ಗೃಹಿಣಿ ಆದ ಸೋನು: ಈಗಷ್ಟೆ ಬಿಡುಗಡೆ ಆಗಿರುವ ಚಿತ್ರದ ಎರಡನೇ ಟ್ರೇಲರ್‌ನಲ್ಲಿ ಮದುವೆಯಾದ ಗೃಹಿಣಿಯ ಗೆಟಪ್‌ನಲ್ಲಿ ಮನೆ ಮುಂದೆ ರಂಗೋಲಿ ಬಿಡಿಸುವ ಸೋನು ಜೊತೆಗೆ ಒಂದು ಮಗು ಬೇರೆ ಇದೆ. ಹಾಗಾದರೆ ಇದು ಮದುವೆಯಾದವರ ಮತ್ತೊಂದು ಪ್ರೇಮ ಕತೆಯ ಚಿತ್ರವೇ? ಅಥವಾ ‘ಎ’ ಹಾಗೂ ‘ಕುಟುಂಬ’ ಚಿತ್ರದ ಫ್ಯಾಮಿಲಿ, ಲವ್ ಹಾಗೂ ಅಫೇರ್ ಅಂಶಗಳನ್ನು ನೆನಪಿಸುವ ದಾಟಿಯ ಸಿನಿಮವಾ ಎಂಬುದೇ ಕುತೂಹಲದ ವಿಷಯ.

ಸುದೀಪ್ ಮೆಚ್ಚಿದ ಪಾತ್ರ

‘ಲೈಫ್‌ನಲ್ಲಿ ಇನ್ಯಾವತ್ತೂ ಇಂಥ ಪಾತ್ರ ಮಾಡೋಲ್ಲ!’

ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್ ಅವರು ಮೊದಲು ಹೇಳಿದ್ದು ಸೋನು ಗೌಡ ಅವರ ಈ ಇದೇ ಗೃಹಿಣಿ ಪಾತ್ರವನ್ನು. ‘ಚಿತ್ರದ ಟ್ರೇಲರ್ ನೋಡುವಾಗ ಸಡನ್ನಾಗಿ ಬರುವ ಗೃಹಿಣಿ ಹಾಗೂ ಮಗುವಿನ ಪಾತ್ರ ನನ್ನ ಗಮನ ಸೆಳೆಯಿತು. ರೆಗ್ಯುಲರ್ ಉಪೇಂದ್ರ ಅವರ ಚಿತ್ರಗಳಿಗೂ ಆಚೆಗಿನ ಭಿನ್ನವಾದ ಕತೆ ಯಿದು ಎಂಬುದನ್ನು ಈ ಪಾತ್ರ ಸೂಚಿಸುತ್ತಿದೆ’ ಎಂದು ಸುದೀಪ್ ಹೇಳುವ ಮೂಲಕ ಸೋನು ಗೌಡ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.

ರಚಿತಾ ಎರ್ರಾಟಿಕ್‌ ಉಪ್ಪಿ ಪೊಯೆಟಿಕ್‌!

ಪ್ರೀತಿ, ಪ್ರೇಮ, ಕಾಮ ಎನ್ನುತ್ತ ಸಾಗುವ ಕತೆಯಲ್ಲಿ ಒಂದು ಫ್ಯಾಮಿಲಿ ಡ್ರಾಮಾ ಕ್ರಿಯೇಟ್ ಮಾಡೋದು ಸೋನು ಗೌಡ ಅವರ ಪಾತ್ರ. ಜೂನ್ ೧೪ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.