ಕ್ಯಾನ್ಸರ್ ಬಾರದಂತೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ 2024 ರಂದು ಬಿಡುಗಡೆಯಾದ ವರದಿಯು 2020 ರಲ್ಲಿ ಭಾರತದಲ್ಲಿ 14 ಲಕ್ಷ ಜನರಿಗೆ ಕ್ಯಾನ್ಸರ್ ಇದೆ ಎಂದು ತೋರಿಸಿದೆ ಮತ್ತು 2025 ರ ವೇಳೆಗೆ ಈ ಸಂಖ್ಯೆ 15.7 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ. ಹಾಗಾಗಿ ಕ್ಯಾನ್ಸರ್ ಬಗ್ಗೆ ಜಾಗೃತರಾಗಿರೋದು ತುಂಬಾನೆ ಮುಖ್ಯ. ಕ್ಯಾನ್ಸರ್ ಬಾರದಂತೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. 2024ರ ವಿಶ್ವ ಆರೋಗ್ಯ ದಿನಕ್ಕಾಗಿ ಅಪೊಲೊ ಆಸ್ಪತ್ರೆಗಳು ಬಿಡುಗಡೆ ಮಾಡಿದ ವರದಿಯಲ್ಲಿ, ಭಾರತವನ್ನು 'ಕ್ಯಾನ್ಸರ್ ರಾಜಧಾನಿ' ಎಂದು ಹೆಸರಿಸಲಾಗಿದೆ. ಕ್ಯಾನ್ಸರ್ ಪ್ರಕರಣಗಳು ವಿಶ್ವಾದ್ಯಂತ ಸರಾಸರಿಗಿಂತ ವೇಗವಾಗಿ ಹೆಚ್ಚುತ್ತಿದೆ ಎಂದು ಬಹಿರಂಗಪಡಿಸಲಾಗಿದೆ. ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ಈ ಗಂಭೀರ ಕಾಯಿಲೆಗಳು ಅಪಾಯಕಾರಿ ಮಟ್ಟವನ್ನು ತಲುಪುತ್ತಿವೆ ಮತ್ತು ದೇಶದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿವೆ. ಹೀಗಾಗಿ ಕ್ಯಾನ್ಸರ್ ಬಾರದಂತೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಡಾ.ವಿಶಾಲ್ ರಾವ್ ಮಾಹಿತಿ ನೀಡಿದ್ದಾರೆ.
ಮಾಂಸಾಹಾರಿಗಳಿಗೆ ಕೊಲೆಸ್ಟ್ರಾಲ್, ಶುಗರ್ ಬರೋ ಸಾಧ್ಯತೆ ಹೆಚ್ಚಾ?