ರಾಜಮೌಳಿ ಸಿನಿಮಾಗೆ 'ವಾರಣಾಸಿ' ಟೈಟಲ್ಆಗಿ ತೆಲುಗು ಫಿಲ್ಮ್ ನಗರಿಯ ಕಾಂಪೌಂಡ್‌ನಲ್ಲಿ ವಾರ್ ಶುರುವಾಗಿತ್ತು. ನಿಜ ಹೇಳ್ಬೇಕಂದ್ರೆ, 2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಆಗ ಶುರುವಾಯ್ತು ವಾರ್!
'ವಾರಣಾಸಿ' ಟೈಟಲ್ ಗೆ ತೆಲುಗಿನಲ್ಲಿ ಆಗಿತ್ತು ಭಾರಿ ಹೋರಾಟ..!
ಎಸ್ಎಸ್ರಾಜಮೌಳಿ ವಿವಾದಗಳಿಂದ ಸದಾ ದೂರ ಇದ್ದವರು.. ಈ ಕಾಂಟ್ರವರ್ಸಿಗಳಿಗೂ ರಾಜಮೌಳಿಗೂ ಆಗಿ ಬರೋದೇ ಇಲ್ಲ. ಮೌಳಿ ಯಾವ ವಿವಾದದಲ್ಲೂ ಸಿಕ್ಕಿ ಬಿದ್ದವರಲ್ಲ. ಆದ್ರೆ ಅದ್ಯಾಕೋ ಏನೋ.? ವಾರಣಾಸಿ ಅನ್ನೋ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಅನೌನ್ಸ್ ಮಾಡಿದ್ಮೇಲೆ ರಾಜಮೌಳಿಗೆ ಎದುರಾದ ಸವಾಲುಗಳು ಹಲವಾರು.. ಆ ಸವಾಲುಗಳ ಬಗ್ಗೆ ಎಲ್ಲೂ ಮೌನ ಮುರಿಯದ ಮೌಳಿ ಈಗ ಮೌನವಾಗೆ ಇದ್ದು ಭಾರೀ ಗಂಡಾಂತರಿಂದ ಪಾರಾಗಿದ್ದಾರೆ. ಹಾಗಾದ್ರೆ ಏನದು ಗಂಡಾಂತರ.. ಜಕ್ಕಣ್ಣ ಪಾರಾಗಿದ್ದು ಹೇಗೆ?
ಸಿನಿಮಾ ಮಂದಿ ಅಂದ್ರೆ ಒಂದಲ್ಲೊಂದು ವಿವಾದಗಳನ್ನ ಮೈ ಮೇಲೆ ಹೊದ್ದುಕೊಂಡೇ ಇರ್ತಾರೆ. ಯಾಕಂದ್ರೆ ಅದು ಕಲರ್ಫುಲ್ ಜಗತ್ತು. ಆದ್ರೆ ಯಾವ್ದೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಳ್ಳದೇ ಸೇಫ್ಆಗಿ ಸ್ಮೂತ್ ಆಗಿ ಕೆಲಸ ಮಾಡಿಕೊಂಡು ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅನ್ನೋಕಿರೀಟ ಮುಡಿಗೇರಿಸಿಕೊಂಡವರು ಎಸ್ಎಸ್ರಾಜಮೌಳಿ. ಆದ್ರೆ ಈ ರಾಜಮೌಳಿ ಎಷ್ಟೇ ಪ್ರಯತ್ನ ಪಟ್ರೂ ವಿವಾದಗಳು ಇವರನ್ನೂ ಬಿಡಲಿಲ್ಲ. ಬಾಹುಬಲಿ ಆರ್‌ಆರ್‌ಆರ್ ಸಿನಿಮಾಗಳ ಬಳಿಕ ಕೈಗೆತ್ತಿಕೊಂಡ ವಾರಣಾಸಿ ಸಿನಿಮಾ ವಿವಾದದಿಂದ ರಾಜಮೌಳಿಯ ನಿದ್ದಿ ಕೆಡಿಸಿತ್ತು..
ರಾಜಮೌಳಿ-ಮಹೇಶ್ಬಾಬುಗೆ ಕಾಡುತ್ತಿತ್ತು ಟೈಟಲ್ ವಿವಾದ; 'ವಾರಣಾಸಿ' ಟೈಟಲ್ಗೆ ತೆಲುಗಿನಲ್ಲಿ ಆಗಿತ್ತು ಭಾರಿ ಹೋರಾಟ..!
ಹೌದು, ತೆಲುಗು ಚಿತ್ರರಂಗದಲ್ಲಿ ಹುಟ್ಟಿಕೊಂಡಿದ್ದ ಬಿಸಿಬಿಸಿ ಟೈಟಲ್ ವಾರ್ ಅಂದ್ರೆ ಅದು ಎಸ್ಎಸ್ ರಾಜಮೌಳಿ ಹಾಗು ಮಹೇಶ್ ಬಾಬು ಕಾಂಬಿನೇಷನ್ ನ ಸಿನಿಮಾ ಶೀರ್ಷಿಕೆ ವಿವಾದ. ರಾಜಮೌಳಿ ತನ್ನ ಮುಂದಿನ ಸಿನಿಮಾ ಟೈಟಲ್ವಾರಣಾಸಿ ಎಂದು ಘೋಷಣೆ ಮಾಡಿದ್ರು.
ಆರ್‌ಆರ್‌ಆರ್ ಜಮಾನಾ ಮುಗಿದು,ಜೇಮ್ಸ್ ಬಾಂಡ್ ಲೆವೆಲ್‌ನ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಮಾಡೋಕೆ ಜ್ಯಾಕ್ ಹಾಕಿರೋ ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬುಗಾಗಿ ನೆಕ್ಸ್ಟ್ ಯಾವ ಶೀರ್ಷಿಕೆ ಹಿಡಿತಾರೆ ಅನ್ನೋ ಕುತೂಹಲ ಇತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ‘ವಾರಣಾಸಿ’ ಅನ್ನೋ ಪವರ್‌ಫುಲ್ ಶೀರ್ಷಿಕೆ ಅನೌನ್ಸ್ ಮಾಡ್ತಿದ್ದಂತೆಯೇ ಫ್ಯಾನ್ಸ್ ಖುಷಿ ಪಟ್ಟಿದ್ರು. ಆದ್ರೆ, ತೆಲುಗು ಚಿತ್ರರಂಗದಲ್ಲಿ ಸಣ್ಣ ಮಟ್ಟದ ಭೂಕಂಪ ಸೃಷ್ಟಿಯಾಗಿತ್ತು. ನನ್ನ ಪರ್ಮಿಷನ್ ಇಲ್ಲದೇ ಈ ಹೆಸರನ್ನ ರಾಜಮೌಳಿ ಹೇಗೆ ಬಳಸಿಕೊಳ್ತಾರೆ? ಅಂತ ನಿರ್ದೇಶಕ ಸುಬ್ಬಾರೆಡ್ಡಿ ಮೌಳಿ ವಿರುದ್ಧ ತೊಡೆ ತಟ್ಟಿದ್ರು..
ವಾರಣಾಸಿ ಟೈಟಲ್ ಆಗಿ ತೆಲುಗು ಫಿಲ್ಮ್ ನಗರಿಯ ಕಾಂಪೌಂಡ್‌ನಲ್ಲಿ ವಾರ್ ಶುರುವಾಗಿತ್ತು. ನಿಜ ಹೇಳ್ಬೇಕಂದ್ರೆ, 2023ರಲ್ಲೇ ‘ವಾರಣಾಸಿ’ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿಯಲ್ಲಿ ಸುಬ್ಬಾರೆಡ್ಡಿ ಆಫೀಶಿಯಲ್ ಆಗಿ ರಿಜಿಸ್ಟರ್ ಮಾಡಿಸಿಕೊಂಡು ಕಥೆ ರೆಡಿ ಮಾಡಿಕೊಳ್ತಿದ್ರು. ಆದ್ರೆ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್‌ರಂತ ಬಿಗ್ ರೇಂಜ್ ಸ್ಟಾರ್ಸ್‌ಗಳಿರೋ ಜ್ಯಾಕ್‌ಪಾಟ್ ಪ್ರಾಜೆಕ್ಟ್‌ಗೆ ಈ ಹೆಸರೇ ಬೇಕು ಅಂತ ರಾಜಮೌಳಿ ಅನೌನ್ಸ್ ಮಾಡಿದಾಗ ಸುಬ್ಬಾರೆಡ್ಡಿ ಹರ್ಟ್ ಆಗಿದ್ರು. ಕೊನೆಗೆ ತೆಲುಗು ಫಿಲ್ಮ್ ಛೇಂಬರ್‌ಗೆ ವಿಷಯ ತಲುಪಿ, ರಾಜಿ ಸಂಧಾನಕ್ಕೆ ರಾಜಮೌಳಿ ಹಾಗು ಸುಬ್ಬಾರೆಡ್ಡಿಯನ್ನ ಕರೆಯಲಾಯ್ತು.
ಕಣ್ಮರೆ ಆಯ್ತು 'ವಾರಣಾಸಿ'ಗೆ ಇದ್ದ ದೊಡ್ಡ ಗಂಡಾಂತರ
ದೊಡ್ಡ ಸಮಸ್ಯೆ ಬಗೆ ಹರಿದಿದ್ದಕ್ಕೆ ನಿಟ್ಟುಸಿರು ಬಿಟ್ಟ ಜಕ್ಕಣ್ಣ
ರಾಜಮೌಳಿ ಹಾಗು ಸುಬ್ಬಾರೆಡ್ಡಿ ಮಧ್ಯೆ ಕಳೆದ ಒಂದು ವರ್ಷದಿಂದ ಟೈಟಲ್ವಿವಾದ ಬಗೆ ಹರಿಸಲು ಪಂಚಾಯ್ತಿ ಮಾಡಲಾಗುತ್ತಿತ್ತು. ವಿಷಯ ಸೀರಿಯಸ್ ಆಗ್ತಿದ್ದಂತೆಯೇ ರಂಗಕ್ಕಿಳಿದ ತೆಲುಗು ಫಿಲ್ಮ್ ಪ್ರೊಡ್ಯೂಸರ್ಸ್ ಕೌನ್ಸಿಲ್ ಮತ್ತು ತೆಲುಗು ಡೈರೆಕ್ಟರ್ಸ್ ಅಸೋಸಿಯೇಷನ್ ಡೈರೆಕ್ಟರ್ ಸುಬ್ಬಾರೆಡ್ಡಿ ಜೊತೆ ಹೈ-ವೋಲ್ಟೇಜ್ ಚರ್ಚೆ ಮಾಡಿದ್ರು. ಕೊನೆಗೆ ರಾಜಮೌಳಿಯಂತಹ ದಿಗ್ಗಜನ ಸಿನಿಮಾಗೆ ಈ ಟೈಟಲ್ ಸಿಕ್ಕಿದ್ರೆ ಇಡೀ ತೆಲಗು ಚಿತ್ರರಂಗಕ್ಕೇ ಹೆಮ್ಮೆ ಅನ್ನೋ ಅಂತ ವಾರಣಾಸಿ ಟೈಟಲ್ಅನ್ನ ರಾಜಮೌಳಿಗೇ ಬಿಟ್ಟು ಕೊಟ್ಟಿದ್ದಾರೆ. ಅಲ್ಲಿಗೆ ನಿರ್ದೇಶಕ ರಾಜಮೌಳಿ ಟೈಟಲ್ವಿವಾದಿಂದ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ತಪ್ಪಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..


