ಸುಮನಹಳ್ಳಿ ಬಳಿ ಊಟ ಮುಗಿಸಿ ಭಾನುವಾರ ಮಧ್ಯಾಹ್ನ ಮನೆಗೆ ಮರಳುವಾಗ ಮಾರ್ಗ ಮಧ್ಯೆ ನಾಗೇಶ್ ಮೇಲೆ ರಾಸಾಯನಿಕ ಎರಚಿ ಕಿಡಿಗೇಡಿ ಪರಾರಿಯಾಗಿದ್ದಾನೆ. ಇದರ ಹಿಂದೆ ಯುವತಿಯ ಸ್ನೇಹದ ವಿಚಾರವಾಗಿ ಹುಡುಗಿಯ ಗೆಳೆಯ, ನಾಗೇಶ್ ನಡುವೆ ಮನಸ್ತಾಪ ಕಾರಣ ಎಂದು ತಿಳಿದುಬಂದಿದೆ.  

ಬೆಂಗಳೂರು(ಸೆ.24):  ಹುಡುಗಿಯ ಸ್ನೇಹದ ವಿಚಾರಕ್ಕೆ ಖಾಸಗಿ ಕಂಪನಿ ನೌಕರನ ಮೇಲೆ ರಾಸಾಯನಿಕ (ಟಾಯ್ಲೆಟ್ ಕ್ಲೀನರ್) ಎಸೆದು ದುಷ್ಕರ್ಮಿ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ. ವೃಷಭಾವತಿನಗರದ ನಿವಾಸಿ ನಾಗೇಶ್ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಅವರ ಕಣ್ಣು, ತುಟಿಗಳು ಹಾಗೂ ಎಡ ಕೈಗೆ ಸುಟ್ಟ ಗಾಯಗಳಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮನಹಳ್ಳಿ ಬಳಿ ಊಟ ಮುಗಿಸಿ ಭಾನುವಾರ ಮಧ್ಯಾಹ್ನ ಮನೆಗೆ ಮರಳುವಾಗ ಮಾರ್ಗ ಮಧ್ಯೆ ನಾಗೇಶ್ ಮೇಲೆ ರಾಸಾಯನಿಕ ಎರಚಿ ಕಿಡಿಗೇಡಿ ಪರಾರಿಯಾಗಿದ್ದಾನೆ. ಇದರ ಹಿಂದೆ ಯುವತಿಯ ಸ್ನೇಹದ ವಿಚಾರವಾಗಿ ಹುಡುಗಿಯ ಗೆಳೆಯ, ನಾಗೇಶ್ ನಡುವೆ ಮನಸ್ತಾಪ ಕಾರಣ ಎಂದು ತಿಳಿದುಬಂದಿದೆ. 

ಸೇನಾ ಅಧಿಕಾರಿಗಳ ಮೇಲೆ ದಾಳಿ, ಅವರ ಸ್ನೇಹಿತೆಯ ಮೇಲೆ ರೇಪ್‌, ಮಧ್ಯಪ್ರದೇಶದಲ್ಲಿ ಆತಂಕಕಾರಿ ಘಟನೆ

ವೃಷಭಾವತಿ ನಗರದಲ್ಲಿರುವ ದಿನೇಶ್ ಎಂಬುವವರ ಪೊಲೈನ್‌ ಇಂಡಸ್ಟ್ರೀಸ್ ಫ್ಯಾಕ್ಟರಿಯಲ್ಲಿ ಫಿಟ್ಟರ್‌ಆಗಿ ಕಲುಬರಗಿ ಜಿಲ್ಲೆಯ ನಾಗೇಶ್ ಕೆಲಸ ಮಾಡುತ್ತಿದ್ದು, ಕೈಗಾರಿಕೆ ಸಮೀಪದಲ್ಲೇ ಆತ ವಾಸವಾಗಿದ್ದರು. ಫ್ಯಾಕ್ಟರಿಗೆ ರಜೆ ಇದ್ದ ಹಿನ್ನೆಲೆ ಸುಮನಹಳ್ಳಿಯ ಬಾಲಾಜಿ ಬಾರ್‌ನಲ್ಲಿ ಭಾನುವಾರ ಮಧ್ಯಾಹ್ನ ಮದ್ಯ ಸೇವಿಸಿ, ಊಟ ಮಾಡಿಕೊಂಡು ತೋಟದ ರಸ್ತೆಯಲ್ಲಿ ಸ್ನೇಹಿತೆಯ ಜೊತೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು. ಆಗ ಹಿಂದಿನಿಂದ ಬಂದ ಅಪರಿಚಿತ ಏಕಾಏಕಿ ತನ್ನ ಕೈಯಲ್ಲಿದ್ದ ಕೆಮಿಕಲ್ಲನ್ನು ಮುಖಕ್ಕೆ ಎರಚಿ ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ ಸ್ನೇಹಿತರ ನೆರವಿನೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಗೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ್ಯಸಿಡ್ ಇರುವ ರಾಸಾಯನಿಕ 

ನಾಗೇಶ್ ಮೇಲೆ ಎಸೆದಿದ್ದು ಶೌಚಾಲಯ ಸ್ವಚ್ಛಗೊಳಿಸುವ ರಾಸಾಯನಿಕ ಎಂದು ಪತ್ತೆಯಾಗಿದೆ. ಇದರಲ್ಲೂ ಆ್ಯಸಿಡ್ ಇರುತ್ತದೆ. ಆದರೆ ಅದರ ತೀವ್ರ ಕಡಿಮೆ ಇರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ಚಹರೆ ಪತ್ತೆಗೆ ಸಂತ್ರಸ್ತ ವಿಫಲ 

ಘಟನಾ ಸ್ಥಳ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಮುಖಚಹರೆ ಪತ್ತೆಯಾಗಿದೆ. ಆದರೆ ಆತನನ್ನು ಗಾಯಾಳು ಪತ್ತೆ ಹಚ್ಚುತ್ತಿಲ್ಲ.