Asianet Suvarna News Asianet Suvarna News

1000 ಕೋಟಿ ರೂ. ಗಳಿಸಿದ ಶಾರುಖ್ 'ಪಠಾಣ್' ಸಿನಿಮಾ; ಉರ್ಕೊಳ್ಳೋದು ಕಮ್ಮಿ ಮಾಡಿ ಎಂದ ಫ್ಯಾನ್ಸ್‌

ಕಾಂಟ್ರವರ್ಸಿ ನಡುವೆ 1000 ಕೋಟಿ ಗಳಿಸಿದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ್ ಶುರು....

Shah Rukh Khan Deepika padukone Pathaan film collects 1000 crore worldwide box office vcs
Author
First Published Feb 22, 2023, 9:39 AM IST | Last Updated Feb 22, 2023, 10:54 AM IST

ಬಾಲಿವುಡ್‌ ಕಿಂಗ್ ಶಾರುಖ್ ಖಾನ್, ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯಿಸಿರುವ ಪಠಾಣ್ ಸಿನಿಮಾ ಜನವರಿ 25ರಂದು ವಿಶ್ವಾದ್ಯಂತ ಅದ್ಧೂರಿ ಬಿಡುಗಡೆ ಕಂಡಿತ್ತು. ಕೆಲವು ದಿನಗಳ ಹಿಂದೆ ಭಾರತದಲ್ಲಿ 500 ಕೋಟಿ ಕೆಲೆಕ್ಷನ್ ಮಾಡಿದ ಸಿನಿಮಾ ಈಗ ವಿಶ್ವಾದ್ಯಂತ 1000 ಕೋಟಿ ಗಳಿಸಿದೆ ಎನ್ನುವ ಸಹಿ ಸುದ್ದಿ ಹೊರ ಬಂದಿದೆ. ನಾಲ್ಕು ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿರುವ ಶಾರುಖ್‌ಗೆ ಬಿಗ್ ಹಿಟ್‌ ಕೊಟ್ಟಿರುವುದು ಯಶ್ ರಾಜ್‌ ನಿರ್ಮಾಣ ಸಂಸ್ಥೆ. 2019ರಲ್ಲಿ ಬ್ಲಾಕ್‌ ಬಸ್ಟರ್ ವಾರ್ ಹಿಟ್ ನೀಡಿದ ಸಿದ್ಧಾರ್ಥ್  ಆನಂದ್ ಪಠಾಣ್ ಆಕ್ಷನ್ ಕಟ್ ಹೇಳಿದ್ದಾರೆ.

ಯಶ್ ರಾಜ್ ಫಿಲ್ಮ್‌ ಅಫೀಶಿಯಲ್ ಟ್ವಿಟರ್‌ ಖಾತೆಯಲ್ಲಿ ಪಠಾಣ್ ಯಶಸ್ಸಿನ ಬಗ್ಗೆ ಬರೆದುಕೊಂಡಿದ್ದಾರೆ. 'ಪಠಾಣ್ ಸಿನಿಮಾ 1000 ಕೋಟಿ ವಿಶ್ವಾದ್ಯಂತ ಕಲೆಕ್ಷನ್ ಮಾಡಿದೆ. ಯಶ್‌ ರಾಜ್‌ ಸಂಸ್ಥೆಯ 50ನೇ ಸಿನಿಮಾ ನಿಮ್ಮ ನಗರದ ಸ್ಕ್ರೀನ್‌ಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನೋಡಬಹುದು' ಎಂದು ಬರೆದುಕೊಂಡಿದ್ದಾರೆ. 'ನನ್ನ ಕಿಂಗ್ ಸಿನಿಮಾವನ್ನು ಕೆಜಿಎಫ್‌ ಜೊತೆ ಹೋಲಿಸಿರುವ ಪ್ರತಿಯೊಬ್ಬರಿಗೂ ಹೊಟ್ಟೆ ಉರಿಯುತ್ತಿರಬೇಕು.....ಇರಲಿ ಚೆನ್ನಾಗಿ ಉರ್ಕೊಳ್ಳೋದು' ಎಂದು ಎಸ್‌ಆರ್‌ಕೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು

'ಇನ್ನು ಮುಂದೆ ಅಭಿಮಾನಿಗಳು ಯಾವ ರೀತಿ ಪಾತ್ರಗಳಲ್ಲಿ ನನ್ನನ್ನು ನೋಡಬೇಕು ಎಂದು ಇಷ್ಟ ಪಡುತ್ತಾರೆ ಅದೇ ರೀತಿ ಪಾತ್ರಗಳನ್ನು ಮಾಡುವೆ. ಕಲಾವಿದನಾಗಿ ನಾನು ತುಂಬಾ ರೀತಿಗಳಲ್ಲಿ ಬದಲಾಗಿರುವೆ ಇದೂ ಒಂದು ಬದಲಾವಣೆ' ಎಂದು ಶಾರುಖ್ ಕೆಲವು ದಿನಗಳ ಹಿಂದೆ ಅಭಿಮಾನಿಗಳ ಜೊತೆ ಮಾತನಾಡಿದಾಗ ಹೇಳಿದ್ದರು. 

 

ಓಟಿಟಿಯಲ್ಲಿ ಪಠಾಣ್:

ಅಂದಹಾಗೆ, ಈಗ ಸುತ್ತುತ್ತಿರುವ ವರದಿಯನ್ನು ನಂಬುವುದೇ ಆದರೆ, ಶಾರುಖ್ ಖಾನ್ ಅವರ ಪಠಾಣ್ ಏಪ್ರಿಲ್ 25 ರಂದು OTT ನಲ್ಲಿ ಸ್ಟ್ರೀಮ್ ಆಗಲಿದೆ.  ಅಮೆಜಾನ್‌ ಪ್ರೈಮ್‌ ವಿಡಿಯೋ (Amazon Prime Video) ಈ ಆಕ್ಷನ್-ಥ್ರಿಲ್ಲರ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಪಠಾಣ್ ಈ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಅಮೆಜಾನ್ ಡಿಜಿಟಲ್ ಹಕ್ಕುಗಳನ್ನು ಭಾರೀ ಬೆಲೆ ಕೊಟ್ಟು ಪಡೆದುಕೊಂಡಿದೆ ಎಂಬ ಮಾತು ಬಿ-ಟೌನ್‌ನಲ್ಲಿ ಸುತ್ತುತ್ತಿದೆ. ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಪಠಾಣ್ ಚಿತ್ರದ ಸ್ಟ್ರೀಮಿಂಗ್ (Streaming) ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 100 ಕೋಟಿ ಬೆಲೆಗೆ ಖರೀದಿಸಿದೆ ಎನ್ನಲಾಗಿದೆ. 

ಹೊರದಬ್ಬಿದ್ರೂ ಮತ್ತಷ್ಟು ಹಾಟ್ ಆಗಿ ಬರ್ತೀರಿ; ನಿವೃತ್ತಿ ಬಗ್ಗೆ ಶಾರುಖ್ ಖಾನ್ ನೇರ ಮಾತು

ಕೆಜಿಎಫ್‌ - ಪಠಾಣ್ ಟೀಕೆ:

ಶಾರುಖ್ ನಟನೆ ಮೆಚ್ಚಿಕೊಳ್ಳುತ್ತಿರುವ ಜನರ ನಡುವೆ ಯಶ್ ಮಾಡಿರುವ ಲೆಕ್ಕದ ಮುಂದೆ ಶಾರುಖ್ ಏನೂ ಇಲ್ಲ ಎಂದು ನಿರ್ದೇಶಕ ಆರ್‌ಜಿವಿ ಕಾಲೆಳೆದಿದ್ದಾರೆ. 'ನೋಡಿ ಬಾಲಿವುಡ್‌ಗೆ ಅಪರಿಚತನಾಗಿರುವ ಯಶ್‌ ಅನ್ನೋ ನಟ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ 500 ಕೋಟಿ ರೂಪಾಯಿ ಗಳಿಸಬಹುದು ಅಂದ್ರೆ ಹಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗವನ್ನು ರೂಲ್ ಮಾಡುತ್ತಿರುವ ಶಾರುಖ್ ಖಾನ್‌ಗೆ 500 ಕೋಟಿ ರೂಪಾಯಿ ಯಾವ ಲೆಕ್ಕ? ಯಶ್‌ಗಿಂತ ಶಾರುಖ್‌ ಖಾನ್‌ಗೆ ಇರುವ ಹೆಸರು ಮತ್ತು ಗೌರವ ಬೇರೆ ಲೆವೆಲ್‌. ಯಶ್‌ ಇಷ್ಟೊಂದು ಬಿಸ್ಯುನೆಸ್‌ ಮಾಡಬುದು ಅಂದ್ರೆ ಶಾರುಖ್‌ಗೆ ಬೆಲೆ ಇಲ್ವಾ? ಕಾಂತಾರ ಅನ್ನೋ ಸಿನಿಮಾ ಹಿಟ್ ಅಗುತ್ತೆ, ಪುಷ್ಪ ಅನ್ನೋ ಸಿನಿಮಾ ಹಿಟ್ ಆಗುತ್ತೆ ಅಲ್ಲಿ ಯಾರಿಗೂ ರಿಷಬ್ ಶೆಟ್ಟಿ ಯಾರು ಅಲ್ಲು ಅರ್ಜುನ್ ಯಾರು ಅಂತ ಗೊತ್ತಿಲ್ಲ. ಆದರೆ ಶಾರುಖ್ ಖಾನ್‌ಗೆ ಸ್ಟಾರ್‌ಡಮ್‌ ಎಲ್ಲವೂ ಕಿತ್ತುಕೊಳ್ಳುತ್ತಿದೆ' ಎಂದು ರಾಮ್‌ ಗೋಪಾಲ್‌ ವರ್ಮಾ ಕನೆಕ್ಟ್‌ ದಿಲ್‌ ಸೇ ಸಂದರ್ಶನದಲ್ಲಿ ಮತನಾಡಿದ್ದಾರೆ.

'ಓಟಿಟಿ ಈಗ ರೂಲ್ ಮಾಡುತ್ತಿರುವ ಕಾರಣ ಥಿಯೇಟರ್‌ಗಳು ಎಷ್ಟೇ ಕಲೆಕ್ಷನ್ ಮಾಡಿದ್ದರೂ ಬೆಲೆ ಇಲ್ಲ. ಈಗ ಶಾರುಖ್‌ ಖಾನ್‌ ಒಂದು ರೀತಿ ಫೇಡಿಂಗ್ ಸ್ಟಾರ್. ಇನ್ನು ಮುಂದೆ ಬಾಲಿವುಡ್‌ ಸಿನಿಮಾ ಯಾವುದೇ ರೀತಿ ಕಮರ್ಷಿಯಲ್ ಬ್ಲಾಕ್ ಬಸ್ಟರ್ ಮಾಡಲು ಆಗುವುದಿಲ್ಲ ಏಕೆಂದರೆ ನಮ್ಮ ಸೌತ್ ಮಸಾಲ ನಿರ್ದೇಶಕರು ಟಾಪ್‌ನಲ್ಲಿರುತ್ತಾರೆ. ಕೆಜಿಎಫ್ ಚಾಪ್ಟರ್ 2 ಒಂದು ದಿನದಲ್ಲಿ ಗಳಿಸಿರುವ ಕಲೆಕ್ಷನ್ ಬ್ರೇಕ್ ಮಾಡಲು ಇನಿತರರಿಗೆ ಒಂದು ವರ್ಷ ಬೇಕಾಗುತ್ತದೆ. ಬಿ-ಟೌನ್‌ನಲ್ಲಿ ಕ್ರಿಯೇಟ್‌ ಆಗಿರುವ ಮೂಡ ನಂಬಿಕೆಗಳು ಬ್ರೇಕ್ ಅಗಲಿದೆ. ಅದಕ್ಕೆ ಪಠಾಣ್ ಸಾಕ್ಷಿ' ಎಂದು ಆರ್‌ಜಿವಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios