ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ, ಮುಗುಳು ನಕ್ಕ ರಣವೀರ್ ಸಿಂಗ್ ಯುವತಿಗೆ ಈ ಮಾತು ಹೇಳಿದ್ದಾರೆ. ಎಲ್ಲರೂ ಒಮ್ಮಲೆ ನಕ್ಕಿದ್ದಾರೆ. ಅಷ್ಟಕ್ಕೂ ಧುರಂಧರ್ ಹೀರೋ ರಣವೀರ್ ಈ ಮಾತನ್ನು ಹೇಳಿದ್ದೇಕೆ?
ಮುಂಬೈ (ಜು.28) ಧುರಂಧರ್ ಹೀರೋ ರಣವೀರ್ ಸಿಂಗ್ ಬಾಲಿವುಡ್‌ನ ಅತೀ ಹೆಚ್ಚು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ವಿಶೇಷ ಅಂದರೆ ಸೆಟ್‌ನಲ್ಲಿ ಮಾತ್ರವಲ್ಲ, ಕಾರ್ಯಕ್ರಮ ವೇದಿಕೆ ಸೇರಿದಂತೆ ಎಲ್ಲೇ ಹೋದರೆ ರಣವೀರ್ ಸಿಂಗ್ ಅತ್ಯಂತ ಎನರ್ಜಿಟಿಕ್ ಆಗಿರುತ್ತಾರೆ. ಇದೀಗ ರಣವೀರ್ ಸಿಂಗ್, ಯುವತಿಯನ್ನು ನೋಡಿ ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ ಎಂದಿದ್ದಾರೆ. ರಣವೀರ್ ಸಿಂಗ್ ಈ ಪ್ರತಿಕ್ರಿಯೆ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಏನಿದು ಘಟನೆ?
ಜಾಹೀರಾತು ಶೂಟಿಂಗ್ ಒಂದರಲ್ಲಿ ರಣವೀರ್ ಸಿಂಗ್ ಪಾಲ್ಗೊಂಡಿದ್ದರು. ಈ ವೇಳೆ ನಡೆದ ಘಟನೆಯನ್ನು ಮಾಡೆಲ್ ದೀಕ್ಷಾ ನಾರಂಗ್ ಹಂಚಿಕೊಂಡಿದ್ದಾರೆ. ಬ್ರ್ಯಾಂಡ್ ಪ್ರಮೋಶನ್ ವಿಡಿಯೋಗಾಗಿ ಶೂಟಿಂಗ್ ನಡೆಯುತ್ತಿತ್ತು. ಇದರ ನಡುವೆ ಕಾಫಿ ಬ್ಲೆಂಡರ್ ಕೆಟ್ಟು ಹೋಗಿ ಶೂಟಿಂಗ್ ನಿಂತಿತ್ತು. ಎಲ್ಲರೂ ಮೌನವಾಗಿದ್ದರು. ಈ ವೇಳೆ ಮೌನ ಮುರಿಯಲು ದೀಕ್ಷಾ ನಾರಂಗ ಏಕಾಏಕಿ ರಣವೀರ್ ಸಿಂಗ್ ಜೊತೆ ಮಾತನಾಡಲು ಆರಂಭಿಸಿದ್ದಾರೆ. ಒಂದರ ಮೇಲೊಂದರಂತೆ ಪ್ರಶ್ನಿಸುತ್ತಾ, ಇದಕ್ಕೆ ರಣವೀರ್ ಸಿಂಗ್ ಉತ್ತರವನ್ನು ಪಡೆದುಕೊಳ್ಳುತ್ತಾ ಸಂವಹನ ನಡೆಸಿದ್ದಾರೆ.
ಯುವತಿಗೆ ತಮಾಷೆ ಉತ್ತರ ನೀಡಿದ ರಣವೀರ್ ಸಿಂಗ್
ದೀಕ್ಷಾ ನಾರಂಗ್ ಪದೇ ಪದೇ ರಣವೀರ್ ಸಿಂಗ್ ಕಾಫಿ ಮಾಡುವ ಶೈಲಿ, ಎಲ್ಲೇ ಇದ್ದರೂ ತುಂಬಾ ಉತ್ಸಾಹದಿಂದ ಇರುವ ಸೀಕ್ರೆಟ್ ಕುರಿತು ಹಲವು ಬಾರಿ ಹೊಗಳಿದ್ದಾರೆ. ಪದೇ ಪದೇ ಇದೇ ಮಾತುಗಳು ಬಂದಾಗ ರಣವೀರ್ ಸಿಂಗ್, ಅದೆಷ್ಟು ಮಾತನಾಡುತ್ತೀರಿ, ಅದೆಷ್ಟು ಫ್ಲರ್ಟ್ ಮಾಡುತ್ತೀದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲ ನೀವು ಎಷ್ಟೊಂದು ಫ್ಲರ್ಟ್ ಮಾಡುತ್ತೀದ್ದೀರಿ, ನಾನು ಎರಡು ಮಕ್ಕಳ ತಂದೆಯಾಗುತ್ತಿದ್ದೇನೆ ಎಂದು ರಣವೀರ್ ಸಿಂಗ್ ನೆನಪಿಸಿದ್ದಾರೆ.
ರಣವೀರ್ ಸಿಂಗ್ ತಮಾಷೆ ಪ್ರಜ್ಞೆ ಹಾಗೂ ತಕ್ಷಣ ನೀಡಿದ ಉತ್ತರಕ್ಕೆ ಮೌನವಾಗಿದ್ದ ಶೂಟಿಂಗ್ ಸೆಟ್ ನಗೆಗಡಲಲ್ಲಿ ತೇಲಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧುರಂಧರ್ ಸಿನಿಮಾದಿಂದ ರಣವೀರ್ ಸಿಂಗ್ ಜನಪ್ರಿಯತೆ ಮಾತ್ರವಲ್ಲ, ಬಾಲಿವುಡ್‌ನ ಅತ್ಯಂತ ವಿಶೇಷ ಹೀರೋ ಎಂದೇ ಗುರುತಿಸಿಕೊಂಡಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 2018ರಲ್ಲಿ ಮದುವೆಯಾಗಿದ್ದಾರೆ. 2024ರಲ್ಲಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.ಇದೀಗ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅಭಿಮಾನಿಗಳು, ಬಾಲಿವುಡ್ ಸೆಲೆಬ್ರೆಟಿಗಳು ಬಾಲಿವುಡ್ ಜೋಡಿಗೆ ಶುಭಹಾರೈಸುತ್ತಿದ್ದಾರೆ.


