ಮಾದಕವಸ್ತು ತನಿಖೆಯಲ್ಲಿ ಬಾಲಿವುಡ್ ತಾರೆಗಳನ್ನು ಬಂಧಿಸಲು ಎನ್‌ಸಿಬಿ ಕರೆ ನೀಡಲಿದೆ. ಬಾಲಿವುಡ್‌ ಡ್ರಗ್ಸ್‌ ಮಾಫಿಯಾ ತನಿಖೆಗೆ ದೆಹಲಿಯಿಂದ ಮುಂಬೈಗೆ ಬಂದ ಎನ್‌ಸಿಬಿ ತಂಡ ಗುರುವಾರ ದೆಹಲಿಗೆ ಮರಳಲಿದೆ. ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾ ಅವರು ಈ ವಿಚಾರ ತಿಳಿಸಿದ್ದಾರೆ.

ಡ್ರಗ್ಸ್ ಮಾಫಿಯಾ ಸಂಬಂಧಿಸಿದ ಸಾಕ್ಷಿ ಸಂಗ್ರಹಿಸಿ ಅವುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದ್ದು ಇದು ಬುಧವಾರಕ್ಕೆ ಮುಗಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಗುರುವಾರ ತಂಡ ದೆಹಲಿಗೆ ತೆರಳಲಿದೆ.

ಸುಶಾಂತ್ ದೇಹದಲ್ಲಿ ವಿಷ ಪತ್ತೆಯಾಗಿಲ್ಲ: ಏಮ್ಸ್ ಸ್ಪಷ್ಟನೆ

ಗುರುವಾರ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾ ಅವರ ನಾಯಕತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕೆಲವು ಬಾಲಿವುಡ್ ಟಾಪ್ ಸ್ಟಾರ್‌ಗಳ ಬಂಧನದ ಬಗ್ಗೆ ಚರ್ಚೆಯಾಗಲಿದೆ.

ಭಾನುವಾರ ರಾಕೇಶ್ ಅವರು 3-4 ಅಧಿಕಾರಿಗಳೊಂದಿಗೆ ದೆಹಲಿಯಿಂದ ಮುಂಬೈಗೆ ಬಂದಿದ್ದರು. ಇವರ ಜೊತೆಗೆ ಸಹ ನಿರ್ದೇಶಕ ಸಮೀರ್ ವಾಕಂಡೆ ಕೂಡಾ ಬಂದಿದ್ದರು.

ಟಾಪ್ ಸೆಲೆಬ್ರಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನಟಿ: ಜಾಮೀನು ವಿರೋಧಿಸಿ NCB ಅರ್ಜಿ

ರಾಕೇಶ್ ಅಸ್ತಾನಾ ಸೋಮವಾರ ಡ್ರಗ್ಸ್ ಸಂಬಂಧ ಮಾಹಿತಿಯ ಡಾಕ್ಯುಮೆಂಟ್ ಹಸ್ತಾಂತರಿಸಿದ್ದು, ಇದರಲ್ಲಿ ಬಾಲಿವುಡ್‌ ಟಾಪ್‌ ಸ್ಟಾರ್‌ಗಳ ಲಿಸ್ಟ್ ಇದೆ ಎನ್ನಲಾಗಿದೆ. ಹಾಗೆಯೇ ಬಾಲಿವುಡ್ ಸ್ಟಾರ್‌ಗಳು ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ನಡುವಿನ ಮುಖ್ಯ ಡ್ರಗ್ಸ್ ಸಂಭಾಷಣೆ, ಚಾಟ್ ಇದೆ ಎನ್ನಲಾಗಿದೆ.

KWAN ಟಾಲೆಂಡ್ ಮ್ಯಾನೇಜರ್ಸ್ ಕರಿಷ್ಮಾ ಪ್ರಕಾಶ್, ಶ್ರುತಿ ಮೋದಿ ಮತ್ತು ಡಿಸೈನರ್ ಸಿಮೋನೆ ಖಂಬಟ್ಟಾ ಸೇರಿದಂತೆ ಇತರರ ಸಾಕ್ಷ್ಯಗಳೂ ಇದರಲ್ಲಿವೆ. KWAN ಒಡೆತನದ ಹಣ ವರ್ಗಾವಣೆ, ಅಲ್ಲಿನ ಸದಸ್ಯರ ಹಾಗೂ ಡ್ರಗ್ಸ್ ಪೆಡ್ಲರ್‌ಗಳ ಸಂಬಂಧದ ಮಾಹಿತಿಯೂ ಇದೆ ಎನ್ನಲಾಗಿದೆ.

ಸಮಂತಾ To ರಶ್ಮಿಕಾ ಬಾಲ್ಯದ ಫೋಟೋಸ್ ಹೀಗಿವೆ ನೋಡಿ

ಬಾಲಿವುಡ್ ಡ್ರಗ್ಸ್ ಮಾಫಿಯಾ ಸಂಬಂಧ ನಿರ್ಮಾಪಕ ಕ್ಷಿತಿಜ್ ರವಿ ಪ್ರಸಾದ್‌ನನ್ನು ಬಂಧಿಸಲಾಗಿದ್ದು, ರಿಯಾ, ಶೋವಿಕ್ ಸೇರಿ ಸುಮಾರು 19 ಜನರನ್ನು ಈಗಾಗಲೇ ಬಂಧಿಸಲಾಗಿದೆ.

ಮೂರನೇ ಹಂತದ ಎನ್‌ಸಿಬಿ ಬಾಲಿವುಡ್ ಡ್ರಗ್ಸ್ ಮಾಫಿಯಾ ತನಿಖೆಯಲ್ಲಿ ದೀಪಿಕಾ ಪಡುಕೋಣೆಗಿಂತ ಮುಖ್ಯ, ಪ್ರಭಾವಶಾಲಿ ಸ್ಟಾರ್‌ಗಳ ಹೆಸರು ಹೊರಗೆ ಬರಲಿದೆ ಎನ್ನಲಾಗಿದೆ. ಈಗ ವಿಚಾರಣೆಗೊಳಗಾದ ನಾಲ್ವರು ನಟಿಯರೂ ಹಾಶಿಶ್ ಡ್ರಗ್ ಅಲ್ಲ ಎಂದೇ ವಾದಿಸಿದ್ದಾರೆ ಎನ್ನಲಾಗಿದೆ.

NCB ಕಚೇರಿಗೆ ಸೆಲೆಬ್ರಿಟಿಗಳ ಹಿಂದೆ ಮೀಡಿಯಾ ಓಟ: PRESS ವಾಹನ ಸೀಝ್ ಮಾಡ್ತೀವಿ ಎಂದ DCP

ಕ್ಷಿತಿಜ್ ರವಿ ಪ್ರಸಾದ್ ಬಂಧನದ ನಂತರ ರಾಜಕಾರಣಿಗಳಿಂದ ಬರುತ್ತಿರುವ ಒತ್ತಡದ ಬಗ್ಗೆಯೂ ಎನ್‌ಸಿಬಿ ಅಚ್ಚರಿ ವ್ಯಕ್ತಪಡಿಸಿದೆ. ಕ್ಷಿತಿಜ್ ಬಂಧನದಿಂದ ಟಾಪ್ ಸೆಲೆಬ್ರಿಟಿಗಳ ಹೆಸರು ಹೊರಗೆ ಬರಲಿದೆ ಎನ್ನಲಾಗಿದೆ.