Asianet Suvarna News Asianet Suvarna News

ಮದುವೆಯಾಗಿ 8 ತಿಂಗಳಿಗೇ ಅವಳು ಬೇಡವಾಗಿದ್ಲು..! ಅವಳ ಕಥೆ ಮುಗಿಸಿ ಬಾಮೈದನಿಗೆ ಚಾಲೆಂಜ್​ ಹಾಕಿದ..!

ಮದುವೆಯಾಗಿ 8 ತಿಂಗಳಾಗಿದೆ ಅಷ್ಟೇ. ಇವತ್ತು ಆ ಹೆಣ್ಣು ಮಗಳು ತಾನು ಪ್ರೀತಿಸಿ ಮದುವೆಯಾದವನಿಂದಲೇ ಕೊಲೆಯಾಗಿ ಹೋಗಿದ್ದಾಳೆ. ಮಲಗಿದ್ದಲ್ಲೇ ಗಂಡ ಅವಳ ಉಸಿರು ನಿಲ್ಲಿಸಿಬಿಟ್ಟಿದ್ದಾನೆ. 

ಬೆಂಗಳೂರು(ಏ.24):  ಅವರಿಬ್ಬರು ಪ್ರೀತಿಸಿ ಮದುವೆಯಾದವರು.. ಮದುವೆ ಸಮಯದಲ್ಲಿ ಮನೆಯವರು ಒಪ್ಪದಿದ್ರೂ ಆ ಹುಡುಗಿ ಅವನೇ ಬೇಕು ಅಂತ ಗೋಗೆರೆದು ಅವನನ್ನ ಮದುವೆಯಾಗಿದ್ಲು.. ಆದ್ರೆ ಮದುವೆಯಾಗಿ 8 ತಿಂಗಳಾಗಿದೆ ಅಷ್ಟೇ.. ಇವತ್ತು ಆ ಹೆಣ್ಣು ಮಗಳು ತಾನು ಪ್ರೀತಿಸಿ ಮದುವೆಯಾದವನಿಂದಲೇ ಕೊಲೆಯಾಗಿ ಹೋಗಿದ್ದಾಳೆ.. ಮಲಗಿದ್ದಲ್ಲೇ ಗಂಡ ಅವಳ ಉಸಿರು ನಿಲ್ಲಿಸಿಬಿಟ್ಟಿದ್ದಾನೆ. ಅಷ್ಟಕ್ಕೂ ಮನಸಾರಿ ಪ್ರೀತಿಸಿದವಳನ್ನೇ ಗಂಡ ಕೊಂದಿದ್ದೇಕೆ..? ಅಂಥಹ ತಪ್ಪು ಅವಳು ಮಾಡಿದ್ದಾದರೂ ಏನು..? ಆವತ್ತು ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್‌ಐಆರ್​​​.

ಆತ ತನ್ನ ಪಾಡಿಗೆ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಕುಟುಂಬವನ್ನ ನೋಡಿಕೊಂಡಿದ್ದ. ಎಂದಿನಂತೆ ಆವತ್ತು ಬೆಳಗ್ಗೆ ಎದ್ದು ಮನೆ‌ ಕೆಲಸಗಳನ್ನ ಮುಗಿಸಿ ಕುಡಿಯೋದಕ್ಕೆ ನೀರು ತರಲು ಅಂತಾ ಬೋರವೇಲ್ ಹತ್ರ ಹೋಗಿದ್ದ. ಆದರೆ ನೀರು ತರಲು ಹೋದವನು ವಾಪಸ್​ ಬರಲೇ ಇಲ್ಲ.. ಹೋಗಿ ನೋಡಿದ್ರೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಕಲ್ಲು ಎತ್ತಿಹಾಕಿ ಅವನನ್ನ ಬರ್ಬರವಾಗಿ ಕೊಲ್ಲಲ್ಲಾಗಿತ್ತು.. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದು ಅವನ ಹೆಣ ಹಾಕಿದ್ದು ಪಕ್ಕದ ಮನೆಯ ಹುಡುಗನೇ ಅಂತ.

ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!

ಕಾರಣ ಅದೇನೇ ಇರಲಿ ಅಕ್ಕ ಪಕ್ಕದ ಮನೆಯವರು ಅನ್ಯೋನ್ಯವಾಗಿ ಇರೋದನ್ನ ಬಿಟ್ಟು ತಮ್ಮ ಪಾಡಿಗೆ ತಾವಿದ್ದ ಕುಟುಂಬದ ಜೊತೆ ನಿತ್ಯ ಗಲಾಟೆ ತೆಗೆದು ಕೊಲೆ ಮಾಡಿರೋದು ನಿಜಕ್ಕೂ ದುರಂತವೆ ಸರಿ. 

Video Top Stories