ರಾಮಾಯಣ ಪ್ರಚಾರದ ವೇಳೆ ಹಾಲಿವುಡ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂಬರುವ 'ಟಾಕ್ಸಿಕ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವು ಅತ್ಯಂತ ರೋಮಾಂಚನಕಾರಿ, ಸಾಹಸಮಯ ಮತ್ತು ಭಾವನಾತ್ಮಕವಾಗಿದ್ದು, 'ಜಾನ್ ವಿಕ್' ಖ್ಯಾತಿಯ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಯಶ್ ಅವರ ಈ ಹೇಳಿಕೆಗಳು ಹಾಲಿವುಡ್ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಇತ್ತೀಚಿಗೆ ರಾಕಿ ಭಾಯ್ ಕೊಟ್ಟಿರುವ ಈ ಒಂದು ಹೇಳಿಕೆ ಹಾಲಿವುಡ್ ಮಾಧ್ಯಮಗಳಲ್ಲಿ ಭಾರಿ ಸದ್ದು ಸುದ್ದಿ ಮಾಡುತ್ತಿದೆ. ಹಾಲಿವುಡ್ ಅಂಗಳದಲ್ಲಿ ರಾಮಾಯಣ ಪ್ರಚಾದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಜಪವನ್ನೆ ಮಾಡಿದ್ದಾರೆ. ವೀಕ್ಷಕರು ಚಿತ್ರಮಂದಿರದಿಂದ ಹೊರಬರುವಾಗ ಪೂರ್ತಿಯಾಗಿ ತೃಪ್ತರಾಗಿ, ರೋಮಾಂಚನಗೊಳ್ಳಲಿದ್ದಾರೆ ಎಂಬ ದೃಢವಾದ ನಂಬಿಕೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಕುರಿತಾದ ಇತ್ತೀಚಿನ ಹೇಳಿಕೆ ಹಾಲಿವುಡ್ ಮಾಧ್ಯಮದಲ್ಲಿ ಸದ್ದು
ಇನ್ನು 'ಟಾಕ್ಸಿಕ್' ಸಿನಾಮಾವನ್ನ ಅತ್ಯಂತ ರೋಮಾಂಚನಕಾರಿ, ಸಾಹಸಮಯ, ವೈಲ್ಡ್, ಬಂಡಾಯದ ಮನೋಭಾವವನ್ನೋಳಗೊಂಡಿದ್ದಾಗಿದೆ. ಹಾಗೂ ಅದ್ದೂರಿ ಕ್ಯಾನ್ವಾಸ್‌ನ ಸಿನಿಮಾವಾಗಿದೆ ಎಂದಿದ್ದಾರೆ.ಜೊತೆಗೆ ಅತ್ಯಂತ ಭಾವನಾತ್ಮಕ ಮತ್ತು ನೈಜತೆಗೆ ಹತ್ತಿರವಾಗಿರುವ ಸಿನಿಮಾ ಎಂದು ಯಶ್ ವರ್ಣಿಸಿದ್ದಾರೆ.
ಮನದಾಳದ ಮಾತನ್ನ ಹಂಚಿಕೊಂಡ ರಾಕಿ ಭಾಯ್ ಯಶ್
ಇನ್ನು ಸಿನಿಮಾ ಮೇಲಿನ ಪ್ರೀತಿ ಹಾಗೆ ಭರವಸೆಯನ್ನ ವ್ಯಕ್ತಪಡಿಸುತ್ತಾ ಯಶ್ ಸಾಹಸ ಪ್ರಧಾನ ಸಿನಿಮಾಗಳ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ (JJ Perry) ಅವರೊಂದಿಗೆ ಕೆಲಸ ಮಾಡಿದ್ದು ಅತ್ಯುತ್ತಮ ಅನುಭವವಾಗಿತ್ತು ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.
ಜೊತೆಗೆ 'ಜಾನ್ ವಿಕ್' (John Wick) ನಂತಹ ಉನ್ನತ ಮಟ್ಟದ ಸಿನಿಮಾಗಳಿಂದ ಪ್ರೇರಿತವಾಗಿ ಈ ಚಿತ್ರದ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ. ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಪ್ರತಿಯೊಂದು ಆಕ್ಷನ್ ದೃಶ್ಯವೂ ಕೇವಲ ಸಾಹಸಕ್ಕಾಗಿ ಇರದೆ, ಆಳವಾದ ಭಾವನೆಗಳಿಂದ ಕೂಡಿರುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನ್ನಲ್ಲಿ ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಭದಲ್ಲಿಯೂ ಯಶ್ ಟಾಕ್ಸಿಕ್ ಸಿನಿಮಾದ ಜಪವನ್ನೆ ಮಾಡಿದ್ದು, 'ಟಾಕ್ಸಿಕ್' ಕುರಿತಾದ ಯಶ್ ಹೇಳಿಕೆ ಹಾಲಿವುಡ್ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.


