ಕೋಲ್ಕತಾ[ಆ.12]: ಆಹಾರಕ್ಕೆ ಜಾತಿ ಧರ್ಮವಿಲ್ಲ ಎನ್ನುವ ಮೂಲಕ ಸುದ್ದಿಯಲ್ಲಿದ್ದ ಝೊಮ್ಯಾಟೋ ಸಂಸ್ಥೆ ಇದೀಗ ಬಕ್ರಿದ್‌ ಹಬ್ಬದ ಮುನ್ನಾದಿನಗಳಲ್ಲಿ ಹೊಸ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದೆ.

ಮುಸ್ಲಿಂ ಬೇಡ, ಹಿಂದೂ ಡೆಲಿವರಿ ಬಾಯ್ ಕಳ್ಸಿ ಎಂದ ಗ್ರಾಹಕ: Zomato ಉತ್ತರ ಮನಮೋಹಕ!

ಬಕ್ರೀದ್‌ ದಿನವಾದ ಸೋಮವಾರದಿಂದ ತಾವು ಹಂದಿ ಮತ್ತು ಗೋಮಾಂಸದ ಆಹಾರಗಳನ್ನು ಪೂರೈಸುವುದಿಲ್ಲ ಎಂದು ಘೋಷಿಸಿರುವ ಕೆಲ ಹಿಂದು ಮತ್ತು ಮುಸ್ಲಿಂ ಫುಡ್‌ ಡೆಲಿವರಿ ಬಾಯ್‌ಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!

ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಗ್ರಾಹಕರಿಂದ ಬರುತ್ತಿರುವ ಬೇಡಿಕೆಗಳನ್ನು ನಮ್ಮಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಕ್ರೀದ್‌ ದಿನದಂದು ಹಂದಿ ಮತ್ತು ಗೋಮಾಂಸದ ಆಹಾರದ ಆರ್ಡರ್‌ಗಳನ್ನು ತೆಗೆದುಕೊಳ್ಳಬಾರದು. ನಮ್ಮ ಮನವಿಯನ್ನು ಕಂಪನಿ ಮನ್ನಿಸಬೇಕು ಎಂದು ಡೆಲಿವರಿ ಬಾಯ್‌ಗಳು ಝೊಮ್ಯಾಟೋಗೆ ಬೇಡಿಕೆ ಇಟ್ಟಿದ್ದಾರೆ.

ವಿಶೇಷ ಚೇತನ Zomato ಉದ್ಯೋಗಿಗೆ ಸಿಕ್ತು ಎಲೆಕ್ಟ್ರಿಕ್ ವಾಹನ!

ಆಹಾರ ಪಾರ್ಸೆಲ್‌ ತಲುಪಿಸಲು ಈಗ ಡೆಲಿವರಿ ಗರ್ಲ್ಸ್!

ಅನಾಥ ಮಕ್ಕಳ ಪಾಲಿನ ಅನ್ನದಾತ ಈ Zomato ಡೆಲಿವರಿ ಬಾಯ್!