'ಪರ್ಚೆಡ್‌' ಚಿತ್ರದ ಸಣ್ಣ ವಿಡಿಯೋ ವೈರಲ್. ರಾಧಿಕಾ ಆಪ್ಟೆ ಬಹಿಷ್ಕಾರಕ್ಕೆ ಒತ್ತಾಯಿಸಿ ಟ್ಟಿಟರ್‌ ಟ್ರೆಂಡ್. 

ಬಾಲಿವುಡ್ ಬೋಲ್ಡ್ ನಟಿ ರಾಧಿಕಾ ಆಪ್ಟೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ. ತಮ್ಮ ಬೋಲ್ಡ್ ಸಿನಿಮಾ 'ಪರ್ಚೇಡ್' ಚಿತ್ರದಲ್ಲಿ ಸಣ್ಣ ವಿಡಿಯೋ ಕ್ಲಿಪ್ ಹಾಗೂ ಫೋಟೋ ವೈರಲ್ ಆಗುತ್ತಿದೆ, ಟ್ಟಿಟರ್‌ನಲ್ಲಿ ನೆಟ್ಟಿಗರು ರಾಧಿಕಾನ ಬ್ಯಾನ್ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಬೆತ್ತಲೆ ವಿಡಿಯೋ ಲೀಕ್ ; 'ಮನೆಯಿಂದ ಹೊರಗೆ ಹೆಜ್ಜೆ ಇಡಲಿಲ್ಲ'

2015ರಲ್ಲಿ ಬಿಡುಗಡೆ ಆದ ಬೋಲ್ಡ್ ಸಿನಿಮಾ 'ಪರ್ಚೆಡ್‌' ದೊಡ್ಡ ಸುದ್ದಿ ಮಾಡಿತ್ತು. ಈ ಚಿತ್ರದಲ್ಲಿ ರಾಧಿಕಾ ಲೆಸ್ಬಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದು ಇಂಟಿಮೇಟ್‌ ದೃಶ್ಯದಲ್ಲಿ ರಾಧಿಕಾ ಟಾಪ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೂಲಕ ಅಶ್ಲೀಲ ವಿಷಯವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. 

ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳು ಸಂಸ್ಕೃತಿ ವಿರುದ್ಧವಾಗಿದೆ ಆದರೆ ರಾಧಿಕಾ ಸಿನಿಮಾದಲ್ಲಿ ಇದೇ ರೀತಿ ಇರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ. ರಾಧಿಕಾ ಮೇನ್‌ ಹೈಲೈಟ್ ಆಗಿದ್ದು, ಇನ್ನಿತರೆ ಸ್ಟಾರ್‌ಗಳ ವಿರುದ್ಧವೂ ಗರಂ ಆಗಿದ್ದಾರೆ. ರಾಧಿಕಾ ಹಾಗೂ ರಾಜ್‌ ಕುಂದ್ರಾ ಅವರ ಬ್ಯುಸಿನೆಸ್ ಜೊತೆಯೂ ಕೈ ಜೋಡಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

Scroll to load tweet…