Kannada Bigg Boss Agni Pariksha : ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ವಿನಯ್ ಗೌಡ ಕೇಳಿದ ಪ್ರಶ್ನೆಯೊಂದು ಸದ್ಯ ಚರ್ಚೆಯಲ್ಲಿದೆ. ವಿನಯ್ ಗೌಡ ತಪ್ಪು ಉತ್ತರ ನೀಡಿ ಈಗ ಟ್ರೋಲರ್ ಕೈಗೆ ಸಿಕ್ಬಿದ್ದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13 ಶುರುವಾಗುವ ಮುನ್ನ ಬಿಗ್ ಬಾಸ್ ಅಗ್ನಿಪರೀಕ್ಷೆ ನಡೀತಿದೆ. ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಬಂದಿರುವ ವಿನಯ್ ಗೌಡ, ಸಂಗೀತಾ ಶೃಂಗೇರಿ, ಶ್ರುತಿ ಹಾಗೂ ಚಂದನ್ ಶೆಟ್ಟಿ ಪದೇ ಪದೇ ಟ್ರೋಲ್ ಆಗ್ತಾನೆ ಇದಾರೆ. ಆದ್ರೀಗ ವಿನಯ್ ಗೌಡ ಟ್ರೋಲರ್ ಕೈಗೆ ಸರಿಯಾಗಿ ಸಿಗ್ಬಿದ್ದಿದ್ದಾರೆ. ಎಲ್ಲಿ ನೋಡಿದ್ರೂ ವಿನಯ್ ಗೌಡ, ಸರ್ಕಲ್ ಸೈಡ್ಸ್ ವಿಡಿಯೋ ಕಾಣಸಿಗ್ತಿದೆ.

ಸರ್ಕಲ್ ಗೆ ಎಷ್ಟು ಸೈಡ್ಸ್?

ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳ ಆಯ್ಕೆ ಮಾಡ್ತಿರುವಾಗ ವಿನಯ್ ಗೌಡ ಸರ್ಕಲ್ ಗೆ ಎಷ್ಟು ಸೈಡ್ಸ್ ಅಂತ ಪ್ರಶ್ನೆ ಕೇಳ್ತಾರೆ. ಅದಕ್ಕೆ ಸ್ಪರ್ಧಿ, ಸರ್ಕಲ್ ಗೆ ಸೈಡ್ಸ್ ಇರೋದಿಲ್ಲ ಎನ್ನುವ ಉತ್ತರ ನೀಡ್ತಾರೆ. ಸ್ವಲ್ಪ ವ್ಯಂಗ್ಯವಾಗಿ ನಗುವ ವಿನಯ್ ಗೌಡ, ಸರ್ಕಲ್ ಗೆ ಎರಡು ಸೈಡ್ಸ್. ಒಂದು ಇನ್ ಇನ್ನೊಂದು ಔಟ್ ಅಂತ ಹೇಳ್ತಾರೆ.

ವಿನಯ್ ಗೌಡ ಈ ಸ್ಟೇಟ್ ಮೆಂಟ್ ಕೊಟ್ಟಿದ್ದೇ ತಡ ಟ್ರೋಲರ್ಸ್ ಫುಲ್ ಆಕ್ಟಿವ್ ಆಗಿದ್ದಾರೆ. ತಮ್ಮೆಲ್ಲ ಕ್ರಿಯೇಟಿವಿ ಬಳಸಿಕೊಂಡು ವಿನಯ್ ಗೌಡ ಅವರನ್ನು ಟ್ರೋಲ್ ಮಾಡ್ತಿದ್ದಾರೆ. ಎಐ ಟೂಲ್ಸ್ ಸಹಾಯದಿಂದ ಸಿದ್ಧವಾದ ಕೆಲ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ರಲ್ಲಿ ಸ್ಕೂಲ್ ಹುಡುಗನಿಗೆ ಟೀಚರ್, ಸರ್ಕಲ್ ನಲ್ಲಿ ಎಷ್ಟು ಸೈಡ್ಸ್ ಅಂತ ಪ್ರಶ್ನೆ ಕೇಳ್ತಾರೆ. ಅದಕ್ಕೆ ವಿದ್ಯಾರ್ಥಿ ಎರಡು ಅನ್ನೋದಲ್ದೆ ಅದಕ್ಕೆ ಕಾರಣ ವಿನಯ್ ಗೌಡ ಅಂತ ಉತ್ತರ ನೀಡ್ತಾರೆ. ಈ ವಿಡಿಯೋ ನೋಡಿದ ಜನರು, ವಿನಯ್ ಗೌಡ ಅವರಿಗೆ ಕರ್ನಾಟಕದ ರೇಖಾಗಣಿತ ಪಿತಾಮಹ ಎನ್ನುವ ಬಿರುದನ್ನು ನೀಡಿದ್ದಾರೆ.

ಇಷ್ಟೇ ಅಲ್ಲ ಇನ್ನೂ ಅನೇಕರು, ವಿನಯ್ ಗೌಡ ವಿಡಿಯೋ ಟ್ರೋಲ್ ಮಾಡಿದ್ದು, ಸರ್ಕಲ್ ಗೆ ಎಷ್ಟು ಸೈಡ್ಸ್ ಇದೆ ಎಂಬುದನ್ನು ವಿವರಿಸಿದ್ದಾರೆ. ಸರ್ಕಲ್ ಗೆ ಯಾವುದೇ ಸೈಡ್ಸ್ ಇಲ್ಲ. ಒಂದು ನಿರಂತರ ವಕ್ರ ಅಂಚು ಅಂದ್ರೆ ಕರ್ವ್ ಎಡ್ಜನ್ನು ಅದು ಹೊಂದಿರುತ್ತೆ. ಅದಕ್ಕೆ ಕಾರ್ನರ್ ಹಾಗೂ ಸೈಡ್ಸ್ ಇರೋದಿಲ್ಲ.

ಕೆಲವರು ಇದನ್ನು ವಿವರಿಸಿದ್ರೆ ಮತ್ತೆ ಕೆಲವರು ಜಡ್ಜ್ ಸ್ಥಾನದಲ್ಲಿ ಕುಳಿತು ಪ್ರಶ್ನೆ ಕೇಳುವಾಗ, ಆ ಪ್ರಶ್ನೆಗೆ ಸರಿಯಾದ ಉತ್ತರ ನಿಮಗೆ ಗೊತ್ತಿರಬೇಕು ಅಂತ ವಿನಯ್ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.