ಇತ್ತೀಚೆಗೆ ಮಾರುತಿ ಬ್ರೆಜಾ ಫೇಸ್‌ಲಿಫ್ಟ್ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದೇ ರೀತಿ ಇದೀಗ ಮಾರುತಿ ಬಲೆನೋ ಪೇಸ್‌ಲಿಫ್ಟ್ ಕಾರು ಸೆ.5ಕ್ಕೆ ಲಾಂಚ್ ಆಗುತ್ತಿದೆ. ಹೊಸ ಕಾರಿನಲ್ಲಿನ ಅಪ್‌ಡೇಟ್ ಏನು?

ನವದೆಹಲಿ (ಆ.31) ಮಾರುತಿ ಸುಜುಕಿ ಸೆಪ್ಟೆಂಬರ್ 5ರಂದು ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡುತ್ತಿದೆ. ಪ್ರಮುಖ ಬದಲಾವಣೆ, ಅಪ್‌ಡೇಟ್‌ನೊಂದಿಗೆ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತ್ತಿದೆ. ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದ್ದು, ಹೆಚ್ಚು ಆಕರ್ಷಕ ಲುಕ್ ನೀಡಲಾಗಿದೆ. ಇಂಟಿರಿಯರ್, ಎಂಜಿನ್ , ಬೆಲೆ ಸೇರಿದಂತೆ ಹಲವು ಬದಲಾವಣೆಗಳು ಹೊಸ ಕಾರಿನಲ್ಲಿ ಇರಲಿದೆ.

ಹೊಸ ಬಲೆನೋ ಕಾರಿನ ಮುಂಭಾಗದಲ್ಲಿ ಹೊಸ ಶೈಲಿಯ ಬಂಪರ್, ಡಿಆರ್‌ಎಲ್, ಹೊಸ ಗ್ರಿಲ್ ಕಾರಿನ ಲುಕ್ ಮತ್ತಷ್ಟು ಹೆಚ್ಚಿಸಲಿದೆ. ಜೊತೆಗೆ ಸ್ಪೋರ್ಟೀವ್ ಲುಕ್ ನೀಡಲಿದೆ. 16 ಇಂಚಿನ ಅಲಾಯ್ ವ್ಹೀಲ್, ಟೇಲ್‌ಟೈಲ್ ಸೇರಿದಂತೆ ಕೆಲ ವಿಚಾರದಲ್ಲಿ ಹೆಚ್ಚಿನ ಬದಾಲಾವಣೆ ಇರುವುದಿಲ್ಲ. ಇಂಟಿರಿಯರ್‌ನಲ್ಲಿ ಹೊಸ ಕ್ಯಾಬಿನ್ ನೀಡಲಾಗುತ್ತಿದೆ. ಆಕರ್ಷಕ ಹಾಗೂ ಹೆಚ್ಚು ತಂತ್ರಜ್ಞಾನ ಆಧಾರಿತ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ನೀಡುವ ಸಾಧ್ಯತೆ ಇದೆ.

ಹೊಸ ಕಾರಿನ ಬೆಲೆ

ಹೊಸ ಬಲೆನೋ ಫೇಸ್‌ಲಿಫ್ಟ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೋ ಬೆಲೆ 6.49 ಲಕ್ಷ ರೂಪಾಯಿಯಿಂದ 9.61 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಫೇಸ್‌ಲಿಫ್ಟ್ ಬೆಲೆ ತುಸು ಹೆಚ್ಚಾಗುವ ಸಾಧ್ಯತೆ ಇದೆ.

ಕಾರಿನ ಎಂಜಿನ್

ಹೊಸ ಬಲೆನೋ ಫೇಸ್‌ಲಿಫ್ಟ್ ಕಾರು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಇರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೋ ಕಾರಿನಲ್ಲೂ ಇದೇ ಎಂಜಿನ್ ಬಳಸಲಾಗಿದೆ. 88 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಅಥವಾ 5 ಸ್ಪೀಡ್ ಎಂಎಂಟಿ ಟ್ರಾನ್ಸ್‌ಮಿಶನ್ ಆಯ್ಕೆಯಲ್ಲಿ ಕಾರು ಲಭ್ಯವಾಗಲಿದೆ.

ಕಾರಿನ ಸೇಫ್ಟಿ ಫೀಚರ್ಸ್

ಹೊಸ ಬಲೆನೋ ಕಾರು ಸರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಿದೆ. ಇದೀಗ ಮಾರುತಿ ಸುಜುಕಿ ಕಾರುಗಳು ಸುರಕ್ಷತೆಯಲ್ಲೂ ಸೈ ಎನಿಸಕೊಳ್ಳುತ್ತಿದೆ. 6 ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವೀವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತಾ ಫೀಟರ್ಸ್ ಇರಲಿದೆ.

ಹೊಸ ಬಲೆನೊ ಫೇಸ್‌ಲಿಫ್ಟ್‌ನಲ್ಲಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಆ್ಯಪ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ , ಏರ್ ಫ್ರೆಶ್ನರ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.