ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಮಸ್ಯೆಗಳು ತೀವ್ರಗೊಂಡಿದೆ. ಹಾರ್ದಿಕ್ ಪಾಂಡ್ಯ ಟ್ರೇಡ್ ಸಮಸ್ಯೆ ತೀವ್ರಗೊಳ್ಳುತ್ತಿದೆ. ಟ್ರೋಫಿ ಇಲ್ಲದೆ ನಿರಾಸೆ ಅನುಭವಿಸುತ್ತಿರುವ ಮುಂಬೈ ಇದೀಗ ಮತ್ತೆ ರೋಹಿತ್ ಶರ್ಮಾ ಮೊರೆ ಹೋಗಿದೆ.
ಮುಂಬೈ (ಸೆ.01) ಐಪಿಎಲ್ 2027ರ ಟೂರ್ನಿಗೆ ಫ್ರಾಂಚೈಸಿಗಳ ತಯಾರಿಗಳು ನಡೆಯುತ್ತಿದೆ. ಇದರ ನಡುವೆ ಕಳೆದ ಕೆಲ ವರ್ಷಗಳಿಂದ ಟ್ರೋಫಿ ಇಲ್ಲದೆ ಸೊರಗಿರುವ ಮುಂಬೈ ಇಂಡಿಯನ್ಸ್ ಸಮಸ್ಯೆಗಳು ಹೆಚ್ಚುತ್ತಿದೆ. ಒಂದೆಡೆ ತಂಡದಿಂದ ಹೊರಹೋಗಲು ಮುಂದಾಗಿರುವ ಹಾರ್ದಿಕ್ ಪಾಂಡ್ಯ ಟ್ರೇಡ್ ಸಮಸ್ಯೆಯಾಗಿದೆ. ಹೀಗಾಗಿ ಹಾರ್ದಿಕ್ ತಂಡದಲ್ಲಿ ಉಳಿಯುವ ಸಾಧ್ಯತೆ ಇದೆ. ಹಾರ್ದಿಕ್ ತಂಡದಲ್ಲಿದ್ದರೂ ನಾಯಕತ್ವ ಬದಲಿಸಲು ಮುಂಬೈ ಇಂಡಿಯನ್ಸ್ ಮುಂದಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಮತ್ತೆ ಮಾಜಿ ನಾಯಕ ರೋಹಿತ್ ಶರ್ಮಾ ಮೊರೆ ಹೋಗಿದೆ.
ಮುಂಬೈಗೆ ಹೊಸ ನಾಯಕ
ಮುಂಬೈ ಇಂಡಿಯನ್ಸ್ 2027ರ ಐಪಿಎಲ್ ಟೂರ್ನಿಗೆ ಹೊಸ ನಾಯಕನ ನೇಮಕ ಮಾಡಲು ಮುಂದಾಗಿದೆ. ಆದರೆ ರೋಹಿತ್ ಶರ್ಮಾ ಮತ್ತೆ ನಾಯಕತ್ವ ವಹಿಸಿಕೊಳ್ಳಲು ಸಿದ್ದರಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ನಾಯಕತ್ವ ನೇಮಕ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ನೀಡಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಇದೀಗ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕನ ನೇಮಕ ಮಾಡಲಿದ್ದಾರೆ. ರೋಹಿತ್ ಸೂಚಿಸುವ ಹೆಸರು ಬಹುತೇಕ ಫೈನಲ್ ಆಗಲಿದೆ.
ಜಸ್ಪ್ರೀತ್ ಬುಮ್ರಾ ಹಾಗೂ ತಿಲಕ್ ವರ್ಮಾ
ಮುಂಬೈ ಇಂಡಿಯನ್ಸ್ ನಾಯಕತ್ವ ರೇಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ತಿಲಕ್ ವರ್ಮಾ ಇದ್ದಾರೆ. ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ನೀಡಲು ಮುಂಬೈ ಇಂಡಿಯನ್ಸ್ ಹೆಚ್ಚು ಆಸಕ್ತಿ ತೋರಿದೆ. ಹೀಗಾಗಿ ತಿಲಕ್ ವರ್ಮಾ ಮೇಲೆ ಫ್ರಾಂಚೈಸಿ ಒಲವು ತೋರಿದೆ. ಆದರೆ ರೋಹಿತ್ ಶರ್ಮಾ ಯಾರ ಹೆಸರು ಸೂಚಿಸುತ್ತಾರೆ ಅನ್ನೋದು ರಹಸ್ಯವಾಗಿದೆ.
ಸೂರ್ಯಕುಮಾರ್‌ಗೆ ನಿರಾಸೆ
ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ಹಾಗೂ ತಂಡದಿಂದಲೇ ಹೊರಬಿದ್ದ ಬಳಿಕ ಸೂರ್ಯಕುಮಾರ್ ಯಾದವ್‌ಗೆ ಮತ್ತೊಂದು ನಿರಾಸೆ ಎದುರಾಗುತ್ತಿದೆ. ಮುಂಬೈ ಇಂಡಿಯನ್ಸ್ ಹೊಸ ನಾಯಕನ ಹುಡುಕಾಟದಲ್ಲಿ ಸೂರ್ಯಕುಮಾರ್ ಯಾದವ್ ಹೆಸರಿಲ್ಲ ಎಂದು ವರದಿಯಾಗಿದೆ. ಆದರೆ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಅವರನ್ನು ರಿಟೇನ್ ಮಾಡಲಿದೆ ಎಂದು ವರದಿಯಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ದನೆ ಮುಂದುವರಿಯಲಿದ್ದಾರೆ. 2027ರ ಐಪಿಎಲ್ ಆವೃತ್ತಿಗೆ ಮಹೇಲಾ ಜಯವರ್ದನೆ ಕೋಚ್ ಆಗಿ ಮುಂದುವರಿಯಲಿದ್ದಾರೆ. ಬಳಿಕ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.


