ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ ಪಾಕಿಸ್ತಾನಿ ಯುವತಿ ಮಹಿರಾ ಖಾನ್, ಶಾರುಖ್ ಖಾನ್ ಜೊತೆ ನಟಿಸಿದ ನಂತರ ಕೋಟ್ಯಾಧೀಶೆಯಾದ ರೋಚಕ ಕಥೆ. ಬಾಲಿವುಡ್ ಬಾದ್ ಷಾ ಕೃಪೆಯಿಂದ ಅವರ ಜೀವನ ಸಂಪೂರ್ಣ ಬದಲಾಯಿತು.
ಮುಂಬೈ: ಕಿಂಗ್ ಖಾನ್, ಬಾಲಿವುಡ್ ಬಾದ್ಷಾಹ್ ಎಂದೇ ಫೇಮಸ್ ಆಗಿರೋ ನಟ ಶಾರುಖ್ ಖಾನ್ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಕೆಲವು ದೇಶಗಳಲ್ಲಿ ಫ್ಯಾನ್ಸ್ ಇದ್ದಾರೆ, ಅದರಲ್ಲಿಯೂ ಪಾಕಿಸ್ತಾನದಲ್ಲಿ ಇವರಿಗೆ ಸ್ವಲ್ಪ ಹೆಚ್ಚಿಗೇ ಅಭಿಮಾನಿಗಳು ಇದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೇ ಕಾರಣಕ್ಕೆ ಪಾಕಿಸ್ತಾನದ ವಿರುದ್ಧ ಎಂಥ ಸಂದರ್ಭದಲ್ಲಿಯೂ ಬಾಯಿ ಬಿಡದಷ್ಟು ಪ್ರೇಮವನ್ನು ಬೆಳೆಸಿಕೊಂಡವರು ಶಾರುಖ್. ಪಾಕಿಸ್ತಾನದ ಉಗ್ರರು ಭಾರತದ ಮೇಲೆ ಭಯೋತ್ಪಾದನಾ ದಾಳಿ ಮಾಡಿದಾಗಲೂ ಅದರ ಬಗ್ಗೆ ಮಾತನಾಡಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಒಂದು ಸಂದರ್ಶನದಲ್ಲಿ ಉಗ್ರ ಕಸಾಬ್ನನ್ನೇ ಜಂಟಲ್ಮೆನ್ ಎಂದು ಟ್ರೋಲ್ ಆಗಿದ್ದೂ ಇದೆ. ಆದರೆ ಅದೇನೇ ಇದ್ದರೂ, ಯಾವುದೇ ದೇಶದ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಈ ಬಾಲಿವುಡ್ ಬಾದ್ಷಾ.
ಜೀವನೋಪಾಯಕ್ಕೆ ಟಾಯ್ಲೆಟ್ ಕ್ಲೀನ್ ಮಾಡುತ್ತಾ, ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಯುವತಿಯೊಬ್ಬಳು, ಶಾರುಖ್ ಖಾನ್ ಅವರ ಕೃಪೆಯಿಂದ ಹೇಗೆ 170 ಕೋಟಿ ರೂಪಾಯಿಗಳ ಒಡತಿಯಾದಳು ಎನ್ನುವ ರೋಚಕ ಘಟನೆ ಇಲ್ಲಿ ಹೇಳಲಾಗಿದೆ. ಈಕೆಯ ಹೆಸರೇ ಮಹಿರಾ ಖಾನ್ (Mahira Khan). ನೋಡಲು ಸುಂದರಿಯಾಗಿದ್ದರೂ, ಹೊಟ್ಟೆ ಪಾಡಿಗೆ ಅಂಗಡಿ, ಮನೆಗಳ ಕೆಲಸ ಈಕೆಯದ್ದಾಗಿತ್ತು. ಒಂದು ಹಂತದಲ್ಲಿ, ಮಹಿರಾ ಜೀವನ ಸಾಗಿಸಲು ಅಂಗಡಿಗಳನ್ನು ಗುಡಿಸಿ ಒರೆಸಬೇಕಾಗಿತ್ತು. ಆದರೆ, ಈಗ, ಮಹಿರಾ ಮಿಲಿಯನೇರ್ ಮತ್ತು ರಾಣಿಯಂತೆ ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದರು.
ಖುಲಾಯಿಸಿದ ಅದೃಷ್ಟ
ಪಾಕಿಸ್ತಾನದಲ್ಲಿ ನಟಿಸುತ್ತಿದ್ದರೂ, ಈಕೆಯ ಸೌಂದರ್ಯದಿಂದ ಮಹಿರಾಗೆ ಶಾರುಖ್ ಖಾನ್ ಜೊತೆ "ರಯೀಸ್" ಚಿತ್ರದಲ್ಲಿ ಪತ್ನಿಯಾಗಿ ನಟಿಸುವ ಅವಕಾಶ ಸಿಕ್ಕಿತು. ಅವರು, ತಮ್ಮ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಈ ಚಿತ್ರದ ನಂತರ, ಮಹಿರಾ ಭಾರತದಲ್ಲೂ ಅತ್ಯಂತ ಜನಪ್ರಿಯರಾದರು. ಶಾರುಖ್ ದೃಷ್ಟಿ ಬೀಳುತ್ತಲೇ ಮಹಿರಾ ಅದೃಷ್ಟ ಖುಲಾಯಿಸಿತು. ಇವರಂಥ ನಟರ ಜೊತೆ ತೆರೆ ಹಂಚಿಕೊಂಡ ಮೇಲೆ ಹಲವು ಅವಕಾಶಗಳು ಬಂದವು. ಶಾರುಖ್ಗಿಂತ ಅತ್ಯಂತ ಚಿಕ್ಕ ವಯಸ್ಸಿನ ಮಹಿರಾ, ಒಂದು ಹಂತದಲ್ಲಿ ವಿವಾಹಿತ ಶಾರುಖ್ ಅವರನ್ನು ಮದುವೆಯಾಗುವ ಪಟ್ಟು ಕೂಡ ಹಿಡಿದಿದ್ದರು. ಶಾರುಖ್ ಪತ್ನಿ ಗೌರಿ ಇರುವಾಗ ಇವೆಲ್ಲಾ ಸಾಧ್ಯವಾಗಲಿಲ್ಲ. ಆದರೆ, ಅದೃಷ್ಟ ಖುಲಾಯಿಸಿ ಬಾಲಿವುಡ್ನಲ್ಲಿ ಆಫರ್ ಬರತೊಡಗಿ ಹಂತ ಹಂತವಾಗಿ ಮಿಲೇನಿಯರ್ ಆಗಿದ್ದು ಈಗ ಇತಿಹಾಸ
ಮದುವೆಯಾದ ನಟಿ
"ರಯೀಸ್" ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ನಟಿಸಿದ ಪಾಕಿಸ್ತಾನಿ ನಟಿ ಮಹಿರಾ ಖಾನ್ ಕಳೆದ ವರ್ಷ ವಿವಾಹವಾದರು. ಮದುವೆಯ ಸ್ವಲ್ಪ ಸಮಯದ ನಂತರ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹಳೆಯ ಸಂದರ್ಶನವೊಂದರಲ್ಲಿ, ನಟಿ ಅಮೆರಿಕದಲ್ಲಿ ತುಂಬಾ ಕಷ್ಟದ ಸಮಯವನ್ನು ಎದುರಿಸಿದ್ದಾಗಿ ಬಹಿರಂಗಪಡಿಸಿದರು.
ಫುಚ್ಸಿಯಾ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಹಿರಾ ಸಣ್ಣಪುಟ್ಟ ಕೆಲಸಗಳ ಬಗ್ಗೆ ಮಾತನಾಡುತ್ತಾ, ನೆಲವನ್ನು ಗುಡಿಸುವ ಮೂಲಕ ಮತ್ತು ರಸ್ತೆಬದಿಯ ಅಂಗಡಿಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಹಣ ಗಳಿಸಿದ್ದಾಗಿ ಬಹಿರಂಗಪಡಿಸಿದರು. "ನಾನು ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಿದ್ದೇನೆ ಎಂದು ಜನರು ತಿಳಿದುಕೊಳ್ಳಬೇಕೆಂದು ನಾನು ಬಯಸುವ ವಿಷಯಗಳನ್ನು ನಾನು ಹಂಚಿಕೊಂಡಿದ್ದೇನೆ. ನಾನು ನೆಲವನ್ನು ಗುಡಿಸಿ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದೇನೆ. ಇದು ಸುಲಭವಲ್ಲದ ಪ್ರಯಾಣ, ಆದರೆ ಇದು ಅದ್ಭುತವಾದ ವಿಷಯ ಎಂದಿದ್ದಾರೆ. ಮಹಿರಾ 17 ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದರು ಮತ್ತು ಅಮೆರಿಕದಲ್ಲಿದ್ದ ಸಮಯದಲ್ಲಿ ವಿವಿಧ ಸಣ್ಣಪುಟ್ಟ ಕೆಲಸಗಳಲ್ಲಿ ಕೆಲಸ ಮಾಡಿದರು.
ಈಗ ₹170 ಕೋಟಿ ಮೌಲ್ಯದ ಆಸ್ತಿ
ಮಹಿರಾ ಖಾನ್ ಅವರನ್ನು ಪಾಕಿಸ್ತಾನದ ಅತ್ಯಂತ ಶ್ರೀಮಂತ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಲನಚಿತ್ರ ಮತ್ತು ಬ್ರಾಂಡ್ ಅನುಮೋದನೆಗಳ ಜೊತೆಗೆ, ಮಹಿರಾ ಖಾನ್ ಎಂ ಬೈ ಮಹಿರಾ ಖಾನ್ ಎಂಬ ಬಟ್ಟೆಗಳ ಸಾಲನ್ನು ಸಹ ನಡೆಸುತ್ತಿದ್ದಾರೆ. ಮಾಧ್ಯಮ ವರದಿಗಳ ಆಧಾರದ ಮೇಲೆ ಅವರ ನಿವ್ವಳ ಮೌಲ್ಯ ₹170 ಕೋಟಿ ಎಂದು ಅಂದಾಜಿಸಲಾಗಿದೆ.


