ಶೋಯೆಬ್ ಅಕ್ತರ್ ಬೌಲಿಂಗ್ ರನ್ ಅಪ್ ಲಾಂಗ್ ಆಗಿತ್ತು. ಆದರೆ ಇದೀಗ ಎಲ್ಲರನ್ನು ಮೀರಿಸಿ ಬರೋಬ್ಬರಿ 100 ಕಿಲೋಮೀಟರ್ ಓಡಿ ಒಂದು ಬಾಲ್ ಹಾಕಿದ್ದಾನೆ. ಈ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ. ಏನಿದು ಹೊಸ ರೆಕಾರ್ಡ್

ಲಂಡನ್ (ಸೆ.03) ಶೋಯೆಬ್ ಅಕ್ತರ್ ಬೌಲಿಂಗ್ ರನ್ನಪ್ ನೋಡಿ ಹಲವರು ಸುಸ್ತಾಗುತ್ತಿದ್ದರು. ದೂರದಿಂದ ಓಡಿ ಬಂದು ಅಕ್ತರ್ ಬೌಲಿಂಗ್ ಮಾಡುತ್ತಿದ್ದರು. ಆದರೆ ಇದೀಗ ಕ್ರಿಕೆಟ್‌ನಲ್ಲಿ ಗಿನ್ನಿಲ್ ವರ್ಲ್ಡ್ ರೆಕಾರ್ಡ್ ಸೃಷ್ಟಿಯಾಗಿದೆ. ಈತ ಒಂದು ಬಾಲ್ ಹಾಕಲು ಬರೋಬ್ಬರಿ 100 ಕಿಲೋಮೀಟರ್, ಸರಿಸುಮಾರು ಬೆಂಗಳೂರಿನಿಂದ ಮೈಸೂರ ಹತ್ತಿರ ಹತ್ತಿರದಷ್ಟು ದೂರ ರನ್ನಪ್ ತೆಗೆದುಕೊಂಡು ಬೌಲಿಂಗ್ ಮಾಡಿದ್ದಾನೆ. ಇದೀಗ ಸುದೀರ್ಘ ಬೌಲಿಂಗ್ ಲೈನ್ ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದಾಖಲೆಯನ್ನು ಮುರಿಯುವುದು ಅಸಾಧ್ಯವಾಗಿದೆ.

ಏನಿದು ವಿಚಿತ್ರ ದಾಖಲೆ

ಸರ್ರೆ ಇಂಗ್ಲೆಂಡ್‌ನ ಸ್ಯಾಮ್ ಬೋಡಿಯಾನೋ ಈ ದಾಖಲೆ ಬರೆದಿದ್ದಾನೆ. ಉತ್ತರ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ಬಳಿಯಿಂದ ರನ್ನಪ್ ಶುರು ಮಾಡಿ ವೋಕಿಂಗ್‌ನ ವ್ಯಾಲಿ ಎಂಡ್ ಕ್ರಿಕೆಟ್ ಕ್ಲಬ್ ಮೈದಾನಕ್ಕೆ ಬಂದು ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾನೆ. ಬರೋಬ್ಬರಿ 100 ಕಿಲೋಮೀಟರ್ ಓಡಿ ಬಂದು ಬೌಲಿಂಗ್ ಮಾಡಿದ್ದಾನೆ. ಈತನ ರನ್ನಪ್‌ಗೆ ತೆಗೆದುಕೊಂಡ ಸಮಯ ಬರೋಬ್ಬರಿ 14 ಗಂಟೆ.

100 ಕಿ.ಮಿ ಓಡಿ ಬೌಲಿಂಗ್ ಮಾಡಿದ್ದು ಯಾಕೆ?

ಬೋಡಿಯಾನೋ ತನ್ನ ಮನೆಯಿಂದ ಬೌಲಿಂಗ್ ಮಾಡಲು ಓಟ ಆರಂಭಿಸಿದ್ದಾರೆ. 100 ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ರಾತ್ರಿ ಬೋಡಿಯಾನೋ ರೆಡ್ ಬಾಲ್ ಕೈಯಲ್ಲಿ ಹಿಡಿದು ರನ್ ಅಪ್ ಆರಂಭಿಸಿದ್ದರು. 100 ಕಿಲೋಮೀಟರ್ ಸಾಗಿ ವ್ಯಾಲಿ ಎಂಡ್ ಕ್ರಿಕೆಟ್ ಕ್ಲಬ್ ಮೈದಾನಕ್ಕೆ ಓಡೋಡಿ ಬಂದು ಬೌಲಿಂಗ್ ಮಾಡಿದ್ದಾನೆ. 100 ಕಿಲೋಮೀಟರ್ ದೂರವನ್ನು 14 ಗಂಟೆಯಲ್ಲಿ ಕ್ರಮಿಸಿ ಬೌಲಿಂಗ್ ಮಾಡಿದ್ದಾನೆ. ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ದೂರದ ರನ್ಅಪ್ ದಾಖಲೆ ಬರೆಯಲು 100 ಕಿಲೋಮೀಟರ್ ಓಡಿ ಬೌಲಿಂಗ್ ಮಾಡಿದ್ದಾನೆ.

ಸರಿಸುಮಾರು 75 ಕಿಲೋಮೀಟರ್ ಓಡಿ ಬೌಲಿಂಗ್ ಮಾಡಲು ಬೋಡಿಯಾನೋ ನಿರ್ಧರಿಸಿದ್ದರು. ಬಳಿಕ 100 ಕಿಲೋಮೀಟರ್ ದೂರಕ್ಕೆ ಏರಿಕೆ ಮಾಡಿ ಬೌಲಿಂಗ್ ಮಾಡಿದ್ದರು. ವ್ಯಾಲಿ ಎಂಡ್ ಮೈದಾನಕ್ಕೆ ಬಂದು ಒಂದು ಬೌಲಿಂಗ್ ಹಾಕಿ ದಾಖಲೆ ನಿರ್ಮಿಸಿದ್ದಾನೆ. ಬೋಡಿಯಾನೋ ಸಾಧನೆ ನೋಡಲು ಅಭಿಮಾನಿಗಳು ತುಂಬಿದ್ದರು. ರಸ್ತೆ ಬದಿಯಲ್ಲೂ ಅಭಿಮಾನಿಗಳು ತುಂಬಿಕೊಂಡಿದ್ದರು.

ಗಿನ್ನೆಸ್ ದಾಖಲೆಗೆ ಬೋಡಿಯಾನೋ ಸಂಭ್ರಮ

ಲಾಂಗೆಸ್ಟ್ ರನ್ಅಪ್ ಟು ಬೌಲ್ ದಾಖಲೆ ಬರೆಯಲು ನಾನು ಎಲ್ಲಾ ತಯಾರಿ ಮಾಡಿಕೊಂಡಿದ್ದೆ. ಕ್ರಿಕೆಟ್‌ನಲ್ಲಿ ಅಪರೂಪದ ಹಾಗೂ ಯಾರೂ ಮಾಡಿದರದ ದಾಖಲ ಮಾಡಲು ಬಯಸಿದ್ದೆ.ನಾನು ಅಂದುಕೊಂಡತೆ ಆಗಿದೆ. ಇದೀಗ ನನ್ನ ಹೆಸರು ಗಿನ್ನೆಸ್ ದಾಖಲೆ ಪಟ್ಟಿಯಲ್ಲಿದೆ ಎಂದು ಬೋಡಿಯಾನೋ ಹೇಳಿದ್ದಾರೆ.