Asianet Suvarna News Asianet Suvarna News

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ

ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿ, ನಟ ಪ್ರಕಾಶ್​ ರಾಜ್​ ಮತ್ತೊಮ್ಮೆ ಟ್ರೋಲ್​ಗೆ ಒಳಗಾಗಿದ್ದಾರೆ. ನೆಟ್ಟಿಗರು ಹೇಳಿದ್ದೇನು?
 

Actor Prakash Raj has once again been trolled for criticizing PM Narendra Modi suc
Author
First Published Nov 14, 2023, 12:29 PM IST

ಇತ್ತೀಚೆಗೆ ಕಾಂಟ್ರವರ್ಸಿ ವಿಷಯಗಳಿಂದಲೇ ಬಹಳ ಚರ್ಚೆಯಲ್ಲಿರುವ ನಟ ಎಂದರೆ  ಪ್ರಕಾಶ್​ ರಾಜ್.​ ಇವರು ಏನೇ  ಮಾತನಾಡಿದರೂ ಅದು ಸುದ್ದಿಯಾಗುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಯಾರಾದರೂ ಏನೇ ಮಾತನಾಡಲಿ ಅಥವಾ ಪ್ರಧಾನಿಯವರು ಏನಾದರೂ ಹೇಳಿಕೆ ನೀಡಲಿ, ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಲಿ ಅದಕ್ಕೆ ಏಕಾಏಕಿ ಟೀಕೆ ಮಾಡುವುದು ಎಂದರೆ ಪ್ರಕಾಶ್​ ರಾಜ್​ ಅವರಿಗೆ ಇನ್ನಿಲ್ಲದ ಖುಷಿ. ಅಷ್ಟೇ ಅಲ್ಲದೇ ಬಿಜೆಪಿ ಪರವಾಗಿ ಯಾರಾದರೂ ಏನಾದರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದರೆ ಅವರ ಕಾಲೆಳೆಯುವುದು ಮೊದಲು ಇವರೇ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಪ್ರಧಾನಿ ಬೆಂಬಲಿಗರಿಂದ ಪ್ರಕಾಶ್​ ರಾಜ್​ ಸಕತ್​ ಟ್ರೋಲ್​ಗೆ ಒಳಗಾಗುವುದು ನಡೆದೇ ಇದೆ. ಇವರ ಮಾತನ್ನು ಬಹುತೇಕ ಕಾಂಗ್ರೆಸ್ಸಿಗರು ಒಪ್ಪಿ ಅದಕ್ಕೆ  ಕಮೆಂಟ್​ ಹಾಕಿದರೆ, ಬಿಜೆಪಿ ಬೆಂಬಲಿಗರು ಮಾತ್ರ ಅವರು ಹೇಳಿದ್ದೆಲ್ಲಾ ಸುಳ್ಳು ಎಂದು ಹೇಳುವ ಮೂಲಕ ಪದೇ ಪದೇ ಟಾಂಗ್​ ಕೊಡುವುದು ಉಂಟು.
 
ಇದೀಗ ಪ್ರಧಾನಿ ಮೋದಿವರು ಗಡಿ ಕಾಯುವ ಯೋಧರ ಜೊತೆ ದೀಪಾವಳಿ ಆಚರಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದ್ದಂತೆಯೇ ಅವರನ್ನು ರೇಗಿಸಲು ಹೋಗಿ ಪುನಃ ಟ್ರೋಲ್​ಗೆ ಒಳಗಾಗಿದ್ದಾರೆ ಪ್ರಕಾಶ್​ ರಾಜ್​. ಪ್ರಧಾನಿಯವರು ಹಲವು ವರ್ಷಗಳಿಂದ ದೀಪಾವಳಿಯನ್ನು ಯೋಧರ ಜೊತೆ ಆಚರಿಸುತ್ತಾ ಬಂದಿದ್ದಾರೆ. ಈ ಕುರಿತು ಮಾಹಿತಿ ನೀಡಿದ್ದ ಪ್ರಧಾನಿಯವರು ಕಳೆದ 30-35 ವರ್ಷಗಳಿಂದ ತಾವು ಜವಾನರ ಜೊತೆ ದೀಪಾವಳಿ ಆಚರಿಸುತ್ತಿರುವುದಾಗಿ ಹೇಳಿದ್ದಾರೆ. ತಾವು ಗುಜರಾತಿನ ಮುಖ್ಯಮಂತ್ರಿ ಮತ್ತು ಭಾರತದ ಪ್ರಧಾನಿಯಾಗುವ ಮುಂಚೆಯೇ ಯೋಧರ ಜೊತೆ ದೀಪಾವಳಿ ಆಚರಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರಕಾಶ್​ ರಾಜ್​ ಲೇವಡಿ ಮಾಡಿದ್ದಾರೆ. 

ಸ್ವಾತಂತ್ರ್ಯ ಸಿಕ್ಕಿದ್ದೇ 2014ರಲ್ಲಿ, ತಾಳ್ಮೆಯಿರಲಿ ಎಂದ ಪ್ರಕಾಶ್​ ರಾಜ್​: ಇಷ್ಟೆಲ್ಲಾ ಹತಾಶೆ ಒಳ್ಳೆದಲ್ಲ ಎಂದ ಕಂಗನಾ ಫ್ಯಾನ್ಸ್

ಇದಕ್ಕೆ ಕಾರಣವೂ ಉಂಟು. 2019ರಲ್ಲಿ ನರೇಂದ್ರ  ಮೋದಿಯವರು ಸಂದರ್ಶನವೊಂದರಲ್ಲಿ, ದೀಪಾವಳಿ ಸಂದರ್ಭದಲ್ಲಿ ಹಿಂದೆ ತಾವು ಐದು ದಿನಗಳು ಕಾಡಿನಲ್ಲಿ ಇರುವುದಾಗಿ ತಿಳಿಸಿದ್ದರು. ಇಂಥ ಕಾಡಿನ ಅನುಭವದಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸುವ ಛಲ ಬರುತ್ತದೆ ಎಂದಿದ್ದರು. ಪ್ರಕಾಶ್ ರಾಜ್​ ಅವರಂತೆಯೇ ಅವರ ಹಾಗೂ ಕಾಂಗ್ರೆಸ್ ಬೆಂಬಲಿಗರ ಪ್ರಶ್ನೆ ಏನೆಂದರೆ, ಅವರು ದೀಪಾವಳಿಯನ್ನು ಕಾಡಿನಲ್ಲಿ ಆಚರಿಸುವುದಾಗಿ ಒಂದೆಡೆ ಹೇಳಿದರೆ, ಇನ್ನೊಂದೆಡೆ ಯೋಧರ ಜೊತೆ ಆಚರಿಸುವುದಾಗಿ ಹೇಳಿದ್ದಾರೆ. ಈ ಎರಡು ಹೇಳಿಕೆಯಲ್ಲಿ ವ್ಯತ್ಯಾಸವಿದೆ ಎನ್ನುವುದು. ಇದೇ ಕಾರಣಕ್ಕೆ ಸುಳ್ಳುಗಾರ (Lie Lama) ಎನ್ನುವ ಮೂಲಕ ಪ್ರಧಾನಿಯವರನ್ನು ಟೀಕಿಸಿ ಪ್ರಕಾಶ್​ ರಾಜ್​ ಪೋಸ್ಟ್​ ಹಾಕಿದ್ದಾರೆ.

ಇದು ನರೇಂದ್ರ ಮೋದಿಯವರ ಅಭಿಮಾನಿಗಳನ್ನು ಕೆರಳಿಸಿದೆ. ನಾನು ದೀಪಾವಳಿಯ ಸಮಯದಲ್ಲಿ ಐದು ದಿನಗಳ ಕಾಲ ಕಾಡಿಗೆ ತೆರಳುತ್ತಿದ್ದೆ. ರೇಡಿಯೋ, ಪತ್ರಿಕೆ ಯಾವುದನ್ನೂ ಬಳಸದೆ, ಯಾವ ಜನರ ಸಂಪರ್ಕವೂ ಇಲ್ಲದೆ ಐದು ದಿನ ಒಂಟಿಯಾಗಿ ಇರುತ್ತಿದ್ದೆ. ಐದು ದಿನಕ್ಕಾಗುವಷ್ಟು ಆಹಾರ ಹೊಂದಿಸಿಕೊಂಡು ಹೋಗುತ್ತಿದ್ದೆ. ಈಗ ಒಟಿಯಾಗಿ, ಯಾರ ಸಂಪರ್ಕಕ್ಕೂ ಬಾರದಂತೆ ಇರುವಾಗ ನನಗೆ ನನ್ನ ಬದುಕನ್ನೇ ಅವಲೋಕಿಸುವುದಕ್ಕೆ, ನನ್ನ ಪ್ರತಿಬಿಂಬವನ್ನು ಕಾಣುವುದಕ್ಕೆ ಸಹಾಯವಾಗುತ್ತಿತ್ತು ಎಂದಿದ್ದರು. ಅಲ್ಲಿಗೆ ಅವರು ಹೇಳಿದ್ದು 30-35 ವರ್ಷಗಳ ಹಿಂದಿನ ಮಾತು. ಯೋಧರ ಜೊತೆ ದೀಪಾವಳಿ ಆಚರಿಸುವ ಮೊದಲು ತಾವು ಕಾಡಿನಲ್ಲಿ ಇದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಅಷ್ಟೂ ಅರ್ಥ ಮಾಡಿಕೊಳ್ಳದೇ ಸದಾ ಮೋದಿ ಜಪ ಮಾಡುವುದು ಸರಿಯಲ್ಲ ಎಂದಿದ್ದಾರೆ.  

ಇನ್ನು ಕೆಲವರು, ಯೋಧರು ನಿಮ್ಮ ಹಾಗೆ ಐಷಾರಾಮಿಯಾಗಿ ಪಟ್ಟಣದಲ್ಲಿ ಕುಳಿತುಕೊಳ್ಳುವುದಿಲ್ಲ. ಅವರು ಇರುವುದು ಕೂಡ ದುರ್ಗಮ ಕಾಡಿನಲ್ಲಿಯೇ. ನರೇಂದ್ರ  ಮೋದಿಯವರು ಈಗಲೂ ಯೋಧರ ಜೊತೆ ಕಾಡಿನಲ್ಲಿಯೇ ದೀಪಾವಳಿ ಆಚರಿಸುವುದು ಎಂದು ಪ್ರಕಾಶ್​ ರಾಜ್​ ಅವರನ್ನು ತಿವಿದಿದ್ದಾರೆ. ಇನ್ನು ಕೆಲವರು ನಿಮಗೆ ಮೋದಿಯವರ ಜಪ ಮಾಡಿದರೆ ತಿಂದದ್ದು ಜೀರ್ಣವಾಗಲ್ಲ ಎನಿಸುತ್ತದೆ ಎಂದಿದ್ದಾರೆ. ಹೀಗೆ ಸದಾ ಮೋದಿ ಮೋದಿ ಅನ್ನುತ್ತಿದ್ದರೆ ಆಸ್ಪತ್ರೆ ಸೇರಬೇಕಾಗುತ್ತದೆ ಎಂದೂ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ತೀರಾ ವೈಯಕ್ತಿಯ ವಿಷಯವನ್ನೂ ಕೆದಕಿ ನೀವು ಸುಮ್ಮನೇ ಮೂರು ಮದುವೆಯಾಗಿರುವ ಲೆಕ್ಕಾಚಾರ ಮಾತ್ರ ಮಾಡಿ, ಸುಮ್ಮನೇ ಮೋದಿಯವರ ಬಗ್ಗೆ ಲೆಕ್ಕಾಚಾರ  ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.  

ಬಾಯಲ್ಲಿ ಚೀಟಿ ಹಿಡಿದು ಶಿವಣ್ಣನ ಕೈಗೆ ಇತ್ತ ಇಲಿ: ಮೆಸೇಜ್​ ನೋಡಿ ಕುಣಿದಾಡಿದ ಸೆಂಚುರಿ ಸ್ಟಾರ್​ ಫ್ಯಾನ್ಸ್​!

Follow Us:
Download App:
  • android
  • ios