ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಧು ಎಂಬುವವರ ಜೊತೆ ರಂಜಿತಾ ಅವರ ವಿವಾಹವಾಗಿತ್ತು‌. ಪತಿ ವರದಕ್ಷಿಣೆ ಕಿರುಕುಳ ನೀಡ್ತಿದ್ದ ಎಂದು ರಂಜಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಪತಿ ಮಧು ಇರುವಾಗಲೇ ರಂಜಿತಾ ನೇಣಿಗೆ ಶರಣಾಗಿದ್ದಾಳೆ. 

ಬೆಂಗಳೂರು(ಜ.23):  ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರು ಅನುಮಾನಸ್ಪದ ಸಾವನ್ನಪ್ಪಿದ ಘಟನೆ ದೊಡ್ಡ ಬಸ್ತಿ ರಸ್ತೆ ಬಳಿಯ ಬಸವೇಶ್ವರನಗರದ ಮನೆಯಲ್ಲಿ ಇಂದು(ಮಂಗಳವಾರ) ನಡೆದಿದೆ. ರಂಜಿತಾ(29) ಮೃತ ಮಹಿಳೆಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಧು ಎಂಬುವವರ ಜೊತೆ ರಂಜಿತಾ ಅವರ ವಿವಾಹವಾಗಿತ್ತು‌. ಪತಿ ವರದಕ್ಷಿಣೆ ಕಿರುಕುಳ ನೀಡ್ತಿದ್ದ ಎಂದು ರಂಜಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಪತಿ ಮಧು ಇರುವಾಗಲೇ ರಂಜಿತಾ ನೇಣಿಗೆ ಶರಣಾಗಿದ್ದಾಳೆ. 

ಶಿವಮೊಗ್ಗ ಯುವತಿಯರ ಸರಣಿ ಆತ್ಮಹತ್ಯೆ: ಮದುವೆಗೆ 13 ದಿನವಿರುವಾಗ ನೇಣಿಗೆ ಶರಣಾದ ಮದುಮಗಳು

ಪತಿ ಮಧು ಹತ್ಯೆ ನಡೆಸಿದ್ದಾನೆಂದು ರಂಜಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ವರದಕ್ಷಿಣೆ ಹಾಗೂ ಮಾನಸಿಕ ದೈಹಿಕ ಕಿರುಕುಳದ ಬಗ್ಗೆ ಪೋಷಕರ ಜತೆ ರಂಜಿತಾ ಆಗಾಗ ಹೇಳಿಕೊಳ್ತಿದ್ದರಂತೆ. ಇಂದು ಕೂಡ ಪತಿ ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಮೃತ ಮಹಿಳೆ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಿದ್ದರು. ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.