Asianet Suvarna News Asianet Suvarna News

ರಾಶ್ ಡ್ರೈವಿಂಗ್ ಅಪಘಾತ, ಕುಡಿದ ಮತ್ತಿನಲ್ಲಿ ನಿಂದನೆ: ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ

ಬಾಲಿವುಡ್ ನಟಿ ರವೀನಾ ಟಂಡನ್ ಕುಡಿದ ಮತ್ತಿನಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ನಟಿ ರವೀನಾರನ್ನು ಸುತ್ತುವರೆದು ಪ್ರತಿಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Drunken state Actress Raveena Tandon assults accident victims after her drivers Rash driving in Bandra akb
Author
First Published Jun 2, 2024, 11:17 AM IST

ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ಕುಡಿದ ಮತ್ತಿನಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ನಟಿ ರವೀನಾರನ್ನು ಸುತ್ತುವರೆದು ಪ್ರತಿಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ಅಂದರೆ ಶನಿವಾರ ತಡರಾತ್ರಿ ಈ ಮುಂಬೈನ ಬಾಂದ್ರಾ ಉಪನಗರದಲ್ಲಿ ಈ ಘಟನೆ ನಡೆದಿದೆ. 

ಪ್ರಾಥಮಿಕ ವರದಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಕಾರು ಚಾಲಕ ನಿರ್ಲಕ್ಷ್ಯದಿಂದ ವಾಹನ  ಚಾಲನೆ (rash driving) ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಜನ ಸೇರಿ ಇದನ್ನು ಪ್ರಶ್ನಿಸಿದಾಗ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ರವೀನಾ ಟಂಡನ್ ಕಾರಿನಿಂದ ಇಳಿದು ಬಂದು ಅಪಘಾತ ಸಂತ್ರಸ್ತರನ್ನು ನಿಂದಿಸಿ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. 

ಮಗಳಿಗೆ ಲವ್ ಮಾಡೋದ್ಹೇಗೆಂದು ಹೇಳಿ ಕೊಟ್ಟ ಬಾಲಿವುಡ್ ನಟಿ ರವೀನಾ ಟಂಡನ್

ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಕಾಣಿಸುವಂತೆ  ಸ್ಥಳೀಯರು ಬಾಲಿವುಡ್ ನಟಿಯನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡುವುದನ್ನು ಕಾಣಬಹುದು. 'ನೀವು ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ನನ್ನ ಮೂಗಿನಿಂದ ರಕ್ತ ಸುರಿಯುತ್ತಿದೆ' ಎಂದು ಸಂತ್ರಸ್ತರಲ್ಲಿ ಒಬ್ಬರು ಹೇಳುವುದನ್ನು ಕೇಳಬಹುದಾಗಿದೆ. ಘಟನೆಯೂ ಮೊಬೈಲ್ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ನಟಿ 'ದಯವಿಟ್ಟು ವೀಡಿಯೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಜನ ಹಲ್ಲೆಗೆ ಮುಂದಾದಾಗ ದಯವಿಟ್ಟು ನನಗೆಎ ಹೊಡೆಯಬೇಡಿ ಎಂದು  ನಟಿ ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. 

ನಂತರ ಅಪಘಾತ ಸಂತ್ರಸ್ತರ ಸಂಬಂಧಿ ಬಾಂದ್ರಾ ನಿವಾಸಿ ಮೊಹಮ್ಮದ್ ಘಟನೆಯನ್ನು ವಿವರಿಸಿದ್ದು, ತನ್ನ ತಾಯಿ, ಸಹೋದರಿ ಮತ್ತು ಸೊಸೆ ರಿಜ್ವಿ ಕಾಲೇಜು ಬಳಿ ಹೋಗುತ್ತಿದ್ದಾಗ ರವೀನಾ ಅವರ ಕಾರು ಚಾಲಕ ತನ್ನ ತಾಯಿಯ ಮೇಲೆ ಕಾರು ಹತ್ತಿಸಿದ್ದಾನೆ ಎಂದು ಅವರು ದೂರಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಾರು ಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ಕುಡಿದ ಅಮಲಿನಲ್ಲಿದ್ದ ರವೀನಾ ಕೂಡ ಮನೆಯಿಂದ ಹೊರ ಬಂದು ನನ್ನ ತಾಯಿಗೆ ಹೊಡೆದಿದ್ದಾರೆ ಅವಳ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಮೊಹಮ್ಮದ್ ದೂರಿದ್ದಾರೆ. 

50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ

ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರೊಂದಿಗೆ ನಾವು ದೂರು ದಾಖಲಿಸುವುದಕ್ಕಾಗಿ 4 ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾದರೂ ಪೊಲೀಸರು ದೂರು ಸ್ವೀಕರಿಸಿಲ್ಲ, ಪೊಲೀಸ್ ಠಾಣೆಯಲ್ಲೇ ಪ್ರಕರಣ ಇತ್ಯರ್ಥಪಡಿಸುವಂತೆ ಅವರು ನಮ್ಮನ್ನು ಕೇಳಿದ್ದಾರೆ. ಆದರೆ ನಾವು ಅವರೊಂದಿಗೆ ಏಕೆ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಒತ್ತಾಯಿಸುತ್ತೇನೆ ಎಂದು ಮೊಹಮ್ಮದ್ ಅವರು ಹೇಳಿದ್ದಾರೆ. ಆದರೆ ಘಟನೆ ಕುರಿತು ರವೀನಾ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಜೂಹಿಯಿಂದ ರವೀನಾವರೆಗೆ.. ಬಾಲಿವುಡ್ ಬೆಡಗಿಯರೂ ಅವರ ಸಿಕ್ಕಾಪಟ್ಟೆ ಸಿರಿವಂತ ಗಂಡಂದಿರೂ..!

 

Latest Videos
Follow Us:
Download App:
  • android
  • ios