ಹಲವು ವರ್ಷಗಳಿಂದ ರಸ್ತೆ ವಿಚಾರವಾಗಿ ಕಲಹ ಇತ್ತು. ಇಂದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಅಣ್ಣ- ತಮ್ಮಂದಿರು. ಸಂಜೆ ರಾಜಿ ಪಂಚಾಯ್ತಿ ಮಾಡೋಣ ಎಂದು ಪೊಲೀಸರು ಸಮಜಾಯಿಸಿ ಕಳುಹಿಸಿದ್ದರು. ಸಂಜೆ ಮತ್ತೆ ಗಲಾಟೆ‌ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. 

ಚಿಕ್ಕೋಡಿ(ಅ.05): ಜಮೀನಿನಲ್ಲಿ ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ನೇಜ - ಶಮನೇವಾಡಿ ರಸ್ತೆ ಬಳಿ ಇಂದು(ಶನಿವಾರ) ನಡೆದಿದೆ. ಸುನೀಲ್ ಖೋತ್ (45) ಕೊಲೆಯಾದ ದುರ್ದೈವಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸುನೀಲ್ ಖೋತ್ ಸಾವನ್ನಪ್ಪಿದ್ದಾನೆ. ಕೊಲೆಯಾದ ಸುನೀಲ್ ಶಮನೇವಾಡಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದ ನಿವಾಸಿಯಾಗಿದ್ದಾನೆ.

ಬೇಕಾ ಇಂಥಾ ಮಕ್ಕಳು? ಹೆತ್ತಮ್ಮನ ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟ ಇಬ್ಬರು ಗಂಡು ಮಕ್ಕಳು

ಹಲವು ವರ್ಷಗಳಿಂದ ರಸ್ತೆ ವಿಚಾರವಾಗಿ ಕಲಹ ಇತ್ತು. ಇಂದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಅಣ್ಣ- ತಮ್ಮಂದಿರು. ಸಂಜೆ ರಾಜಿ ಪಂಚಾಯ್ತಿ ಮಾಡೋಣ ಎಂದು ಪೊಲೀಸರು ಸಮಜಾಯಿಸಿ ಕಳುಹಿಸಿದ್ದರು. ಸಂಜೆ ಮತ್ತೆ ಗಲಾಟೆ‌ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟಟಾ ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.