ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯ ಜಾಮೀನು ಅಪೇಕ್ಷೆ ಅರ್ಜಿಯನ್ನು ವಿರೋಧಿಸಿ ಎನ್‌ಸಿಬಿ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಎನ್‌ಸಿಬಿ ಪ್ರದೇಶಿಕ ನಿರ್ದೇಶಕ ಸಮೀರ್ ವಾನ್‌ಕೇಡೆ ಅರ್ಜಿ ಸಲ್ಲಿಸಿದ್ದು, ಡ್ರಗ್ಸ್ ಟ್ರಾಫಿಕ್ಕಿಂಗ್‌ಗೆ ರಿಯಾ ಚಕ್ರವರ್ತಿ ಹಣ ಒದಗಿಸಿದ್ದಕ್ಕೆ ಸಾಕಷ್ಟು ಸಾಕ್ಷಿ ಇದೆ. ವಾಟ್ಸಾಪ್ ಚಾಟ್, ಮೊಬೈಲ್ ರೆಕಾರ್ಡ್‌ಗಳು, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್‌ನಂತಹ ಎಲೆಕ್ಟ್ರಾನಿಕ್ಸ್ ಸಾಕ್ಷಿಗಳಯ ಡ್ರಗ್ಸ್‌ಗೆ ಪೇಂಎಂಟ್‌ ಆಗಿರುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ. ರಿಯಾ ಚಕ್ರವರ್ತಿ ಡ್ರಗ್ಸ್ ಟ್ರಾಫಿಕಿಂಗ್‌ನಲ್ಲಿ ಭಾಗಿಯಾಗಿದ್ದಲ್ಲದೆ, ಅಕ್ರಮ ಡ್ರಗ್ಸ್ ದಂಧೆಗೆ ಇದಕ್ಕೆ ಹಣ ಪೋರೈಸಿದ್ದೂ ಬಯಲಾಗಿದೆ ಎಂದಿದ್ದಾರೆ.

ಮಗಳು ಸಾರಾ ಬೆಂಬಲಕ್ಕೆ ಸೈಫ್ ಪತ್ನಿ ಕರೀನಾ ಜತೆ ಹೋಗಿದ್ದು ಎಲ್ಲಿಗೆ?

ಸುಶಾಂತ್ ಸಿಂಗ್ ರಜಪೂತ್ ಮಾದಕವಸ್ತುಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿದೂ ರಿಯಾ ಸುಶಾಂತ್‌ಗೆ ಆಶ್ರಯ ನೀಡಿ ಡ್ರಗ್ಸ್‌ ವಿಚಾರ ಮರೆ ಮಾಚಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. 

ಈ ಎಲ್ಲ ಸನ್ನಿವೇಶವನ್ನು ನೋಡಿದರೆ, ರಿಯಾಗೆ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಸೇವಿಸುವುದು ತಿಳಿದೂ ಅವರು ಆಶ್ರಯ ನೀಡಿದ್ದಾರೆ. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರೂ ಅದನ್ನು ಮರೆಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಶಾಂತ್ ಸಿಂಗ್ ಕುರಿತ ಸಿನಿಮಾ: NCB ಆಫೀಸರ್ ಆಗ್ತಿದ್ದಾರೆ ಶ್ರದ್ಧಾ ತಂದೆ

ರಿಯಾ ತನ್ನ ಮನೆಯಲ್ಲೇ ಡ್ರಗ್ಸ್ ಸಂಗ್ರಹಿಸಿದ್ದು ಮಾತ್ರವಲ್ಲದೆ, ಸುಶಾಂತ್‌ಗೆ ಸಪ್ಲೈ ಮಾಡಿದ್ದಾರೆ ಎಂದಿದ್ದಾರೆ. ರಿಯಾ ಮಾದಕವಸ್ತು ವಿತರಣೆಗೆ ಅನುಕೂಲ ಮಾಡಿಕೊಟ್ಟರು ಮತ್ತು ಉನ್ನತ ಸಮಾಜದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. 

ಹೈ ಸೊಸೈಟಿ ಜನರೊಂದಿಗೆ ರಿಯಾ ಡ್ರಗ್ಸ್ ಒದಗಿಸಿದ್ದಾಳೆ. ಡ್ರಗ್ಸ್ ಸಪ್ಲೈಯರ್‌ಗಳಿಗೆ ಸಂಬಂಧಿಸಿ ಈಕೆ ಸಕ್ರಿಯ ಸದಸ್ಯೆಯಾಗಿದ್ದಾಳೆ. ಆಕೆ ಡ್ರಗ್ಸ್ ಮಾಫಿಯಾದಲ್ಲಿ ಸಕ್ರಿಯವಾಗಿದ್ದಳು ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಕ್ರೆಡಿಟ್ ಕಾರ್ಡ್, ನಗದು ಸೇರಿ ಹಲವು ರೀತಿಯಲ್ಲಿ ಪೇಮೆಂಟ್ ಮಾಡಲಾಗಿದೆ ಎಂದಿದ್ದಾರೆ.