Asianet Suvarna News Asianet Suvarna News

ಮಗಳಿಗೆ ಲವ್ ಮಾಡೋದ್ಹೇಗೆಂದು ಹೇಳಿ ಕೊಟ್ಟ ಬಾಲಿವುಡ್ ನಟಿ ರವೀನಾ ಟಂಡನ್

ಪ್ರೀತಿ ಮಾಡಲು ಒಂದು ವಯಸ್ಸಿದೆ. ಹೀಗಂತ ಹೇಳಿದ್ರೆ ಜನರು ನಗ್ತಾರೆ. ಅದ್ರಲ್ಲೂ ಯುವಕರು, ಅಲ್ಲಿತನಕ ಕಾಯೋಕೆ ಆಗುತ್ತಾ ಎನ್ನುತ್ತಾರೆ. ಆದ್ರೆ ಜೀವನದಲ್ಲಿ ಸಕ್ಸಸ್ ಬೇಕೆಂದ್ರೆ ಕಾಯ್ಲೇಬೇಕು ಅನ್ನೋದು ನಟಿ ಅಭಿಪ್ರಾಯ. 
 

Raveena Tandon Gives Love Advice To Rasha Every Person Should Know The Right Age Of Love roo
Author
First Published Apr 26, 2024, 12:29 PM IST

ಪ್ರೀತಿಗೆ ವಯಸ್ಸಿನ ಗಡಿ ಇಲ್ಲ, ಜನ್ಮದ ನಿರ್ಬಂಧವಿಲ್ಲ.. ಪ್ರೀತಿ ಮಾಡುವ ವ್ಯಕ್ತಿಗಳು ಮನಸ್ಸಿನ ಮಾತನ್ನು ಮಾತ್ರ ಕೇಳ್ಬೇಕು ಎನ್ನುವ ಮಾತಿದೆ. ಆದ್ರೆ ಈ ಮಾತನ್ನು ನಿಜ ಜೀವನದಲ್ಲಿ ಪಾಲಿಸಬೇಕಾಗಿಲ್ಲ. ಪ್ರೀತಿ ಹಾಗೂ ವಯಸ್ಸು ಎನ್ನುವ ವಿಷ್ಯ ಬಂದಾಗ, ಭವಿಷ್ಯದ ಬಗ್ಗೆ ಆಲೋಚನೆ ಮಾಡುವ, ಸುಂದರ ಬದುಕು ಕಟ್ಟಿಕೊಳ್ಳಲು ಬಯಸುವ ಜನರು ಖಂಡಿತವಾಗಿಯೂ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ನಾವೀಗ ಯಾಕೆ ಈ ವಿಷ್ಯ ಹೇಳ್ತಿದ್ದೇವೆ ಅಂದ್ರೆ ನಟಿ ರವೀನಾ ಟಂಡನ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಮಗಳ ಡೇಟಿಂಗ್ ಸುದ್ದಿ ಹರಿದಾಡುತ್ತಿರುವ ಈ ಸಮಯದಲ್ಲಿ ಮಗಳಿಗೆ ಲವ್ ಟ್ರೈನಿಂಗ್ ನೀಡಿದ್ದಾರೆ. 

90ರ ದಶಕದ ನಟಿ ನಟಿ ರವೀನಾ ಟಂಡನ್ (Raveena Tandon) ಅವರ ಪುತ್ರಿ ರಾಶಾ (Rasha) ಮತ್ತು ಮಲೈಕಾ ಅರೋರಾ (Malaika Arora) ಖಾನ್ ಅವರ ಮಗ ಅರ್ಹಾನ್ (Arhaan) ಸಂಬಂಧ ಚರ್ಚೆಯಲ್ಲಿದೆ. ರಾಶಾಗೆ ಈಗ 19 ವರ್ಷ ವಯಸ್ಸು. ಇನ್ನು ಅರ್ಹಾನ್ ಗೆ 21 ವರ್ಷ ವಯಸ್ಸು. ಇಬ್ಬರೂ ಅನೇಕ ಬಾರಿ ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅವರು ಜೊತೆಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರೂ ಪ್ರೀತಿ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ರವೀನಾ ಟಂಡನ್ ತನ್ನ ಮಗಳಿಗೆ ಪ್ರೀತಿಯ ಜ್ಞಾನ ತುಂಬಿದ್ದಾರೆ. ಫಿಲ್ಮಿ ಜ್ಞಾನ್ ಪಾಡ್‌ಕಾಸ್ಟ್‌ ನಲ್ಲಿ ರವೀನಾ ಟಂಡರ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಮಗಳಿಗೆ ರವೀನಾ ಪ್ರೀತಿಯಾ ಪಾಠ ಹೇಳುವಂತೆ ಹೇಳಿದ್ದಾರೆ.

ರಾಮಾಯಣ ಮಾಡ್ಬೇಕು, ರಾಮನಾಗಿ ನಾನು, ಸೀತೆಯಾಗಿ ನೀನು ನಟಿಸ್ಬೇಕು ಎಂದಿದ್ರಂತೆ ಡಾ ರಾಜ್‌ಕುಮಾರ್!

ಈ ಸಮಯದಲ್ಲಿ ಉತ್ತರ ನೀಡಿದ ನಟಿ ರವೀನಾ ಟಂಡನ್, ಮಗಳಿಗೆ ಉಪಯುಕ್ತ ಸಲಹೆ ನೀಡಿದ್ದಾರೆ. ಸದ್ಯ ಕೇವಲ ಅಧ್ಯಯನ ಮತ್ತು ವೃತ್ತಿಯತ್ತ ಗಮನ ಹರಿಸಬೇಕು. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸ್ವಲ್ಪ ಪ್ರಾಕ್ಟಿಕಲ್ ಆಗಿರಬೇಕು. ಪ್ರೀತಿಗೆ ಇದು ಸರಿಯಾದ ಸಮಯವಲ್ಲ ಎಂದು ರವೀನಾ ಟಂಡನ್ ಹೇಳಿದ್ದಾರೆ.

ನಟಿ ರವೀನಾ ಟಂಡನ್ ಮಾತ್ರವಲ್ಲ ಎಲ್ಲ ತಂದೆ – ತಾಯಂದಿರು ಮಕ್ಕಳಿಗೆ ಇಂಥ ಸಲಹೆ ನೀಡುವ ಅವಶ್ಯಕತೆ ಇದೆ. ಪ್ರೀತಿಗೆ ಸರಿಯಾದ ವಯಸ್ಸು ಯಾವುದು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಈಗಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲೇ ಪ್ರೀತಿಗೆ ಬೀಳ್ತಿದ್ದಾರೆ. ಹೈಸ್ಕೂಲ್, ಕಾಲೇಜಿಗೆ ಹೋಗುವ ವಯಸ್ಸಿನಲ್ಲೇ ಡೇಟ್ ಮಾಡೋದು ಒಂದು ಟ್ರೆಂಡ್ ಆಗಿದೆ. ಕಾಲೇಜ್ ನಲ್ಲಿ ಒಂದೂ ರೋಮ್ಯಾಂಟಿಕ್ ಸಂಬಂಧ ಇಲ್ಲದೆ ಹೋದ್ರೆ ಹೇಗೆ ಎಂದು ಯುವಜನತೆ ಭಾವಿಸ್ತಾರೆ. ಮುಂದಿನ ಜೀವನದ ಬಗ್ಗೆ ಆಲೋಚನೆ ಮಾಡದೆ ಡೇಟ್, ಸುತ್ತಾಟದಲ್ಲಿ ಸಮಯ ಹಾಳು ಮಾಡ್ತಾರೆ. ಆದ್ರೆ ಇದು ಸಂಪೂರ್ಣ ತಪ್ಪು. 15- 16ನೇ ವಯಸ್ಸಿನಲ್ಲಿ ಡೇಟ್ ಮಾಡೋದು ಸೂಕ್ತವಲ್ಲ. ಇದು ಡೇಟ್ ಗೆ ಸೂಕ್ತ ವಯಸ್ಸಲ್ಲ. ಈ ವಯಸ್ಸಿನಲ್ಲಿ ಶಕ್ತಿಯು ಅತ್ಯಧಿಕವಾಗಿರುವ ಕಾರಣ, ಸರಿಯಾದ ದಿಕ್ಕಿನಲ್ಲಿ ಶಕ್ತಿಯನ್ನು ಬಳಸುವ ಅವಶ್ಯಕತೆಯಿದೆ. ಸರಿಯಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಬೇಕು. ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಿದ್ರೆ ಅವರ ಗುರಿ ತಲುಪುವುದು ಸುಲಭವಾಗುತ್ತದೆ.  

ಏನೇ ಮಾಡಿದ್ರೂ ಬರ್ತಿರೋ ಕೋಪ ತಡೆಯೋಕೇ ಆಗೋಲ್ವಾ? ವಿಜ್ಞಾನಿಗಳು ಹೇಳೋ ಈ ಟಿಪ್ಸ್ ಫಾಲೋ ಮಾಡಿ!

ಮನಸ್ಸಿನಲ್ಲಿ ಪ್ರೀತಿ ಚಿಗುರಿದೆ ಎನ್ನುವ ಕಾರಣಕ್ಕೆ ನೀವು ಪ್ರೀತಿಯ ಹಿಂದೆ ಹೋಗುವುದು ಸರಿಯಲ್ಲ. ಪ್ರೀತಿಯನ್ನು ಒಂದು ಹಂತದಲ್ಲಿ ಮನಸ್ಸಿನಿಂದ ಮಾತ್ರವಲ್ಲ ಮೆದುಳಿನಿಂದ ನೋಡ್ಬೇಕಾಗುತ್ತದೆ. ಸಂಬಂಧ ಬೆಳೆಸಲು ಆತುರಪಡಬಾರದು. ನೀವು ಪ್ರಬುದ್ಧರಾದ್ಮೇಲೆ ಸೂಕ್ತ ಸಂಗಾತಿ ಆಯ್ಕೆ ಸಾಧ್ಯ. ಚಿಕ್ಕ ವಯಸ್ಸಿನಲ್ಲಿ ಮನಸ್ಸು ಚಂಚಲವಾಗಿರುವ ಕಾರಣ ಪ್ರೀತಿ, ಆಕರ್ಷಣೆ ವ್ಯತ್ಯಾಸ ತಿಳಿಯೋದಿಲ್ಲ. 

Follow Us:
Download App:
  • android
  • ios