ಬೆಂಗಳೂರು(ಮಾ.28): ಭಾರತವನ್ನು ಲಾಕ್‌ಡೌನ್‌ ಮಾಡಿದರೂ ಜನರೂ ಓಡಾಡುತ್ತಿರುವುದು ಇದೀಗ ಆತಂಕ ಹೆಚ್ಚಿಸಿದೆ. ಹೀಗಾಗಿ ಎಲ್ಲೆಡೆ ಕಟ್ಟೆಟ್ಟರ ವಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಮೂಲಕ ಕೊರೋನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಇತ್ತ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು, ಕೂಲಿ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವವರಿಗೆ ನೆರವಾಗಲು ಸಂಸದ ರಾಜೀವ್ ಚಂದ್ರಶೇಖರ್ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಸೇರಿ ನೆರವಿನ ಹಸ್ತ ಚಾಚಿದ್ದಾರೆ. ಇದೀಗ ರಾಜೀವ್ ಚಂದ್ರಶೇಖರ್ ಅವರ ಹೋರಾಟಕ್ಕೆ ಮತ್ತಷ್ಟು ವೇಗ ಸಿಕ್ಕಿದೆ.

ಕೊರೋನಾ ಸಂತ್ರಸ್ಥರ ನೆರವಿಗೆ 2 ಕೋಟಿ ರುಪಾಯಿ ನೀಡಿದ ಸಂಸದ ರಾಜೀವ್ ಚಂದ್ರಶೇಖರ್

ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಇದೀಗ ಬೆಂಗಳೂರು ಪೊಲೀಸರು ಕೈಜೋಡಿಸಿದ್ದಾರೆ. ಸ್ಲಂ ನಿವಾಸಿಗಳಿಗೆ, ನಿರ್ಗತಿಕರಿಗೆ ಆಹಾರ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ ನಮ್ಮ ಬೆಂಗಳೂರು ಫೌಂಡೇಶನ್‌ಗೆ ಎಲ್ಲಾ ನೆರವು ನೀಡಲು ಬೆಂಗಳೂರು ಪೊಲೀಸರು ಮುಂದೆ ಬಂದಿದ್ದಾರೆ. ಈ ಕುರಿತು ಕರ್ನಾಟಕ ಡಿಜಿಪಿ ಟ್ವಿಟರ್ ಖಾತೆ ಮೂಲಕ ಪೊಲೀಸ್ ಇಲಾಖೆ ಅಧೀಕೃತ ಸಂದೇಶ ರವಾನಿಸಿತ್ತು. ಬೆಂಗಳೂರು ಪೊಲೀಸರ ನಿರ್ಧಾರವನ್ನು ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

 

ಭಾರತ ಲಾಕ್‌ಡೌನ್‌: ವ್ಯಾಪಾರಸ್ಥರಿಂದ ದುರುಪಯೋಗ, ಗ್ರಾಹಕರ ಜೇಬಿಗೆ ಕತ್ತರಿ

ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ಬೆಂಗಳೂರು ಸಿಟಿ ಪೊಲೀಸ್ ಜೊತೆಯಾಗಿ ಮುನ್ನಡೆಯುತ್ತಿರುವುದು ಅತ್ಯುತ್ತಮ ಫಾರ್ಟ್ನರ್‌ಶಿಪ್ ಆಗಿದೆ. ಕೊರೋನಾ ವೈರಸ್ ಶಾಕ್‌ಗೆ ಒಳಗಾಗಿರುವ ನಿರ್ಗತಿಕರಿಗೆ, ಬಡವರಿಗೆ, ಅವಶ್ಯಕತೆ ಇದ್ದವರಿಗೆ ನಾವು ಜೊತೆಯಾಗಿ ನೆರವಾಗೋಣ. ಒಳಿತಾಗಿ ಉತ್ತಮ ಕೆಲಸ, ಪ್ರಚಾರಕ್ಕಲ್ಲ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಭಾರತ ಲಾಕ್‌ಡೌನ್ ಆದೇಶ ಹೊರಬಿದ್ದ ಬಳಿಕ ನಮ್ಮ ಬೆಂಗಳೂರು ಫೌಂಡೇಶನ್ ನಿರ್ಗತಿಕರ ನೆರವಿಗೆ ನಿಂತಿತ್ತು. ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳನ್ನ ಕೈಗೆತ್ತಿಕೊಂಡು ಬೆಂಗಳೂರಿನ ಅತ್ಯುತ್ತಮ NGO ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಸಂಸದ ರಾಜೀವ್ ಚಂದ್ರಶೇಖರ್ ಕೈಜೋಡಿಸಿದ್ದರು. ಈ ಕುರಿತು ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು.

ಬೆಂಗಳೂರಿನಲ್ಲಿ ಹಲವು NGO ಸಂಸ್ಥೆಗಳಿವೆ. ಇದರಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ನಾನು ಕೈಜೋಡಿಸುತ್ತಿದ್ದೇನೆ. ಈ ಮೂಲಕ ಸ್ಲಂ ನಿವಾಸಿಗಳು, ನಿರ್ಗತಿಕರು, ಬಡವರಿಗೆ ಆಹಾರ ವಿತರಣೆ ಸೇರಿದಂತೆ ಅಗತ್ಯ ವಸ್ತು ವಿತರಿಸಲಾಗುವುದು ಎಂದು ಟ್ವೀಟ್ ಮಾಡಿದ್ದರು.

 

ಬೆಂಗಳೂರಿನ ವಿಕ್ಟೋರಿಯಾ ಆಸ್ಫತ್ರೆಯಲ್ಲಿ ಕೋವಿಡ್19 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಆಸ್ಪತ್ರೆಯ ಉಪಕರಣಗಳ ಖರೀದಿ ಸೇರಿದಂತೆ ಚಿಕಿತ್ಸೆಗಾಗಿ ತಮ್ಮ ಸಂಸದರ ನಿಧಿಯಿಂದ  ರಾಜೀವ್ ಚಂದ್ರಶೇಖರ್ 2 ಕೋಟಿ ರೂಪಾಯಿ ಹಣವನ್ನು  ನೀಡಿದ್ದಾರೆ. 

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 70ರ ಗಡಿ ಗಾಟಿದೆ. ಇನ್ನು ಮೂವರು ಕೊರೋನಾ ವೈರಸ್‌ಗೆ ಮೃತಪಟ್ಟಿದ್ದಾರೆ. ಇದೀಗ ಮತ್ತಷ್ಟು ಹರದಂತೆ ತಡೆಯಲು ಜನರಲ್ಲಿ ಎಚ್ಚರಿಕೆ ವಹಿಸುವಂತೆ ಸರ್ಕಾರ ಮನವಿ ಮಾಡಿದೆ.