ಗಂಡನ ಫಿಟ್’ನೆಸ್ ಚಾಲೆಂಜ್’ಗೆ ಸಮಂತಾ ಪ್ರತಿಕ್ರಿಯೆ ಹೀಗಿದೆ

This is how Samantha reacted to Naga Chaitanya's fitness challenge
Highlights

ಇದೀಗ ಕ್ರೀಡಾ ಸಚಿವರ ಫಿಟ್’ನೆಸ್ ಸವಾಲನ್ನು ಸ್ವೀಕರಿಸಿದ್ದ ನಾಗಚೈತನ್ಯ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು, ಜತೆಗೆ ಪತ್ನಿ ಸಮಂತಾಗೆ ಫಿಟ್’ನೆಸ್ ಸವಾಲು ಹಾಕಿದ್ದರು.

ಹೈದರಾಬಾದ್[ಮೇ.26]: ತೆಲುಗು ಚಿತ್ರರಂಗದ ಸ್ಟಾರ್ ದಂಪತಿಗಳಾದ ನಾಗಚೈತನ್ಯ-ಸಮಂತಾ ಅಕ್ಕಿನೇನಿ ಫಿಟ್’ನೆಸ್ ಚಾಲೆಂಜ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.
ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಚಾಲೆಂಜ್ ಇದೀಗ ದೇಶದಾದ್ಯಂತ ಸಂಚಲನ ಮೂಡಿಸುತ್ತಿದ್ದು, ಕ್ರೀಡಾ ತಾರೆಯರು, ಚಿತ್ರರಂಗದ ಸೆಲಿಬ್ರಿಟಿಗಳು, ರಾಜಕಾರಣಿಗಳು ಸವಾಲನ್ನು ಸ್ವೀಕರಿಸಿದ್ದಾರೆ. ಅಲ್ಲದೇ ತಾವು ಫಿಟ್ ಇರುವುದನ್ನು ವಿಡಿಯೋ ಮಾಡಿ ಟ್ವಿಟರ್ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇದೀಗ ಕ್ರೀಡಾ ಸಚಿವರ ಫಿಟ್’ನೆಸ್ ಸವಾಲನ್ನು ಸ್ವೀಕರಿಸಿದ್ದ ನಾಗಚೈತನ್ಯ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು, ಜತೆಗೆ ಪತ್ನಿ ಸಮಂತಾಗೆ ಫಿಟ್’ನೆಸ್ ಸವಾಲು ಹಾಕಿದ್ದರು.

ನಾಗಚೈತನ್ಯ ಸವಾಲನ್ನು ಸ್ವೀಕರಿಸಿದ ಸಮಂತಾ ಭರ್ಜರಿಯಾಗಿಯೇ ವರ್ಕೌಟ್ ಮಾಡುವ ಮೂಲಕ ತಾವೂ ಫಿಟ್ ಆಗಿರವುದನ್ನು ಸಾಬೀತು ಮಾಡಿದ್ದಾರೆ. 

ಯಾರು ಫಿಟ್’ನೆಸ್’ನಲ್ಲಿ ಬೆಸ್ಟ್ ಎಂದು ನೀವೇ ತೀರ್ಮಾನಿಸಿ...

loader