ಎಂಎಸ್ ಧೋನಿ ಫ್ಯಾನ್ಸ್‌ಗೆ ಮತ್ತೆ ನಿರಾಸೆಯಾಗುವ ಎಲ್ಲಾ ಸಾಧ್ಯತೆ ಇದೆ. 2027ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಡೋದು ಬಹುತೇಕ ಅನುಮಾನ. ಕಾರಣ ಇಂದು ಬಿಸಿಸಿಐ ಇಂಪಾಕ್ಟ್ ಪ್ಲೇಯರ್ ನೀತಿ ಕುರಿತು ಮಹತ್ವದ ನಿರ್ಣಣಯ ತೆಗೆದುಕೊಳ್ಳಲಿದೆ.
ಮುಂಬೈ (ಆ.31) ಐಪಿಎಲ್ 2027ರ ಟೂರ್ನಿಗೆ ಫ್ರಾಂಚೈಸಿಗಳು ಭಾರಿ ತಯಾರಿ ನಡೆಸುತ್ತಿದೆ. ಧೋನಿ ಬ್ಯಾಟಿಂಗ್ ನೋಡಲು ಕಾದಿದ್ದ ಅಭಿಮಾನಿಗಳಿಗೆ ಕಳೆದ ವರ್ಷ ನಿರಾಸೆಯಾಗಿತ್ತು. ಇಂಜುರಿ ಕಾರಣದಿಂದ ಧೋನಿ ಆಡಿರಲಿಲ್ಲ. ಇದೀಗ ಈ ಬಾರಿ ಧೋನಿಗೆ ಮೈದಾನಕ್ಕಿಳಿಯಲು ಇದ್ದ ಕೊನೆಯ ಒಂದು ನೀತಿಯನ್ನು ಬಿಸಿಸಿಐ ಬದಲಿಸುವ ಸಾಧ್ಯತೆ ದೆಟ್ಟವಾಗಿದೆ. ಇಂದು ಬಿಸಿಸಿಐ ಐಪಿಎಲ್ ಇಂಪಾಕ್ಟ್ ಪ್ಲೇಯರ್ ನೀತಿ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಇಂದು ಸಂಜೆಯೊಳಗೆ 10 ಫ್ರಾಂಚೈಸಿಗಳಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಿದೆ.
2027ರ ಐಪಿಎಲ್ ಟೂರ್ನಿ ವೇಳೆ ಧೋನಿ ವಯಸ್ಸು 45. ಧೋನಿ ಕಳೆದ ಕೆಲ ವರ್ಷಗಳಿಂದ ಇಂಪಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುತ್ತಿದ್ದರು. ಕಳೆದ ಆವೃತ್ತಿಯಲ್ಲಿ 4 ಕೋಟಿ ರೂಪಾಯಿ ನೀಡಿ ಅನ್‌ಕ್ಯಾಪ್ಡ್ ಪ್ಲೇಯರ್ ಲಿಸ್ಟ್‌ನಲ್ಲಿ ಧೋನಿ ಉಳಿಸಿಕೊಂಡಿತ್ತು. ಬಳಿಕ ಇಂಪಾಕ್ಟ್ ಪ್ಲೇಯರ್ ಮೂಲಕ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ 10 ಫ್ರಾಂಚೈಸಿಗಳಿಂದ ಇಂಪಾಕ್ಟ್ ಪ್ಲೇಯರ್ ಕುರಿತು ಅಭಿಪ್ರಾಯ ಕೇಳಿೆ. ಇಂದು 10 ಫ್ರಾಂಚೈಸಿಗಳು ಅಭಿಪ್ರಾಯ ಹಂಚಿಕೊಳ್ಳಲಿದೆ.
ಇಂಪಾಕ್ಟ್ ಪ್ಲೇಯರ್ ನೀತಿಗೆ ಈಗಾಗಲೇ ರೋಹಿತ್ ಶರ್ಮಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ 2027ರ ಐಪಿಎಲ್ ಟೂರ್ನಿಯಲ್ಲಿ ಇಂಪಾಕ್ಟ್ ಪ್ಲೇಯರ್ ನೀತಿ ರದ್ದಾಗುವ ಸಾಧ್ಯತೆ ಇದೆ. ಹೀಗಾದರೆ ಧೋನಿಗೆ ಆಡೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಕೈತಪ್ಪಲಿದೆ. ಹೀಗಾಗಿ ಧೋನಿ ವಿದಾಯದ ಪಂದ್ಯ ಆಡದೇ ಚೆನ್ನೇ ಸೂಪರ್ ಕಿಂಗ್ಸ್ ತಂಡದಿಂದ ದೂರ ಸರಿಯುವ ಸಾಧ್ಯತೆ ಇದೆ.
ಪಾಲು ಕೇಳಿದ್ರಾ ಎಂಎಸ್ ಧೋನಿ
ಸಿಎಸ್‌ಕೆ ತಂಡಕ್ಕೆ ಕೆಲ ವರ್ಷಗಳ ಮೊದಲೇ ವಿದಾಯ ಹೇಳಲು ಮುಂದಾಗಿದ್ದ ಧೋನಿ ನಿರ್ಧಾರಕ್ಕೆ ಸಿಎಸ್‌ಕೆ ಫ್ರಾಂಚೈಸಿ ಬ್ರೇಕ್ ಹಾಕಿತ್ತು ಎನ್ನಾಲಾಗಿದೆ. ಆಡದಿದ್ದರೂ ತಂಡದ ಜೊತೆ ಇರುವಂತೆ ಸೂಚಿಸಿತ್ತು. ಸಿಎಸ್‌ಕೆ ಬ್ರ್ಯಾಂಡ್ ವ್ಯಾಲ್ಯೂ ಧೋನಿಯೇ ಆಗಿದ್ದ ಕಾರಣ ಸಿಎಸ್‌ಕೆ ಫ್ರಾಂಚೈಸಿ ಧೋನಿಗೆ ಫ್ರಾಂಚೈಸಿಯಲ್ಲಿ ಪಾಲು ನೀಡುವಂತೆ ಸೂಚಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ ಕಳೆದ ಎರಡು ವರ್ಷದಿಂದ ಧೋನಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇಷ್ಟೇ ಅಲ್ಲ ಸಿಎಸ್‌ಕೆ ತಂಡದ ನಿಧಾನವಾಗಿ ಧೋನಿ ಬ್ರ್ಯಾಂಡ್ ನೇಮ್‌ನಿಂದ ಹೊರಬರುತ್ತಿದೆ. ಇತ್ತ ಧೋನಿ ತಂಡದಲ್ಲಿ ಶೇಕಡಾ 25ರಷ್ಟು ಪಾಲು ಕೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಪಾಲು ನೀಡಲು ಸಿಎಸ್‌ಕೆ ತಯಾರಿಲ್ಲ, ಹೀಗಾಗಿ ಜಪಾಪಟಿಗಳು ಶುರುವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.


