'ಆಂಟಿ ಲವರ್' ಎಂದೇ ಫೇಮಸ್ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗಿಂತ ಚಿಕ್ಕವನಾದ ಸುನಿ ಪಾತ್ರಧಾರಿ ಯಶ್ವಂತ್, ನಿಜ ಜೀವನದಲ್ಲೂ ಅನ್ವಿತಾ ಅವರಿಗಿಂತ ಚಿಕ್ಕವರು. ಈ ಕಾರಣಕ್ಕೆ 'ಆಂಟಿ ಲವರ್' ಎಂದು ಟ್ರೋಲ್ ಆಗುತ್ತಿರುವ ಯಶ್ವಂತ್, ಇದೀಗ ತಮ್ಮ ಸ್ನೇಹಿತೆಯೊಂದಿಗೆ ಮಾಡಿದ ಹಳೆಯ ರೀಲ್ಸ್‌ನಿಂದಾಗಿ ಮತ್ತೆ ವೈರಲ್ ಆಗಿದ್ದಾರೆ.

ಮಲ್ಲಿ-ಸಿಂಪಲ್ ಸುನಿ
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಮಲ್ಲಿ ಮತ್ತು ಸಿಂಪಲ್ ಸುನಿ ಮದ್ವೆ ಮಾತುಕತೆ ನಡೆಯುತ್ತಿದ್ದು, ಇಬ್ಬರ ಎಂಗೇಜ್ಮೆಂಟ್ ಆಗಿದೆ.
ತುಂಬಾ ಚಿಕ್ಕವ ಸುನಿ
ಸೀರಿಯಲ್‌ನಲ್ಲಿ ಇವರಿಬ್ಬರ ವಯಸ್ಸಲ್ಲಿ ಸುಮಾರು ಐದಾರು ವರ್ಷ ವ್ಯತ್ಯಾಸವಿದೆ. ಅಂದರೆ ಸುನಿಲ್ ಮಲ್ಲಿಗಿಂತ ಐದಾರು ವರ್ಷ ಚಿಕ್ಕವ. ಆದರೆ ರಿಯಲ್ ಲೈಫ್ನಲ್ಲಿ ಕೂಡ ಸುನಿಲ್ ಪಾತ್ರಧಾರಿ ಯಶ್ವಂತ್ ಅವರು, ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಅವರಿಗಿಂತಲೂ ತುಂಬಾ ಚಿಕ್ಕವರು.
ಕೆಟ್ಟ ಕಮೆಂಟ್ಸ್
ಸುನಿಲ್ ಮತ್ತು ಮಲ್ಲಿಯ ಜೋಡಿ ನೋಡಿ ಹಲವರು ಕೆಟ್ಟ ಕಮೆಂಟ್ಸ್ ಹಾಕುತ್ತಿರುವ ಬಗ್ಗೆ ಇದಾಗಲೇ ಅನ್ವಿತಾ ಮತ್ತು ಯಶ್ವಂತ್ ನೋವು ತೋಡಿಕೊಂಡಿದ್ದಾರೆ. ನನ್ನನ್ನು ಆಂಟಿ ಲವರ್ ಎಂದೆಲ್ಲಾ ಕರೆಯುತ್ತಾರೆ ಎಂದು ಯಶ್ವಂತ್ ಹೇಳಿಕೊಂಡಿದ್ದರು. ಆದರೆ ಆ ಪಾತ್ರ ಹಾಗೆ ಇದೆ. ಸೀರಿಯಲ್ಗೆ ಅದು ಬೇಕು. ಮೊದಲು ಕಮೆಂಟ್ಸ್ ನೋಡಿ ಬೇಸರ ಆಗ್ತಿತ್ತು. ಈಗ ರೂಢಿಯಾಗಿ ಹೋಗಿದೆ ಎಂದಿದೆ ಈ ಜೋಡಿ.
ಆಂಟಿ ಲವರ್
ಹೀಗೆ ಆಂಟಿ ಲವರ್ ಎಂದೇ ಫೇಮಸ್ ಆಗಿರೋ ಯಶ್ವಂತ್ ಅವರು ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಫೇಮಸ್ ಆದವರು. ಇದರಿಂದಲೇ ಅವರು ಅಮೃತಧಾರೆ ಸೀರಿಯಲ್ಗೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಯಶುಡಾರ್ಲಿಂಗ್ ಎನ್ನುವ ಯುಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್ ಖಾತೆಯನ್ನೂ ಹೊಂದಿದ್ದಾರೆ.
ಸ್ನೇಹಿತೆ ಜೊತೆ ರೀಲ್ಸ್
ಕೆಲವು ವಾರಗಳ ಹಿಂದೆ ಇವರು ಸ್ನೇಹಿತೆಯ ಜೊತೆ ಮಾಡಿರುವ ರೀಲ್ಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಮೃತಧಾರೆಗೆ ಎಂಟ್ರಿ ಕೊಡುವ ಮುನ್ನ ಇವರು ಈ ರೀಲ್ಸ್ ಮಾಡಿದ್ದರು.
ನಟನ ಕಾಲೆಳೆಯುತ್ತಿರೋ ಫ್ಯಾನ್ಸ್
ಕೆಲವರು ನಟನ ಕಾಲೆಳೆಯುತ್ತಿದ್ದ ಹಿನ್ನೆಲೆಯಲ್ಲಿ ಈಕೆ ನನ್ನ ಫ್ರೆಂಡ್ ಅಷ್ಟೇ ಎನ್ನುವ ರಿಪ್ಲೈ ಕೂಡ ಯಶ್ವಂತ್ ಮಾಡಿದ್ದಾರೆ. ಆದರೂ ಮಲ್ಲಿಗಿಂತ ನಿಮ್ಮಿಬ್ಬರ ಜೋಡಿ ಸಕತ್ ಆಗಿದೆ ಎಂದು ಈಗ ಕೆಲವರು ಕಮೆಂಟ್ ಮಾಡುತ್ತಿರುವ ಕಾರಣ, ಮತ್ತೀಗ ಈ ರೀಲ್ಸ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

