ಕ್ರಿಕೆಟಿಗನ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸವಾಲು ಹಾಕಿದ್ಯಾರಿಗೆ?

Fitness Kichcha Sudeep challenges Namma Yash
Highlights

ನಾವು ಫಿಟ್ ಆಗಿದ್ದರೆ, ದೇಶ ಫಿಟ್ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಗಣ್ಯರು ಹಾಕುತ್ತಿರುವ ಫಿಟ್‌ನೆಸ್ ಚಾಲೆಂಜ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಕ್ರಿಕೆಟಿಗ ವಿನಯ್ ಕುಮಾರ್ ಹಾಕಿದ್ದ ಸವಾಲನ್ನು ಅಭಿನಯ ಚಕ್ರವರ್ತಿ ಕಿಚ್ಚಿ ಸುದೀಪ್ ಸ್ವೀಕರಿಸಿದ್ದಾರೆ. ಇದೀಗ ಕನ್ನಡ ನಟ, ಪತ್ನಿ ಸೇರಿ ಬಾಲಿವುಡ್ ಗಣ್ಯರಿಗೆ ಸುದೀಪ್ ಚಾಲೆಂಜ್ ಮುಂದುವರಿಸಿದ್ದಾರೆ.

ಬೆಂಗಳೂರು: 'ಹಮ್ ಫಿಟ್ ಹೇ ತೋ ಇಂಡಿಯಾ ಫಿಟ್..' ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ಹಾಕಿರುವ ಚಾಲೆಂಜ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಕ್ರಿಕೆಟಿಗ ವಿನಯ್ ಕುಮಾರ್, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ಗೆ ಫಿಟ್‌ನೆಸ್ ಚಾಲೆಂಜ್ ಹಾಕಿದ್ದರು. ಇದನ್ನು ಸ್ವೀಕರಿಸಿ, ಕಿಚ್ಚ ಯಶ್‌ಗೆ ಚಾಲೆಂಜ್ ಮಾಡಿದ್ದಾರೆ.

ಕ್ರೀಡಾ ಸಚಿವರು ಹಾಕಿರುವ ಚಾಲೆಂಜ್‌ಗೆ ಕ್ರೀಡಾಳುಗಳು, ಸಿನಿ ತಾರೆಯರು ಹಾಗೂ ಕೆಲವೇ ಕೆಲವು ಸಚಿವರು ಸ್ವೀಕರಿಸಿದ್ದಾರೆ. ವಿರಾಟ್ ಕೋಹ್ಲಿ ಚಾಲೆಂಜ್ ಅನ್ನು ಪ್ರಧಾನಿ ಮೋದಿಯೂ ಸಹ ಸ್ವೀಕರಿಸಿದ್ದಾರೆ.

ಇದೀಗ ಕಿಚ್ಚ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ದೃಶ್ಯವನ್ನು ತಮ್ಮ ಟ್ವೀಟ್ ಪುಟದಲ್ಲಿ ಪೋಸ್ಟ್ ಮಾಡಿದ್ದು, ಬಾಲಿವುಡ್ ನಟ ರಿತೇಶ್ ದೇಶ್ಮುಖ್, ಪತ್ನಿ ಪ್ರಿಯಾ, ಯಶ್ ಹಾಗೂ ಸೊಹೈಲ್ ಖಾನ್‌ ಅವರಿಗೆ ಟ್ಯಾಗ್ ಮಾಡಿ ಚಾಲೆಂಜ್ ಹಾಕಿದ್ದಾರೆ.

ರಕುಲ್ ಪ್ರೀತ್‌ಗೆ ಸಮಂತಾ ಸವಾಲು

loader