲತಿಕಾ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಮುಗ್ಧ ಅಭಿನಯ ಮನಸ್ಸಲ್ಲಿ ಕುಳಿತು ಬಿಡುತ್ತದೆ.

ಸ್ಯಾಂಡಲ್‌ವುಡ್‌ನಲ್ಲಿ ಮಲಯಾಳಂ ಬೆಡಗಿ 'ಮಿಸ್ಸಿಂಗ್‌'? 

ಲತಿಕಾ ಇದ್ದ ಕೇರಳದ ಸುಂದರ ಮನೆ ಕಣ್ಮನ ಸೆಳೆದಿತ್ತು. ಈಗ ಮತ್ತೊಮ್ಮೆ ಆ ಮನೆಯನ್ನು ನೋಡುವ ಅವಕಾಶ ಒದಗಿ ಬಂದಿದೆ. ಕನ್ನಡದ ಇನ್ನೊಂದು ಚಿತ್ರ ಈ ಮನೆಯಲ್ಲಿ ಚಿತ್ರೀಕರಣವಾಗುತ್ತಿದೆ. ಶರಣ್ ಅಭಿನಯದ ’ಅವತಾರ್ ಪುರುಷ’ ಚಿತ್ರ ಶೂಟಿಂಗ್ ಈ ಮನೆಯಲ್ಲಿ ನಡೆಯುತ್ತಿದೆ. 

ಇದು ಕೇರಳದ 300 ವರ್ಷಗಳ ಹಳೆಯ ಮನೆ. ಸುಮಾರು 100 ಎಕರೆ ಜಾಗದಲ್ಲಿ ವಿಶಾಲವಾಗರುವ ಈ ಮನೆ ಮಲಯಾಳಂ ಇಂಡಸ್ಟ್ರಿಯ ಲಕ್ಕಿ ಮನೆ ಎಂದೇ ಹೇಳಲಾಗುತ್ತದೆ. ಸೂಪರ್ ಸ್ಟಾರ್ ಗಳಾದ ಮುಮ್ಮಟ್ಟಿ, ಮೋಹನ್ ಲಾಲ್ ಸಿನಿಮಾದ ಒಂದು ಭಾಗವನ್ನಾದರೂ ಈ ಮನೆಯಲ್ಲಿ ಚಿತ್ರೀಕರಿಸಿದರೆ ಅದು ಹಿಟ್ ಆಗುತ್ತದೆ ಎನ್ನುವ ನಂಬಿಕೆ ಇವರದು. 

’ನನ್ನ ಬೆಂಬಲಯಿಲ್ಲ’; ಮಂಡ್ಯ ಸ್ಪರ್ಧೆ ಬಗ್ಗೆ ಗಮನ ಸೆಳೆದಿದೆ ಪುನೀತ್ ಪತ್ರ

ಇದೀಗ ಕನ್ನಡದ ಅವತಾರ ಪುರುಷ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.