Asianet Suvarna News Asianet Suvarna News

ಹೊರದಬ್ಬಿದ್ರೂ ಮತ್ತಷ್ಟು ಹಾಟ್ ಆಗಿ ಬರ್ತೀರಿ; ನಿವೃತ್ತಿ ಬಗ್ಗೆ ಶಾರುಖ್ ಖಾನ್ ನೇರ ಮಾತು

ಹೊರದಬ್ಬಿದರೂ ಮತ್ತಷ್ಟು ಹಾಟ್ ಆಗಿ ಬರ್ತೀರಿ ಎಂದು ಪಠಾಣ್ ಸ್ಟಾರ್ ಶಾರುಖ್ ಖಾನ್ ನಿವೃತ್ತಿ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. 

Shah Rukh Khan says never retire from acting, will have to be fired  sgk
Author
First Published Feb 21, 2023, 2:55 PM IST | Last Updated Feb 21, 2023, 2:55 PM IST

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸದ್ಯ ಪಠಾಣ್ ಸಕ್ಸಸ್ನ ಖುಷಿಯಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದ ಶಾರುಖ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಪಠಾಣ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕೋಟಿ ಕೋಟಿ ಗಳಿಕೆ ಮಾಡಿರುವ ಪಠಾಣ್ ಅನೇಕ ಹಿಂದಿ ಸಿನಿಮಾಗಳ ಕಲೆಕ್ಷನ್ ಬ್ರೇಕ್ ಮಾಡಿದೆ. ಪಠಾಣ್ ಸಿನಿಮಾ ರಿಲೀಸ್ ಬಳಿಕ ಶಾರುಖ್ ಅಭಿಮಾನಿಗಳ ಜೊತೆ ಅನೇಕ ಬಾರಿ ಸಂವಾದ ನಡೆಸಿದ್ದಾರೆ. ಟ್ವಿಟ್ಟರ್ ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇದೀಗ ಮತ್ತೆ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದ ಶಾರುಖ್ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಆದೆರ ಶಾರುಖ್ ಕೆಲವು ಆಯ್ದ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದಾರೆ. 

ಅಭಿಮಾನಿಯೊಬ್ಬ ಶಾರುಖ್‌ಗೆ ನಿವೃತ್ತಿಯಾಗುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ನೀವು ನಿವೃತ್ತಿ ಪಡೆದ ನಂತರ ಬಾಲಿವುಡ್​ನಲ್ಲಿ ದೊಡ್ಡ ವ್ಯಕ್ತಿ ಯಾರು’ ಎಂದು ಶಾರುಖ್​​ ಖಾನ್​ಗೆ ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿರುವ ಶಾರುಖ್ ಖಾನ್, ‘ನಾನು ಯಾವತ್ತು ನಟನೆಯಿಂದ ನಿವೃತ್ತಿ ಪಡೆಯಲ್ಲ, ನನ್ನನ್ನು ಹೊರದಬ್ಬಬೇಕು ಅಷ್ಟೆ. ಬಹುಶಃ ಆಗಲೂ ನಾನು ಮತ್ತಷ್ಟು ಹಾಟ್ ಆಗಿ ಕಂಬ್ಯಾಕ್ ಮಾಡುತ್ತೇನೆ’ ಎಂದಿದ್ದಾರೆ. 

ಮತ್ತೋರ್ವ ಅಭಿಮಾನಿ  ಶಾರುಖ್ ಐಷಾರಾಮಿ ಕಾರುಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್ ತನ್ನ ಬಳಿ ಹುಂಡೈ ಕಾರು ಬಿಟ್ಟರೆ ಯಾರೆ ಯಾವುದೇ ಐಷಾರಾಮಿ ಕಾರುಗಳು ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಬೋಗಸ್' ಎಂದು ಹೇಳಿದ್ದಾರೆ. ಹೀಗೆ ಅನೇಕ ಪ್ರಶ್ನೆಗಳಿಗೆ ಕಿಂಗ್ ಖಾನ್ ಉತ್ತರ ನೀಡಿದ್ದಾರೆ. 

ಪಠಾಣ್ ವೀಕ್ಷಿಸಲು ಸಂಪೂರ್ಣ ಚಿತ್ರಮಂದಿರ ಬುಕ್ ಮಾಡಿದ ಬಿಗ್ ಬಾಸ್ ಸ್ಪರ್ಧಿ ಅಬ್ದು; ಡಾನ್ಸ್ ವೈರಲ್

ಪಠಾಣ್ ಬಗ್ಗೆ 

ಪಠಾಣ್ ಸಿನಿಮಾ ಜನವರಿ 25ರಂದು ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರದರ್ಶನ ವ್ಯಕ್ತವಾಗಿದ್ದು ಬಾಕ್ಸ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿ ಬಂದಿರುವ ಪಠಾಣ್ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಮಿಂಚಿದ್ದಾರೆ. ಅನೇಕ ವಿವಾದಗಳ ನಡುವೆಯೂ ಅದ್ದೂರಿಯಾಗಿ ರಿಲೀಸ್ ಆದ ಪಠಾಣ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. 1000 ಕೋಟಿ ಮುಟ್ಟಿರುವ ಪಠಾಣ್ ಬಾಹುಬಲಿ-2 ಮತ್ತು ಕೆಜಿಎಫ್-2 ದಾಖಲೆಯನ್ನು ಬ್ರೇಕ್ ಮಾಡುತ್ತಾ ಎನ್ನುವ ಕುತೂಹಲ ಮೂಡಿಸಿದೆ. 

ಸ್ಮೃತಿ ಇರಾನಿ ಅವರ ಮಗಳ ಮದುವೆ ರಿಸೆಪ್ಷನ್‌ನಲ್ಲಿ ಶಾರುಖ್‌ ಖಾನ್‌; ಫೋಟೋ ವೈರಲ್‌

ಶಾರುಖ್ ಮುಂದಿನ ಸಿನಿಮಾಗಳು 

ಪಠಾಣ್ ರಿಲೀಸ್ ಆಗಿ ಸಕ್ಸಸ್ ಆಗುತ್ತಿದ್ದಂತೆ ಶಾರುಖ್ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಸದ್ಯ ಜವಾನ್ ಮತ್ತು ಡಂಕಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಜವಾನ್ ಚಿತ್ರಕ್ಕೆ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಡಂಕಿ ಸಿನಿಮಾ ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. 

Latest Videos
Follow Us:
Download App:
  • android
  • ios