ಟೆಸ್ಲಾ, ಟಾಟಾ, ಮಹೀಂದ್ರ ಸೇರಿದಂತೆ ಪ್ರತಿಷ್ಠಿತ ಕಾರು ಕಂಪನಿಗಳನ್ನೇ ಸೌದಿ ಅರೇಬಿಯಾದ ಸೀರ್ ಕಂಪನಿ ನಡುಗಿಸಿದೆ. ಸೀರ್ ಕಂಪನಿ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬರೋಬ್ಬರಿ 670 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ.
ಸೌದಿ ಅರೇಬಿಯಾ (ಸೆ.23) ಎಲೆಕ್ಟ್ರಿಕ್ ಕಾರು ಕಂಪನಿಗಳಲ್ಲಿ ಟೆಸ್ಲಾ, ಟಾಟಾ ಮೋಟಾರ್ಸ್, ಮಹೀಂದ್ರ, ಚೀನಾದ ಕೆಲ ಪ್ರತಿಷ್ಠಿತ ಕಂಪನಿಗಳು ಮಾರುಕಟ್ಟೆಯ ಬಹುಪಾಲು ಆವರಿಸಿಕೊಂಡಿದೆ. ಇದೀಗ ಸೌದಿ ಅರೇಬಿಯಾದ ಸೀರ್ ಕಂಪನಿ ಪ್ರತಿಷ್ಠಿತ ಕಾರು ಕಂಪನಿಗಳನ್ನೇ ನಡುಗಿಸಿದೆ. ಸೀರ್ ಕಂಪನಿ ಎಕ್ಸೋಬಾಟ್ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ವಿಶೇಷ ಅಂದರೆ ಸೆಡಾನ್ ಹಾಗೂ ಎಸ್‌ಯುವಿ ಮಾದರಿಯಲ್ಲಿ ಕಾರು ಅನಾವರಣ ಮಾಡಲಾಗಿದೆ. ಊಹೆಗೂ ನಿಲುಕದ ವಿನ್ಯಾಸ, ಆಕರ್ಷಕ ಲುಕ್, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.
670 ಕಿ.ಮಿ ಮೈಲೇಜ್, ವಿಂಗ್ಸ್ ಡೋರ್
ಕಾರಿನಲ್ಲಿ ಹಲವು ವಿಶೇಷತೆಗಳಿವೆ. ಒಂದು ಬಾರಿ ಚಾರ್ಜ್ ಮಾಡಿದರೆ 670 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಟೆಸ್ಲಾ ಕಾರುಗಳಲ್ಲಿರುವಂತೆ ವಿಂಗ್ಸ್ ಡೋರ್ ನೀಡಲಾಗಿದೆ. ಹೀಗಾಗಿ ಕಾರಿನ ಡೋರ್‌ಗಳು ಸ್ಟೈಲೀಶ್ ಆಗಿ ಮೇಲಕ್ಕೆ ತೆರೆದುಕೊಳ್ಳಲಿದೆ. ಇನ್ನು ಕಾರು ಬರೋಬ್ಬರಿ 850 ಹೆಚ್‌ಪಿ ಪವರ್ ಹೊಂದಿದೆ. ಹೀಗಾಗಿ ಸ್ಪೋರ್ಟ್ಸ್ ಕಾರಿನ ರೀತಿಯ ಪರ್ಫಾಮೆನ್ಸ್, ಲಕ್ಷುರಿ ಕಾರಿ ರೀತಿಯ ಇಂಟಿರೀಯರ್, ಜೊತೆಗೆ ಎಕಾನಮಿ ಕಾರಿನ ರೀತಿಯ ಮೈಲೇಜ್ ನೀಡಲಿದೆ.
ಎಕ್ಸೋಬಾಟ್ ಕಾರಿನ ವಿನ್ಯಾಸವೇ ಎಲ್ಲರನ್ನು ಆಕರ್ಷಿಸುತ್ತಿದೆ. ಸಾಮಾನ್ಯ ಎಲೆಕ್ಟ್ರಿಕ್ ಕಾರುಗಳಿಗಿಂತ ಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ಸೆಡಾನ್ ಕಾರು 5.26 ಮೀಟರ್ ಉದ್ದವಿದ್ದರೆ, ಎಸ್‌ಯುವಿ ಕಾರು 5.02 ಮೀಟರ್ ಉದ್ದವಿದೆ. ಎರಡು ಕಾರುಗಳು 2.1 ಮೀಟರ್ ಅಗಲ ಹೊಂದಿದೆ. ಅತೀ ದೊಡ್ಡ ವಿಂಡ್‌ಶೀಲ್ಡ್ ಈ ಕಾರಿನ ಆಕರ್ಷಕಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಷ್ಟೇ 48 ಇಂಚಿನ ಕರ್ವ್ಡ್ 8K ಡಿಸ್‌ಪ್ಲೇ ನೀಡಲಾಗಿದೆ. ಸೆಂಟ್ರಲ್ ಸ್ಕ್ರೀನ್ ಟಚ್ ಸ್ಕ್ರೀನ್ 10.4 ಸೆಂಟ್ರಲ್ ಸ್ಕ್ರೀನ್ ನೀಡಲಾಗಿದೆ.
ಸೆಡಾನ್ ಹಾಗೂ ಎಸ್‌ಯುವಿ ಎಕ್ಸೋಬಾಟ್ ವಿಶೇಷತೆ
ಅತ್ಯಾಧುನಿಕ ತಂತ್ರಜ್ಞಾನ ನೀಡಲಾಗಿದೆ. ರೇರ್ ವೀಲ್ ಸ್ಟೀರಿಂಗ್, ಚಾಲಕ ಹಾಗೂ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಐ ತಂತ್ರಜ್ಞಾನಗಳಿಂದ ಮೂರು ಮೋಟಾರು ಬಳಸಲಾಗಿದ್ದು, ಆಲ್ ವ್ಹೀಲ್ ಡ್ರೈವ್ ನೀಡಲಾಗಿದೆ. 2.6 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಸೆಡಾನ್ 670 ಕಿಲೋಮೀಟರ್ ಮೈಲೇಜ್, ಎಸ್‌ಯುವಿ ಕಾರು 560 ಮೈಲೇಜ್ ನೀಡಲಿದೆ. ಶೇಕಡಾ 10 ರಿಂದ ಶೇಕಡಾ 30ರಷ್ಟು ಚಾರ್ಜಿಂಗ್ ಕೇವಲ 30 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ.


