Asianet Suvarna News Asianet Suvarna News

ಶಿವಮೊಗ್ಗ ಯುವತಿಯರ ಸರಣಿ ಆತ್ಮಹತ್ಯೆ: ಮದುವೆಗೆ 13 ದಿನವಿರುವಾಗ ನೇಣಿಗೆ ಶರಣಾದ ಮದುಮಗಳು

ಮನೆ ಮಂದಿಯೆಲ್ಲಾ ಮಗಳ ಮದುವೆಗಾಗಿ ಸಂಭ್ರಮಿಸುತ್ತಿರುವಾಗ 13 ದಿನಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. 

Shivamogga marriage fixed bribe self death at Thirthahalli sat
Author
First Published Jan 21, 2024, 1:06 PM IST

ಶಿವಮೊಗ್ಗ (ಜ.21): ಮನೆ ಮಂದಿಯೆಲ್ಲಾ ಮಗಳ ಮದುವೆಯಿದೆ ಎಂದು ಸಂಭ್ರಮ ಪಡುತ್ತಿರುವಾಗ 13 ದಿನಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಮಗಳು ಮಾತ್ರ ಮನೆಯ ಪಕ್ಕದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. 

ಶಿವಮೊಗ್ಗದಲ್ಲಿ ಕಳೆದೊಂದು ತಿಂಗಳಲ್ಲಿ ಇದು ಮೂರನೇ ಯುವತಿಯ ಆತ್ಮಹತ್ಯೆ ಘಟನೆ ಸಂಭವಿಸಿದೆ. ಅದೂ ಕೂಡ ಕಾಲೇಜು ಶಿಕ್ಷಣ ಪಡೆದಿರುವ ಯುವತಿಯರೇ ನೇಣಿಗೆ ಶರಣಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಯುವತಿ ಎಂಕಾಂ ಪದವೀಧರೆಯಾಗಿದ್ದು, ಮುಂದಿನ 13 ದಿನಗಳಲ್ಲಿ ನಿಶ್ವಯವಾಗಿತ್ತು. ಮನೆಯ ಸದಸ್ಯರೆಲ್ಲರೂ ಮನೆ ಸಿದ್ಧತೆಯಲ್ಲಿದ್ದರೆ, ಮದುಮಗಳು ಮಾತ್ರ ನೇಣಿಗೆ ಶರಣಾಗಿದ್ದಾಳೆ.

ಶಿವಮೊಗ್ಗದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಲೆನಾಡಿನ ಶಮಿತಾ ಆತ್ಮಹತ್ಯೆ!

Shivamogga marriage fixed bribe self death at Thirthahalli sat

ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಚೈತ್ರ (26) ಮೃತಪಟ್ಟ ದುರ್ದೈವಿ. ಎಂ ಕಾಂ ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ  ಮೆಡಿಕಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮದುವೆಗೆ 13 ಬಾಕಿ (ಫೆಬ್ರವರಿ 4 ರಂದು) ದಿನ ಇತ್ತು. ಆದರೆ, ಇಂದು ಮನೆಯ ಸ್ನಾನದ ಕೊಠಡಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯವರೆಲ್ಲರೂ ಚೈತ್ರಳ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಚೈತ್ರಾ ಮಾನಸಿಕ ಅಸ್ವಸ್ಥತೆಯಿಂದ ಹಾಗೂ ಇತರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. 

ಇನ್ನು ಮನೆಯವರೆಲ್ಲರೂ ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಬಟ್ಟೆ ಬರೆ ಖರೀದಿ, ಚೌಟ್ರಿ ಬುಕಿಂಗ್, ಅಡುಗೆ ಸಿದ್ಧತೆ ಹಾಗೂ ಲಗ್ನ ಪತ್ರಿಕೆ ಹಂಚಿಕೆಯೂ ಆರಂಭಿಸಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಮನೆಯಲ್ಲಿ ನಿನ್ನೆ ರಾತ್ರಿ ಮದುವೆ ಬೇಡ ಎಂದು ಚೈತ್ರಾ ಹೇಳಿದ್ದಳಂತೆ. ಎಲ್ಲ ಸಿದ್ಧತೆ ಮಾಡಿಕೊಂಡಿರುವಾಗ ಮದುವೆ ಬೇಡವೆಂದರೆ ಹೇಗೆ? ಮದುವೆಯಾದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಮನೆಯವರು ಸಮಾಧಾನ ಮಾಡಿದ್ದರಂತೆ. ಆದರೆ, ಮನೆಯವರ ಮಾತನ್ನು ಕೇಳದ ಚೈತ್ರಾ ರಾತ್ರಿ ವೇಳೆ ನೇಣಿಗೆ ಕೊರಳು ಒಡ್ಡಿದ್ದಾರೆ ಎಂದು ಹೇಳಲಾಗುತ್ತಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Shivamogga ಅರಳುವ ಮುನ್ನವೇ ಕಮರಿದ ಮಲೆನಾಡಿನ ಹೂವು: 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣು!

Shivamogga marriage fixed bribe self death at Thirthahalli sat

ರಿಪ್ಪನ್‌ಪೇಟೆಯ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ:
ಶಿವಮೊಗ್ಗ (ಜ.10): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ರಿಪ್ಪನ್‌ಪೇಟೆ ಪಟ್ಟಣದಲ್ಲಿ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಶಾಲಾ ಬಾಲಕಿಯೊಬ್ಬಳು ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆ ರಿಪ್ಪನ್‌ಪೇಟೆ ಪಟ್ಟಣದ  ಪ್ರೌಡಶಾಲೆಯಲ್ಲಿ 9ನೇ ತರಗತಿ ಓದುತಿದ್ದಳು. 15 ವರ್ಷದ ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡಿದ್ದಾಲೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್  ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿತ್ತು.

Follow Us:
Download App:
  • android
  • ios