ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕುಟುಂಬದ ಜೊತೆ ಓಣಂ ಹಬ್ಬದ ಸದ್ಯ ಸವಿದಿದ್ದಾರೆ. ಈ ಕುರಿತ ಫೋಟೋ ಪೋಸ್ಟ್ ಮಾಡಿ ಗೂಗ್ಲಿ ಹಾಕಿದ್ದಾರೆ. ಹಲವರು ಫೋಟೋ ಝೂಮ್ ಮಾಡಿ ಸಚಿನ್ ಪ್ರಶ್ನೆಗೆ ಉತ್ತರ ಕಂಡು ಹಿಡಿದಿದ್ದಾರೆ.

ಮುಂಬೈ (ಆ.27) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕುಟುಂಬದ ಜೊತೆ ಓಣಂ ಹಬ್ಬದ ಆಹಾರ ಸವಿದಿದ್ದಾರೆ. ಕುಟುಂಬಸ್ಥರು, ಆಪ್ತರ ಜೊತೆಗೆ ಖಾದ್ಯಗಳನ್ನು ಸವಿದ ಫೋಟೋವನ್ನು ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್, ಕುತೂಹಲದ ಪ್ರಶ್ನೆಯನ್ನು ಕೇಳಿದ್ದಾರೆ. ಸಚಿನ್ ಪ್ರಶ್ನೆಗೆ ಉತ್ತರ ಹುಡುಕುಲ ಅಭಿಮಾನಿಗಳು ಫೋಟೋ ಝೂಮ್ ಮಾಡಿದ್ದಾರೆ. ಇಷ್ಟೇ ಅಲ್ಲ ಉತ್ತರವನ್ನು ನೀಡಿದ್ದಾರೆ.

ಕ್ರಿಕೆಟ್‌ನಿಂದ ವಿದಾಯ ಹೇಳಿದ ಬಳಿಕ ಹಲವು ಸ್ಟಾರ್ಟ್ಅಪ್ ಉದ್ಯಮದಲ್ಲಿ ಸಚಿನ್ ತೆಂಡೂಲ್ಕರ್ ತೊಡಗಿಸಿಕೊಂಡಿದ್ದಾರೆ. ಇನ್ನು ಹಲವು ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಗಳಲ್ಲೂ ಸಚಿನ್ ತೆಂಡೂಲ್ಕರ್ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಸಚಿನ್ ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದೀಗ ಓಣಂ ಹಬ್ಬದ ಪ್ರಯುಕ್ತ ಸದ್ಯ ಸವಿದು ಆಸ್ವಾದಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿನ್ , ಓಣಂ ಹಬ್ಬದ ಊಟ, ಕುಟುಂಬದ ಜೊತೆ ಸಮಯ ಕಳೆಯುವ ಮೂಲಕ ಪೋಸ್ಟ್ ಮಾಡಲು ಕೊಂಚ ವಿಳಂಬವಾಯಿತು ಎಂದು ಹೇಳಿಕೊಂಡಿದ್ದಾರೆ.

ಸಚಿನ್ ಹಾಕಿದ ಗೂಗ್ಲಿ ಏನು?

ಕುಟುಂಬದ ಜೊತೆ ಓಣಂ ಹಬ್ಬದ ಸದ್ಯ ಸವಿಯುತ್ತಿರುವ ಫೋಟೋವನ್ನು ಸಚಿನ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬೌನ್ಸರ್‌ನ್ನು ಗುರುತಿಸುವ ವ್ಯಕ್ತಿಗೆ ಹೆಚ್ಚುವರಿ ಸ್ವೀಟ್ ನೀಡಲಾಗುತ್ತದೆ ಎಂದು ಸಚಿನ್ ಗೂಗ್ಲಿ ಹಾಕಿದ್ದಾರೆ. ಸಚಿನ್ ಈ ಪ್ರಶ್ನೆ ಹಾಕುತ್ತಿದ್ದಂತೆ ಹಲವರು ಚಿತ್ರದಲ್ಲಿ ಬೌನ್ಸರ್ ಯಾರು ಎಂದು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಕುಟುಂಬದ ಆಪ್ತರಲ್ಲಿ ಯಾರೂ ಕೂಡ ಬೌನ್ಸರ್ ರೀತಿ ಕಾಣಿಸುತ್ತಿಲ್ಲ. ಹೀಗಾಗಿ ಫೋಟೋ ಝೂಮ್ ಮಾಡಿ ನೋಡಿದ್ದಾರೆ.

ಉತ್ತರ ಹುಡುಕಿದ ಫ್ಯಾನ್ಸ್

ಸಚಿನ್ ಕೇಳಿದ ಪ್ರಶ್ನೆಗೆ ಫ್ಯಾನ್ಸ್ ಉತ್ತರ ಹುಡುಕಿದ್ದಾರೆ. ಸಚಿನ್ ಹಾಗೂ ಕುಟುಂಬಸ್ಥರು ಊಟ ಮಾಡುವ ಟೇಬಲ್ ಕೆಳಗೆ ಮುದ್ದಿನ ನಾಯಿ ಕುಳಿತಿದೆ. ಇದೇ ಸಾಕು ನಾಯಿಯನ್ನು ಸಚಿನ್ ಬೌನ್ಸರ್ ಎಂದು ಕರೆದಿದ್ದಾರೆ. ಈ ಬೌನ್ಸರ್ ಗುರಿತಿಸುವವರಿಗೆ ಸ್ವೀಟ್ ನೀಡುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ತಕ್ಷಣವೇ ಫೋಟೋ ಜೂಮ್ ಮಾಡಿ ಬೌನ್ಸರ್ ಗುರುತಿಸಿದ್ದಾರೆ.

ಇದೇ ವೇಳೆ ಅಭಿಮಾನಿಗಳು ಕ್ಲಿಷ್ಟಕರ ಪ್ರಶ್ನೆ ಕೇಳುವಂತೆ ಸಚಿನ್‌ಗೆ ಸಲಹೆ ನೀಡಿದ್ದಾರೆ. ಸಚಿನ್ ಕುಟುಂಬದ ಫೋಟೋದಲ್ಲಿ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸೊಸೆ ಸಾನಿಯಾ ಚಂದೋಕ್ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಇವರಿಬ್ಬರು ಎಲ್ಲಿ ಎಂದು ಪ್ರಶ್ನಿಸಿದ್ದಾರೆ.