ವೇಶ್ಯಾವಾಟಿಕೆಯ ಆರೋಪ ಹೊರಿಸಿ ಅಕ್ಕಪಕ್ಕದ ಮನೆಯವರೇ ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೃತ್ಯದ ವಿಡಿಯೋ ಕೂಡ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಕೂಡ ಆಗಿದೆ.  ಮಾಧ್ಯಮಗಳ ಮೂಲಕ ಮಾಹಿತಿ ತಿಳಿದ ಮಾಳಮಾರುತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಬೆಳಗಾವಿ(ನ.17): ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಈಗ ಅಂತಹದ್ದೇ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆಯ ಆರೋಪ ಹೊರಿಸಿ ಅಕ್ಕಪಕ್ಕದ ಮನೆಯವರೇ ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೃತ್ಯದ ವಿಡಿಯೋ ಕೂಡ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಕೂಡ ಆಗಿದೆ. ಮಾಧ್ಯಮಗಳ ಮೂಲಕ ಮಾಹಿತಿ ತಿಳಿದ ಮಾಳಮಾರುತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಚಿಕ್ಕೋಡಿ: ಗಂಡನ ಸಂಶಯಕ್ಕೆ ಬೇಸತ್ತು ಮಗುವಿಗೆ ಚಾಕು ಇರಿದು ಕೊಂದ ತಾಯಿ!

2 ದಿನ ಅಲೆದರೂ ದೂರು ಸ್ವೀಕರಿಸದ ಪೊಲೀಸರು: 

ಸಂಬಂಧ ಇಲ್ಲದವರೆಲ್ಲರೂ ಮನೆಗೆ ಬಂದು ಹೋಗುತ್ತಿದ್ದು, ವೇಶ್ಯಾವಾಟಿಕೆ ದಂಧೆ ಮಾಡುತ್ತಿರುವ ತಾಯಿ ಮತ್ತು ಮಗಳು ಮನೆ ಬಿಡುವಂತೆ ನೆರೆಯವರು ಜಗಳ ತೆಗೆದಿದ್ದರು. ಜಗಳ ವಿಕೋಪಕ್ಕೆ ಹೋಗಿದ್ದು, ಮಹಿಳೆಯನ್ನು ಎಳೆದಾಡಿ ಬಟ್ಟೆ ಹರಿದು ಹಲ್ಲೆ ನಡೆಸಲಾಗಿದೆ. ಹಲ್ಲೆ ಬಳಿಕ ಸಂತ್ರಸ್ತೆ ದೂರು ನೀಡಲು ಮಾಳಮಾರುತಿ ಠಾಣೆಗೆ 2 ದಿನ ಅಲೆದರೂ ಪೊಲೀಸರು ದೂರು ಸ್ವೀಕರಿಸಲಿಲ್ಲ. ಹಾಗಾಗಿ, ನಮಗೆ ಜೀವ ಭಯವಿದ್ದು, ರಕ್ಷಣೆ ಕೊಡುವಂತೆ ಸಂತ್ರಸ್ತೆ ಪೊಲೀಸ್ ಆಯುಕ್ತರಿಗೆ ಮನವಿ ನೀಡಿದ್ದರು. ಬಳಿಕ ಶುಕ್ರವಾರ ರಾತ್ರಿ ಬಿಎನ್ಎಸ್ ಕಾ ಯ್ದೆಯ ಸೆಕ್ಷನ್ 115(2), 3(5), 331, 352 ಹಾಗೂ 74ರ ಅಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. 

ಸಂತ್ರಸ್ತ ಯುವತಿ ಅಳಲು: 

ವಡ್ಡರವಾಡಿಯಲ್ಲಿರುವ ನಮ್ಮ ಮನೆಯ ಜಾಗವನ್ನು ದೇವಸ್ಥಾನಕ್ಕೆ ಬರೆಸಿಕೊಳ್ಳುವ ದುರುದ್ದೇಶದಿಂದ ನೆರೆಹೊರೆಯವರೇ ನನ್ನ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಶನಿವಾರ ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.