ನದಿ ತೀರದಲ್ಲಿ ಯುವಕ ಯುವತಿ ಇಬ್ಬರೂ ಒಂದೇ ಹಗ್ಗದಲ್ಲಿ ನೇಣಿಗೆ ಶರಣಾಗಿದ್ದಾರೆ. ಯುವಕ, ಯುವತಿ ಯಾವ ಊರಿನವರು ಎಂಬುದು ತಿಳಿದು ಬಂದಿಲ್ಲ. ನಿನ್ನೆ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. 

ವಿಜಯನಗರ(ಅ.11): ಯುವಕ- ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರ ನದಿ ತೀರದಲ್ಲಿ ಇಂದು(ಶುಕ್ರವಾರ) ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನದಿ ತೀರದಲ್ಲಿ ಯುವಕ ಯುವತಿ ಇಬ್ಬರೂ ಒಂದೇ ಹಗ್ಗದಲ್ಲಿ ನೇಣಿಗೆ ಶರಣಾಗಿದ್ದಾರೆ. ಯುವಕ, ಯುವತಿ ಯಾವ ಊರಿನವರು ಎಂಬುದು ತಿಳಿದು ಬಂದಿಲ್ಲ. ನಿನ್ನೆ(ಗುರುವಾರ) ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. 

ಬೆಂಗಳೂರು: ಕದ್ದ ಚಿನ್ನ ಭಾವನ ಮನೆಯಲ್ಲಿ ಇಟ್ಟಿದ್ದ ಬಾಮೈದ, ಅವಮಾನದಿಂದ ಕತ್ತು ಕೊಯ್ದುಕೊಂಡು ಸಾವು

ಯುವಕನ ಶರ್ಟಿನಲ್ಲಿ ದೇವರ ದರ್ಶನದ ಸಾಮಾನ್ಯ ದರ್ಶನದ ಚೀಟಿ ಸಿಕ್ಕಿದೆ. ಇವರಿಬ್ಬರೂ ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೆ ಗ್ರಾಮದಲ್ಲಿ ಹಾಗೂ ನದಿ ತೀರದಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ 

ಸದ್ಯ ಹುಡುಗನ ಮೊಬೈಲ್ ಪತ್ತೆಯಾಗಿದ್ದು ಸ್ವಿಚ್ ಆಫ್ ಆಗಿದೆ. ರಾತ್ರಿಯೆಲ್ಲ ಮಳೆ ಬಂದಿರೋ ಕಾರಣ ಫೋನ್ ಮಳೆಯಲ್ಲಿ ನೆನೆದಿದೆ ಹಾಗಾಗಿ ಆನ್ ಆಗುತ್ತಿಲ್ಲ. ಸ್ಥಳಕ್ಕೆ ಹೊಳಲು ಉಪ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.