Asianet Suvarna News Asianet Suvarna News

ಐಶ್ವರ್ಯ ರೈ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್​ ಕ್ರಿಕೆಟಿಗ! ಥೂ.. ನಿಮ್​ ಜನ್ಮಕ್ಕೆ ಎಂದು ನಟಿಯ ಫ್ಯಾನ್ಸ್​ ಕೆಂಡಾಮಂಡಲ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ನಟಿ ಐಶ್ವರ್ಯ ರೈ ಅವರ ಕುರಿತು ಅಸಭ್ಯ ಹೇಳಿಕೆ ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ.
 

Abdul Razzaqs Aishwarya Rai dig at PCB Pakistan team draws flak suc
Author
First Published Nov 14, 2023, 3:33 PM IST

ಏಕದಿನ ವಿಶ್ವಕಪ್‌ 2023ರಿಂದ ಕಳಪೆ ಪ್ರದರ್ಶನ ಮಾಡಿರುವ  ಪಾಕಿಸ್ತಾನ ತಂಡ ತನ್ನ ದೇಶಕ್ಕೆ ಕಾಲ್ಕಿತ್ತಿದೆ. ಅತ್ಯಂತ ಹೀನಾಯವಾಗಿ ಸೋತಿರುವ ತಂಡದ ವಿರುದ್ಧ ಪಾಕಿಸ್ತಾನದ ಪ್ರೇಮಿಗಳನ್ನು ಹೊರತುಪಡಿಸಿ ಉಳಿದವರೆಲ್ಲವೂ ಟೀಕಿಸುವುದು ನಡೆದೇ ಇದೆ. ಅದೇ ಇನ್ನೊಂದೆಡೆ ಪಾಕಿಸ್ತಾನ ದೇಶ ಆರ್ಥಿಕವಾಗಿ ಕಂಗೆಟ್ಟು, ಭಿಕ್ಷೆ ಬೇಡುವಂಥ ಹೀನಾಯ ಸ್ಥಿತಿ ತಲುಪಿದೆ. ಆದರೂ ಪಾಕಿಗಳು ತಮ್ಮ ಬುದ್ಧಿಯನ್ನು ಬಿಡುವುದಿಲ್ಲ ಎನ್ನುವ ಆರೋಪದ ನಡುವೆಯೇ  ಪಾಕಿಸ್ತಾನದ  ಮಾಜಿ ಕ್ರಿಕೆಟಿಗನೊಬ್ಬ ನಟಿ ಐಶ್ವರ್ಯ ರೈ ಅವರ ಕುರಿತಾಗಿ ಅಸಭ್ಯ ಮಾತನಾಡಿದ್ದು, ಪಾಕಿಸ್ತಾನಿಗಳ ಮನೋಸ್ಥಿತಿಯ ಬಗ್ಗೆ ಮತ್ತಷ್ಟು ಟೀಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
 

ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಇಂಥದ್ದೊಂದು ಕೀಳು ಮಟ್ಟದ ಮಾತನಾಡಿದ್ದಾರೆ.  ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಐಶ್ವರ್ಯ ರೈ ಅವರ ಉದಾಹರಣೆ ತೆಗೆದುಕೊಂಡಿದ್ದದಾರೆ. ನಾನು ಪಿಸಿಬಿ ಉದ್ದೇಶವೇನು ಎಂಬುದರ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇನೆ. ಹಿಂದೆ ನಾನು ಆಡುತ್ತಿದ್ದಾಗ ನನ್ನ ನಾಯಕ ಯೂನಿಸ್ ಖಾನ್ ಅವರ ನಿಲುವು ಏನು ಅಂತ ನನಗೆ ಗೊತ್ತಿತ್ತು. ಹೀಗಾಗಿ ನಾನು ಅಲ್ಲಾಹುವಿನ ಕೃಪೆಯಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಕೊಡುಗೆ ನೀಡಲು ಸಾಧ್ಯವಾಯ್ತು ಎಂದು ಅಬ್ದುಲ್‌ ರಜಾಕ್‌ ಹೇಳಿದ್ದಾರೆ. ಸದ್ಯ ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಮತ್ತು ಆಟಗಾರರ ಪ್ರದರ್ಶನಗಳ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಆಟಗಾರರನ್ನು ತಿದ್ದಿ, ಅವರನ್ನು ಬೆಳೆಸುವ ಉದ್ದೇಶ ನಮಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುತ್ತಲೇ ಐಶ್ವರ್ಯ ರೈ ಅವರ ವಿಷಯ ಎತ್ತಿದ್ದಾರೆ. 

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ

ನಾನು, ಐಶ್ವರ್ಯಾ ರೈ ಅವರನ್ನು ಮದುವೆಯಾಗಿ ನಂತರ ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ರಜಾಕ್ ಹೇಳಿದ್ದಾರೆ. ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರಿಂದ ತಂಡವು ಬೇಗನೆ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಳಗಿನ ಪ್ರಕ್ಷುಬ್ಧತೆಯ ಕುರಿತು ರಜಾಕ್​ ಮಾತನಾಡುತ್ತಿದ್ದರು. ಈ ವೇಳೆ ಅವರು ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನು ಮದುವೆಯಾಗಿರುತ್ತಿದ್ದರೆ ಉತ್ತಮ ಮಕ್ಕಳು ಹುಟ್ಟುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಹೇಳಿಕೆ ಕೊಟ್ಟಿದ್ದಾರೆ. ಅಬ್ದುಲ್ ರಜಾಕ್ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಇದು ಐಶ್ವರ್ಯ ರೈ ಅವರ ಅಭಿಮಾನಿಗಳನ್ನು ಮಾತ್ರವಲ್ಲದೇ ಪಾಕ್​ ಮನಸ್ಥಿತಿ ವಿರೋಧಿಗಳನ್ನು ಕೆರಳಿಸಿದೆ. ಪಾಕಿಸ್ತಾನದ ಬುದ್ಧಿ ಎಲ್ಲಿ ಬಿಡುತ್ತೀರಾ ಎಂದು ಹಲವರು ಕೆಂಡಾಮಂಡಲವಾಗಿದ್ದಾರೆ.  ಕ್ರಿಕೆಟ್​ ಆಡಳಿತಕ್ಕೂ ಐಶ್ವರ್ಯ ರೈಗೂ ಯಾವುದೇ ಸಂಬಂಧ ಇಲ್ಲ. ಅಂಥದ್ದರಲ್ಲಿ ಬೇರೆ ದೇಶದ, ಬೇರೆ ಧರ್ಮದ ನಟಿಯೊಬ್ಬಳನ್ನು ಮದುವೆಯಾಗಿ ಅವರಿಗೆ ಒಳ್ಳೆಯ ಮಕ್ಕಳು ಹುಟ್ಟುವುದಿಲ್ಲ ಎಂಬ ಬೇಡ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ದೇಶದ ನಟಿಯರ ಬಗ್ಗೆ ಮಾತನಾಡಿ, ಬಾಲಿವುಡ್ ನಟಿಯರು ನಿಮಗ್ಯಾಕೆ ಬೇಕು? ನೆಟ್ಟಗೆ ಆಡಲು ಬಾರದ ಪಾಕಿಗಳ ಉದಾಹರಣೆಗೆ ನಿಮಗೆ ಭಾರತದ ನಟಿ ಬೇಕಾಗಿತ್ತಾ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ನಿಮ್ಮ ದೇಶದ ಮಹಿಳೆಯೊಬ್ಬಳನ್ನು ಉದಾಹರಣೆ ಕೊಟ್ಟು ಭಾರತದ ಕ್ರಿಕೆಟಿಗರು ಹೇಳಿದ್ದರೆ, ಪಾಕಿಸ್ತಾನ ಪ್ರೇಮಿಗಳು ಹೇಗೆಲ್ಲಾ ವರ್ತಿಸುತ್ತಿದ್ದರು ಎಂದುಪ್ರಶ್ನಿಸಿದ್ದಾರೆ. 

ಬಿಗ್​ಬಾಸ್​ ಮನೆಯ ಗೋಡೆ ಹಾರಿಕೊಂಡು ಹೋಗೋ ಪ್ಲ್ಯಾನ್​! ವೈರಲ್​ ಆಯ್ತು ವರ್ತೂರು ಸಂತೋಷ್​ ಚರ್ಚೆ
 

Follow Us:
Download App:
  • android
  • ios