ಬಾಲಿವುಡ್ ನಟ ಶಾರುಖ್ ಖಾನ್ 'ರಯೀಸ್' ಚಿತ್ರದ ನಾಯಕಿ ಪಾಕಿಸ್ತಾನದ ಮಹಿರಾ ಖಾನ್ ಅವರ ಜೊತೆ ಇಂಟಿಮೇಟ್ ದೃಶ್ಯದಲ್ಲಿ ನಟಿಸಿದ್ದರು. ಆ ನಂತರ ಶಾರುಖ್ ಮೇಲೆ ವಿಪರೀತ ವ್ಯಾಮೋಹ ಬೆಳೆಸಿಕೊಂಡಿದ್ದ ನಟಿಗೆ, ತಾನು ನಿನ್ನ ತಂದೆಯ ಸಮಾನ ಎಂದು ಬುದ್ಧಿ ಹೇಳಿ ದೂರವಿಟ್ಟಿದ್ದರು.
ಮುಂಬೈ: ಸಿನಿ ಇಂಡಸ್ಟ್ರಿಯ ಕೆಲವು ಖ್ಯಾತ ನಾಯಕರು ತಮ್ಮ ಮಗಳ ವಯಸ್ಸಿನ ನಟಿಯರ ಜೊತೆ ಸಿನಿಮಾದಲ್ಲಿ ರೊಮಾನ್ಸ್ ಮಾಡುವುದು ಹೊಸ ವಿಷಯವೇನಲ್ಲ. ಅವರಿಗೆ 50-60 ದಾಟಿದ್ದರೂ, ಹೊಸದಾಗಿ ಸಿನಿಮಾಕ್ಕೆ ಎಂಟ್ರಿಕೊಡುವ 18-20ರ ವಯಸ್ಸಿನ ಯುವ ನಟಿಯರ ಜೊತೆ ನಟಿಸಲು ಅವರೂ ಹಿಂಜರಿಯುವುದಿಲ್ಲ, ಇವರೂ ಹಿಂಜರಿಯುವುದಿಲ್ಲ. ಹೊಸದಾಗಿ ಎಂಟ್ರಿ ಕೊಡುವ ನಟಿಯರಿಗೆ ಖ್ಯಾತನಾಮ ನಾಯಕರ ಜೊತೆ ನಟಿಸಿದರೆ ತಮ್ಮ ಅದೃಷ್ಟದ ಬಾಗಿಲು ಖುಲಾಯಿಸಿದಂತೆ ಎಂದುಕೊಂಡರೆ, ಕೆಲವೇ ಕೆಲವು ನಟರು ಇಷ್ಟು ಚಿಕ್ಕ ವಯಸ್ಸಿನವಳ ಜೊತೆ ನಟಿಸೋದು ತಮಗೆ ಸರಿಯಾಗಲ್ಲ ಎಂದು ರಿಜೆಕ್ಟ್ ಮಾಡಿದರೆ, ಮತ್ತೆ ಹಲವು ನಟರು ಒಪ್ಪಿಕೊಳ್ಳುತ್ತಾರೆ. ಇದು ಸಿನಿಮಾ ರಂಗದಲ್ಲಿ ಹೊಸ ವಿಷಯವೇನಲ್ಲ.
ತಮ್ಮ ಮಗಳ ವಯಸ್ಸಿನ ನಟಿಯಾದರೂ ರೊಮಾನ್ಸ್ ಮಾಡಲು ಸಿದ್ಧವಾಗಿರುವ, ನಾಯಕರ ಪೈಕಿ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಒಬ್ಬರು. ಶಾರುಖ್ ಖಾನ್ ಮತ್ತು ಗೌರಿ ದಂಪತಿಗೆ ಇಬ್ಬರು ಮಕ್ಕಳು. ಮಗ ಆರ್ಯನ್ ಖಾನ್ಗೆ ಈಗ 29 ವರ್ಷ ವಯಸ್ಸಾದರೆ, ಮಗಳು ಸುಹಾನ್ ಖಾನ್ಗೆ 26 ವರ್ಷ ವಯಸ್ಸು. 61 ವರ್ಷದ ಶಾರುಖ್ ಖಾನ್, 20 ವರ್ಷದ ನಾಯಕಿಯ ಜೊತೆ ಈಗಲೂ ಬೇಕಿದ್ದರೆ ತೆರೆಯ ಮೇಲೆ ರೊಮಾನ್ಸ್ಗೆ ಸಿದ್ಧ. ಹಾಗಿರುವಾಗ 9 ವರ್ಷಗಳ ಹಿಂದಿನ ಘಟನೆಯೊಂದು ಮತ್ತೆ ಮುನ್ನೆಲೆಗೆ ಬಂದಿದ್ದು, ಆಗ ಇದು ಸಿನಿ ಇಂಡಸ್ಟ್ರಿಯಲ್ಲಿ ಹೇಗೆ ಹಲ್ಚಲ್ ಸೃಷ್ಟಿಸಿತ್ತು ಎನ್ನುವುದು ವರದಿಯಾಗಿದೆ.
ಪಾಕ್ ಪ್ರೇಮಿ ಶಾರುಖ್- ನಟಿಯ ಜೊತೆಗೆ ಆ ದೃಶ್ಯ
ಅಷ್ಟಕ್ಕೂ ಶಾರುಖ್ ಖಾನ್ಗೆ ಪಾಕಿಸ್ತಾನದ ಮೇಲೂ ಬಹಳ ಪ್ರೀತಿ. ಪಾಕ್ ವಿರುದ್ಧ ಯಾವತ್ತೂ ಅವರು ಮಾತನಾಡಿದ್ದೇ ಇಲ್ಲ. ಅದು ಎಷ್ಟರ ಮಟ್ಟಿಗೆ ಎಂದರೆ ಪಾಕಿಸ್ತಾನದ ಉಗ್ರರಿಂದ ಭಾರತದ ಮೇಲೆ ಭಯೋತ್ಪಾದನಾ ದಾಳಿಯಾದಾಗಲೂ ಗಪ್ಚುಪ್ ಆಗಿರುವ ನಟ. ಉಗ್ರ ಕಸಾಬ್ನನ್ನು ಜಂಟಲ್ಮೆನ್ ಎಂದು ಕರೆಯುವ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಅಭಿಮಾನಿಗಳಿಗೆ ಖುಷಿ ಕೊಟ್ಟಿರುವ ನಟ ಇವರು. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿಯೂ, ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಅಂಥವರಲ್ಲಿ ಒಬ್ಬರು ಪಾಕ್ನ ಖ್ಯಾತ ನಟಿ ಮಹಿರಾ ಖಾನ್.
2017ರಲ್ಲಿ ತೆರೆಕಂಡ ‘ರಯೀಸ್’ ಚಿತ್ರದ ಮೂಲಕ ಶಾರುಖ್ ಜೊತೆ ತೆರೆ ಹಂಚಿಕೊಳ್ಳುವ ಅದ್ಭುತ ಅವಕಾಶ ಪಡೆದುಕೊಂಡಿದ್ದರು ನಟಿ ಮಹಿರಾ. ಆ ಸಮಯದಲ್ಲಿ, ಮಹಿರಾ ಖಾನ್ ಡಿವೋರ್ಸ್ ಪಡೆದುಕೊಂಡಿದ್ದರು. ಅವರಿಗೆ ಅಪ್ಪನ ವಯಸ್ಸಿನ ಶಾರುಖ್ ಮೇಲೆ ಇನ್ನಿಲ್ಲದ ವ್ಯಾಮೋಹ. ಇದೇ ಕಾರಣಕ್ಕೆ ಅವರು ಶಾರುಖ್ ಜೊತೆ ನಟಿಸಲು ಉತ್ಸುಕರಾಗಿದ್ದರು. ಅದಕ್ಕೆ ಶಾರುಖ್ ಕೂಡ ಬೇಡ ಅನ್ನಲಿಲ್ಲ. ಈ ಸಿನಿಮಾದಲ್ಲಿ ಇಬ್ಬರ ಲಿಪ್ಲಾಕ್ ದೃಶ್ಯವಿತ್ತು. ಈ ಇಂಟಿಮೇಟ್ ಸೀನ್ನನ್ನು ಇಬ್ಬರೂ ಧಾರಾಳವಾಗಿ, ಸಲೀಸಾಗಿ ಮಾಡಿದ್ದರು. ಆ ಸೀನ್ ಎಷ್ಟರ ಮಟ್ಟಿಗೆ ಒರಿಜಿನಲ್ ಆಗಿತ್ತು ಎಂದರೆ, ಕೊನೆಗೆ ಆ ದೃಶ್ಯವನ್ನೇ ಸಿನಿಮಾದಿಂದ ಕಟ್ ಮಾಡಿದರಂತೆ!
ಈ ದೃಶ್ಯವಾದ ಮೇಲೆ ಮಹಿರಾಗೆ ಶಾರುಖ್ ಮೇಲೆ ಮತ್ತಷ್ಟು ಮೋಹ ಹುಟ್ಟಿತಂತೆ. ಕೊನೆಗೆ ಅವರು ಶಾರುಖ್ ಅವರನ್ನು ಮದುವೆಯಾಗುವ ಮಟ್ಟಿಗೆ ಬಂದು, ತೀರಾ ಆತ್ಮೀಯವಾಗಿ ಇರಲು ನೋಡಿದರು. ಇದನ್ನು ಶಾರುಖ್ಗಮನಿಸಿ, ಪರಿಸ್ಥಿತಿ ಮಿತಿಮೀರದಂತೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. “ನೀನಿನ್ನೂ ಚಿಕ್ಕವಳು, ನನ್ನ ಮಗಳಿಗೂ ಬಹುತೇಕ ನಿನ್ನದೇ ವಯಸ್ಸು” ಎಂದು ತಿಳಿಹೇಳಿ ಗದರಿಸುವ ಮೂಲಕ, ಆಕೆಯಿಂದ ದೂರವಿದ್ದರು ಎನ್ನಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಮಹಿರಾ ಒಪ್ಪದಾಗ, ಇಡೀ ಸಿನಿ ಇಂಡಸ್ಟ್ರಿಯಲ್ಲಿ ಹಲ್ಚಲ್ ಉಂಟಾಗಿತ್ತಂತೆ! ಅಷ್ಟಕ್ಕೂ ಇಂಥ ವಿಷಯದಲ್ಲಿ ಶಾರುಖ್ ಪತಿ ಗೌರಿ ಎಷ್ಟು ಸ್ಟ್ರಿಕ್ಟ್ ಎನ್ನುವುದು ಅವರನ್ನು ಸಮೀಪದಿಂದ ಬಲ್ಲವರಿಗೆ ಚೆನ್ನಾಗಿ ಗೊತ್ತಿದೆ ಎನ್ನಲಾಗುತ್ತದೆ. ಇದೇಕಾರಣಕ್ಕೆ ನಟ ಬೇರೆ ಕೆಲವು ನಟರಂತೆ ಅಲ್ಲದೇ ಏಕಪತ್ನಿವ್ರತಸ್ಥರಾಗಿದ್ದಾರೆ!
ಶಾರುಖ್ ಅವರು ರಿಜೆಕ್ಟ್ ಮಾಡಿದ ಮೇಲೆ ಮಹಿರಾ ಖಾನ್ ಬೇರೆ ವಿವಧಿ ಇಲ್ಲದೇ ಕೊನೆಗೆ, ಪಾಕಿಸ್ತಾನದ ಖ್ಯಾತ ಉದ್ಯಮಿಯೊಬ್ಬರನ್ನು ವಿವಾಹವಾದರು.














