ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿ ಆಯೋಜನೆಗೊಂಡಿದೆ. ಸೆಪ್ಟೆಂಬರ್ 13 ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಈ ಸರಣಿಯಲ್ಲಿ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ಇದು ಮುಂಬರುವ ಏಷ್ಯನ್ ಗೇಮ್ಸ್‌ಗೆ ಪೂರ್ವಭಾವಿ ಪಂದ್ಯವಾಗಿರಲಿದೆ.

ಭಾರತ-ಆಫ್ಘಾನಿಸ್ತಾನ ಟಿ20 ಸರಣಿ 2026: ವೇಳಾಪಟ್ಟಿ, ತಂಡಗಳು, ದಿನಾಂಕ, ಸಮಯದ ಸಂಪೂರ್ಣ ಮಾಹಿತಿ

ಬೆಂಗಳೂರು: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಟೂರ್ನಿಗೆ ಆಫ್ಘಾನಿಸ್ತಾನವೇ ಆತಿಥ್ಯ ವಹಿಸಿದ್ದರೂ, ಈ ಮೂರು ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ. ನವದೆಹಲಿಯ ಅರುಣ್ ಜೇಟ್ಲೀ ಮೈದಾನದಲ್ಲಿ ಸೆಪ್ಟೆಂಬರ್ 13, ಸೆ.15, ಸೆ.17ಕ್ಕೆ ಪಂದ್ಯಗಳು ನಡೆಯಲಿವೆ.

ಈ ಮೊದಲು ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಒಂದು ಟೆಸ್ಟ್ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಿದ್ದವು. ಇದೀಗ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಗೊಂಡಿದೆ. ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗೂ ಮುನ್ನ ಈ ಸರಣಿಯನ್ನು ವಾರ್ಮ್ ಅಪ್ ಮ್ಯಾಚ್‌ ಆಗಿ ಭಾರತ ಬಳಸಿಕೊಳ್ಳುವ ಸಾಧ್ಯತೆಯಿದೆ.

ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ, ದಿನಾಂಕ, ಸಮಯ:

ಮೊದಲ ಟಿ20 ಪಂದ್ಯ: ಭಾನುವಾರ, 13 ಸೆಪ್ಟೆಂಬರ್ 2026

ಎರಡನೇ ಟಿ20 ಪಂದ್ಯ: ಮಂಗಳವಾರ, 15 ಸೆಪ್ಟೆಂಬರ್ 2026

ಮೂರನೇ ಟಿ20 ಪಂದ್ಯ: ಗುರುವಾರ, 17 ಸೆಪ್ಟೆಂಬರ್ 2026

ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.

ಸೋನಿ ತೆಕ್ಕೆಗೆ ಅಫ್ಘಾನಿಸ್ತಾನ ಸರಣಿಯ ನೇರ ಪ್ರಸಾರ ಹಕ್ಕು

ಸೆ.13ರಿಂದ ಅರಂಭವಾಗಲಿರುವ ಭಾರತ-ಅಪ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಟಿ.ವಿ. ನೇರ ಪ್ರಸಾರದ ಹಕ್ಕು ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌ ಪಾಲಾಗಿದೆ. ಟೀಂ ಇಂಡಿಯಾವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ. ಅಫ್ಘಾನಿಸ್ತಾನ ನಾಯಕತ್ವ ಜವಾಬ್ದಾರಿಯನ್ನು ಇಬ್ರಾಹಿಂ ಜದ್ರಾನ್ ವಹಿಸಿಕೊಂಡಿದ್ದಾರೆ.

ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:

ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.

ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:

ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್‌ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್‌ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್‌ಝೈ, ನವೀನ್ ಉಲ್ ಹಕ್