ಬಾಲಿವುಡ್ ನಟ ಸುಶಾಂತ್ ಸಿಂಗ್  ರಜಪೂತ್ ಒಳಾಂಗಗಳ ಪೋಸ್ಟ್‌ ಮಾರ್ಟಂ ವರದಿಯನ್ನು ಏಮ್ಸ್ ಪುನರ್‌ಪರಿಶೀಲಿಸಿ ವರದಿಯನ್ನು ಸಿಬಿಐಗೆ ನೀಡಿದೆ. ಏಮ್ಸ್ ಪರಿಶೀಲನಾ ವರದಿಯ ಪ್ರಕಾರ ಸುಶಾಂತ್ ಸಿಂಗ್ ದೇಹದಲ್ಲಿ ಯಾವುದೇ ಜೈವಿಕ ವಿಷ ಪತ್ತೆಯಾಗಿಲ್ಲ ಎನ್ನಲಾಗಿದೆ. ಕೂಪರ್ ಆಸ್ಪತ್ರೆಯ ವರದಿಗಳನ್ನು ಪರಿಶೀಲಿಸಲಿದೆ. ಕೂಪರ್ ಮಾರ್ಚರಿ ಕೊಠಡಿಯಲ್ಲಿ ಬೇಕಾದಷ್ಟು ಬೆಳಕು ಲಭ್ಯವಿರಲಿಲ್ಲ ಎಂದಿದೆ ಏಮ್ಸ್ ತಂಡ.

ಸೆಪ್ಟೆಂಬರ್ 7ರಂದು ಏಮ್ಸ್ ಫೊರೆನ್ಸಿಕ್ ತಂಡ ಒಳಾಂಗಗಳ ಪರೀಕ್ಷೆ ನಡೆಸಿದ್ದು, ದೇಹದಲ್ಲಿ ವಿಷದ ಅಂಶ ಪತ್ತೆಯಾಗಿಲ್ಲ ಎಂದಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಫೊರೆನ್ಸಿಕ್ ವರದಿಯ ಕುರಿತು ಫೊರೆನ್ಸಿಕ್ ಮಂಡಳಿಯ ಮುಖ್ಯಸ್ಥ ಡಾ, ಸುಧೀರ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

ಟಾಪ್ ಸೆಲೆಬ್ರಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನಟಿ: ಜಾಮೀನು ವಿರೋಧಿಸಿ NCB ಅರ್ಜಿ

 ಏಮ್ಸ್ ಹಾಗೂ ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಎಗ್ರಿಮೆಂಟ್‌ನಲ್ಲಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಗಳ ಅಗತ್ಯವಿದೆ. ಕಾನೂನಾತ್ಮಕವಾಗಿ ಯಾವುದೇ ನಿಗಮನಕ್ಕೆ ಬರುವ ಮುನ್ನ ಈ ವಿಚಾರವಾಗಿ ಕೆಲವು ಕಾನೂನಾತ್ಮಕ ಅಂಶಗಳನ್ನು ನೋಡಬೇಕಿದೆ ಎಂದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಲಾಯರ್ ವಿಕಾಸ್ ಸಿಂಗ್ ಈ ಹಿಂದೆ ಏಮ್ಸ್ ವೈದ್ಯರು 200% ಇದು ಆತ್ಮಹತ್ಯೆಯಲ್ಲ ಎಂದು ತಿಳಿಸಿದ್ದರು ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸುಧೀರ್ ಗುಪ್ತಾ ಗುರುತುಗಳನ್ನು ನೋಡಿ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ ಎಂದಿದ್ದರು.