ಹಲವು ದಿನಗಳಿಂದ ಬಾಲಿವುಡ್ ಟಾಪ್ ಸೆಲೆಬ್ರಟಿಗಳು ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಮಾಧ್ಯಮಗಳೂ ಸೆಲೆಬ್ರಿಟಿಗಳ ಹಿಂದೆ ಬಿದ್ದಿವೆ. ಸೆಲೆಬ್ರಿಟಿಗಳು ಎನ್‌ಸಿಬಿ ಆಫೀಸ್‌ಗೆ ಬರುವಾಗ ಹಿಂದೆಯೇ ಬರುವ ಮಾಧ್ಯಮ ವಾಹನಗಳಿಗೆ ಮುಂಬೈ ಪೊಲೀಸ್ ವಾರ್ನ್ ಮಾಡಿದ್ದಾರೆ.

ಎನ್‌ಸಿಬಿ ಕಚೇರಿಗೆ ಸೆಲೆಬ್ರಿಟಿಗಳು ಬರುವಾಗ ಹಿಂದೇಯೇ ಓಡಿ ಬರುವ ಮಾಧ್ಯಮ ವಾಹನಗಳಿಗೆ ಪೊಲೀಸರು ವಾರ್ನ್‌ ಮಾಡಿದ್ದಾರೆ. ಎನ್‌ಸಿಬಿ ವಿಚಾರಣೆಗೆ ಕರೆದ ಸೆಲೆಬ್ರಿಟಿಗಳ ವಾಹನಗಳನ್ನು ಮಾಧ್ಯಮಗಳು ಚೇಸ್ ಮಾಡ್ತಿವೆ ಎಂದು ಮುಂಬೈನ ಝೋನ್ 1 ಡಿಸಿಪಿ ಸಂಗ್ರಮಸಿಂಗ್ ನಿಶಂದರ್ ಹೇಳಿದ್ದಾರೆ.

ಮೊಬೈಲ್ ಸೀಜ್, NCB ವಿಚಾರಣೆ ವೇಳೆ ಕಣ್ಣೀರಿಟ್ಟ ದೀಪಿಕಾ..!

ಬಹಳಷ್ಟು ಮಾಧ್ಯಮ ವಾಹನಗಳು ಸೆಲೆಬ್ರಿಟಿ ವಾಹನದ ಹಿಂದೆ, ಎರಡೂ ಬದಿಗಳಲ್ಲಿ ಚೇಸ್ ಮಾಡುತ್ತಾ, ತಮ್ಮ ವಾಹನಗಳಿಂದ ಹೊರಗೆ ಬಗ್ಗಿ ಕ್ಯಾಮೆರಾ ಹಿಡಿದು ಅಪಾಯ ಆಹ್ವಾನಿಸುತ್ತಿದ್ದೀರಿ. ಜನ ಸಾಮಾನ್ಯರಿಗೂ ತೊಂದರೆ ನೀಡುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನುಮುಂದೆ ಈ ರೀತಿ ಸೆಲೆಬ್ರಿಟಿ ವಾಹನ ಚೇಸ್ ಮಾಡಿದಲ್ಲಿ ಮಾಧ್ಯಮ ವಾಹನಗನ್ನು ಸೀಜ್ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

"