ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀಡಿದ್ದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೊಸ ಚಾಲೆಂಜ್ ಅವರಿಗೆ ತುಸು ಕಿರಿಕಿರಿ ಉಂಟು ಮಾಡಿದೆ.
ನವದೆಹಲಿ (ಮೇ.24): ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀಡಿದ್ದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೊಸ ಚಾಲೆಂಜ್ ಅವರಿಗೆ ತುಸು ಕಿರಿಕಿರಿ ಉಂಟು ಮಾಡಿದೆ.
ಮೋದಿ ಅವರು ಕೊಹ್ಲಿ ಚಾಲೆಂಜ್ ಸ್ವೀಕರಿಸಿ ಟ್ವಿಟ್ ಮಾಡುತ್ತಿದ್ದಂತೇ ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಕೊಹ್ಲಿ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಖುಷಿಯಾಗಿದೆ, ಆದರೆ ತಮ್ಮದೊಂದು ಚಾಲೆಂಜ್ ಇದ್ದು ಅದನ್ನೂ ಸ್ವೀಕರಿಸುತ್ತೀರಿ ಎಂದು ನಂಬಿರುವುದಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ರಾಹುಲ್ ಪ್ರಧಾನಿ ಅವರಿಗೆ ನೀಡಿರುವ ಚಾಲೇಂಜ್ ಏನು ಗೊತ್ತಾ?. ಇತ್ತಿಚೀಗಷ್ಟೇ ಹೆಚ್ಚಾಗಿರುವ ತೈಲ ಬೆಲೆಯನ್ನು ಕಡಿತ ಮಾಡುವಂತೆ ರಾಹುಲ್ ಮೋದಿ ಅವರನ್ನು ಆಗ್ರಹಿಸಿದ್ದಾರೆ. ತೈಲ ಬೆಲೆ ಹೆಚ್ಚಳದಿಂದ ದೇಶದ ಜನತೆ ತತ್ತರಿಸುತ್ತಿದ್ದು, ತಮ್ಮ ಚಾಲೆಂಜ್ ಸ್ವೀಕರಿಸುವ ಮೂಲಕ ಬೆಲೆ ಇಳಿಕೆ ಮಾಡುವಂತೆ ರಾಹುಲ್ ಪ್ರಧಾನಿ ಅವರತ್ತ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.
