ರಕುಲ್ ಪ್ರೀತ್‌ಗೆ ಚಾಲೆಂಜ್ ಹಾಕಿದ ಸಮಂತಾ

Samantha And Rakul Preet Join Fitness Challenge with Intense Workout
Highlights

ವಿಷಯ ಏನಪ್ಪಾ ಅಂತಂದ್ರೆ, ದೇಶದಲ್ಲಿ ಈಗ ಫಿಟ್ನೆಸ್ ಚಾಲೆಂಜ್ ವೈರಲ್ ಆಗಿದೆ. ಅದಕ್ಕೆ ತಕ್ಕಂತೆ ನಾಗಚೈತನ್ಯ ತನ್ನ ಹೆಂಡತಿ ಸಮಂತಾ ಅಕ್ಕಿನೇನಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಇದನ್ನು ಒಪ್ಪಿಕೊಂಡಿದ್ದೇ ತಡ ಸಮಂತಾ ಜಿಮ್‌ನಲ್ಲಿ ಹೋಗಿ ಭರ್ಜರಿಯಾಗಿ ಬೆವರು ಸುರಿಸಿದ್ದಾರೆ. ಇದಿಷ್ಟೇ ಅಲ್ಲದೇ ರಾಮ್ ಚರಣ್ ತೇಜಾ ಹೆಂಡತಿ ಕಾಮಿನೇನಿ ಮತ್ತು ರಕುಲ್ ಪ್ರೀತ್‌ಗೆ ಚಾಲೆಂಜ್ ಮಾಡಿದ್ದಾರೆ.

ಬೆಂಗಳೂರು[ಮೇ.29]: ನಟಿ ನಟಿಯರ ಮಧ್ಯೆ ಏನೆಲ್ಲಾ ಭಿನ್ನಾಭಿಪ್ರಾಯವಿರುತ್ತದೆ, ಅದು ಯಾವೆಲ್ಲಾ ಅವತಾರಗಳಲ್ಲಿ ಬೀದಿಗೆ ಬರುತ್ತದೆ ಎನ್ನುವುದನ್ನು ನಾವು ಸಾಕಷ್ಟು ನೋಡಿಯೇ ಇದ್ದೇವೆ. ಆದರೆ ಇಲ್ಲಿ ಅದೆಲ್ಲಕ್ಕಿಂತಲೂ ಡಿಫರೆಂಟ್ ಕಹಾನಿಯೊಂದು ನಡೆದಿದೆ. ಒಬ್ಬ ನಟಿ ಚಾಲೆಂಜ್ ಹಾಕಿದರೆ, ಮತ್ತೊಬ್ಬ ನಟಿ ಅದನ್ನು ಒಪ್ಪಿಕೊಂಡು ತನ್ನ ಶಕ್ತಿಯನ್ನು ತೋರಿಸಿದ್ದಾಳೆ.

ವಿಷಯ ಏನಪ್ಪಾ ಅಂತಂದ್ರೆ, ದೇಶದಲ್ಲಿ ಈಗ ಫಿಟ್ನೆಸ್ ಚಾಲೆಂಜ್ ವೈರಲ್ ಆಗಿದೆ. ಅದಕ್ಕೆ ತಕ್ಕಂತೆ ನಾಗಚೈತನ್ಯ ತನ್ನ ಹೆಂಡತಿ ಸಮಂತಾ ಅಕ್ಕಿನೇನಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಇದನ್ನು ಒಪ್ಪಿಕೊಂಡಿದ್ದೇ ತಡ ಸಮಂತಾ ಜಿಮ್‌ನಲ್ಲಿ ಹೋಗಿ ಭರ್ಜರಿಯಾಗಿ ಬೆವರು ಸುರಿಸಿದ್ದಾರೆ. ಇದಿಷ್ಟೇ ಅಲ್ಲದೇ ರಾಮ್ ಚರಣ್ ತೇಜಾ ಹೆಂಡತಿ ಕಾಮಿನೇನಿ ಮತ್ತು ರಕುಲ್ ಪ್ರೀತ್‌ಗೆ ಚಾಲೆಂಜ್ ಮಾಡಿದ್ದಾರೆ.

ಚಾಲೆಂಜ್ ಬಂದದ್ದೇ ತಡ ರಕುಲ್ ಪ್ರೀತ್ ನಾನೇನು ಕಮ್ಮಿ ಎಂದು ಜಿಮ್‌ನಲ್ಲಿ ವರ್ಕೌಟ್‌ಗೆ ಇಳಿದಿದ್ದಾರೆ. ಈಗ ಇಬ್ಬರ ವರ್ಕೌಟ್ ವಿಡಿಯೋಗಳು ವೈರಲ್ ಆಗಿವೆ. ದೇಶದ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ಅವರಿಂದ ಪ್ರಾರಂಭವಾದ ಫಿಟ್ನೆಸ್ ಚಾಲೆಂಜ್ ಪ್ರಧಾನಿ ಮೋದಿ, ಕ್ರಿಕೆಟಿಗ ವಿರಾಟ್ ಕೋಯ್ಲಿ ಎಂಟ್ರಿಯಿಂದ ಫೇಮಸ್ ಆಗಿತ್ತು. ಈಗ ಸೌತ್ ನಟಿಯರು ಅಭಿಯಾನಕ್ಕೆ ಧುಮುಕಿ ಸದ್ದು ಮಾಡುತ್ತಿದ್ದಾರೆ. ಮುಂದೆ ಇದು ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರೆ ಅಚ್ಚರಿ ಇಲ್ಲ. 

loader