ಮುಸ್ಲಿಂ ಬೇಡ, ಹಿಂದೂ ಡೆಲಿವರಿ ಬಾಯ್ ಕಳ್ಸಿ ಎಂದ ಗ್ರಾಹಕ: Zomato ಉತ್ತರ ಮನಮೋಹಕ!
ಜಾತ್ಯಾತೀತ ನಡೆ, ಮತ್ತೆ ಮನಗೆದ್ದ Zomato| ಮುಸ್ಲಿಂ ಬೇಡ, ಹಿಂದೂ ಡೆಲಿವರಿ ಬಾಯ್ ಕಳ್ಸಿ ಎಂದ ಗ್ರಾಹಕನಿಗೆ ಕೊಡ್ತು ಶಾಕಿಂಗ್ ಉತ್ತರ| Zomato ನಡೆಗೆ ಭೇಷ್ ಎಂದ ಸಂಸ್ಥಾಪಕ ದೀಪೀಂದರ್| ಮೌಲ್ಯಗಳಿಗೆ ಅಡ್ಡವಾಗುವ ಉದ್ಯಮ ಕಳೆದುಕೊಂಡ್ರೂ ಚಿಂತೆ ಇಲ್ಲ ಎಂದ ಸಂಸ್ಥಾಪಕ
ನವದೆಹಲಿ[ಜು.31]: ಆನ್‌ಲೈನ್ ಫುಡ್ ಆ್ಯಪ್ Zomato ನಲ್ಲಿ ಗ್ರಾಹಕನೊಬ್ಬ ಡೆಲಿವರಿ ಬಾಯ್ ಮುಸಲ್ಮಾನ ಎಂಬ ಕಾರಣಕ್ಕಾಗಿ ಆರ್ಡರ್ ಮಾಡಿದ್ದ ತಿನಿಸನ್ನು ಕ್ಯಾನ್ಸಲ್ ಮಾಡಿದ್ದಾನೆ. ಯಾರಾದರೂ ಹಿಂದೂ ಡೆಲಿವರಿ ಬಾಯ್ ಇದ್ದರೆ ಆರ್ಡರ್ ಮಾಡಿದ್ದನ್ನು ಕಳುಹಿಸಿಕೊಡಿ ಎಂದು ಆದೇಶಿಸಿದ್ದಾನೆ. ಆದರೆ ಗ್ರಾಹಕನ ಈ ಉದ್ಧಟತನಕ್ಕೆ Zomato ನೀಡಿರುವ ಉತ್ತರ ಮಾತ್ರ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಕದ್ದಿದೆ.
ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!
ಹೌದು ಡೆಲಿವರಿ ಬಾಯ್ ಒಬ್ಬನ ಎಡವಟ್ಟಿನಿಂದ ಹೆಸರು ಹಾಳು ಮಾಡಿಕೊಂಡಿದ್ದ Zomato, ಕಳೆದ ಕೆಲ ತಿಂಗಳಿನಿಂದ ತನ್ನ ಉತ್ತಮ ಕಾರ್ಯ ವೈಖರಿ ಹಾಗೂ ಮಾನವೀಯ ನಡೆಯಿಂದ ಗ್ರಾಹಕರ ಮನಗಳಿಸುತ್ತಿದೆ. ಅಂಗವಿಕಲ ಡೆಲಿವರಿ ಬಾಯ್ ಗೆ ಎಲೆಕ್ಟ್ರಿಕ್ ಸೈಕಲ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಸಂಸ್ಥೆಯ ಸಿಬ್ಬಂದಿಯ ಮಾನವೀಯ ಕೆಲಸಗಳು ಸದ್ದು ಮಾಡಿದ್ದವು. ಸದ್ಯ Zomato ತಾನು ಜಾತಿ-ಧರ್ಮಗಳ ನಡುವಿನ ಅಸಮಾನತೆಯನ್ನು ಸಹಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.
ವಿಶೇಷ ಚೇತನ Zomato ಉದ್ಯೋಗಿಗೆ ಸಿಕ್ತು ಎಲೆಕ್ಟ್ರಿಕ್ ವಾಹನ!
ಗ್ರಾಹಕ ಅಮಿತ್ ಶುಕ್ಲಾ ಟ್ವೀಟ್ ಒಂದನ್ನು ಮಾಡಿ 'ನಾನು Zomato ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ. ಅವರು ಮುಸ್ಲಿಂ ರೈಡರ್ ಗೆ ಫುಡ್ ಡೆಲಿವರಿ ಮಾಡಲು ಕಳುಹಿಸಿದ್ದರು. ಡೆಲಿವರಿ ಬಾಯ್ ಬದಲಾಯಿಸಿ ಎಂದಾಗ ಅದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಹಣವನ್ನೂ ಮರಳಿಸುವುದಿಲ್ಲ ಎಂದಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಆಹಾರ ಪಾರ್ಸೆಲ್ ತಲುಪಿಸಲು ಈಗ ಡೆಲಿವರಿ ಗರ್ಲ್ಸ್!
ಮಧ್ಯಪ್ರದೇಶದ ಜಬಲ್ಪುರ ನಿವಾಸಿ ಅಮಿತ್ ಶುಕ್ಲಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಲವಾರು ಟ್ವೀಟ್ ಗಳನ್ನು ಮಾಡುವ ಮೂಲಕ ತನ್ನ ಹಾಗೂ Zomato ನಡುವಿನ ಮಾತುಕತೆಯ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನ ವಕೀಲರ ಜೊತೆ ಈ ಸಂಬಂಧ ಮಾತನಾಡುವುದಾಗಿಯೂ ತಿಳಿಸಿದ್ದಾರೆ.
ಆರಂಭದಲ್ಲಿ ಅಮಿತ್ ಶುಕ್ಲಾ ಆರ್ಡರ್ ಕ್ಯಾನ್ಸಲ್ ಮಾಡಿರುವ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಈ ಆರ್ಡರ್ ಡೆಲಿವರಿವರಿಗಾಗಿ ಫೈಯಾಜ್ ಎಂಬಾತ ನೇಮಕಗೊಂಡಿದ್ದ. ಜಬಲ್ಪುರದ ನಿವಾಸಿಯಾಗಿದ್ದ ಫೈಯಾಜ್ ಹಿಂದಿ ಹಾಗೂ ಇಂಗ್ಲೀಷ್ ಮಾತನಾಡಬಲ್ಲ, ಉನ್ನತ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದ ವ್ಯಕ್ತಿಯಾಗಿದ್ದ.
ಅಮಿತ್ ಶೇರ್ ಮಾಡಿಕೊಂಡಿರುವ ಎರಡನೇ ಸ್ಕ್ರೀನ್ ಶಾಟ್ ನಲ್ಲಿ Zomato ಜೊತೆ ಮಾತುಕತೆ ನಡೆಸಿರುವುದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮಾತುಕತೆಯಲ್ಲಿ
Zomato: ನಮಗೆ ಹಲವಾರು ಪ್ರಶ್ನೆಗಳು ಬರುತ್ತಿವೆ. ಹೀಗಾಗಿ ಡೆಲಿವರಿಯಲ್ಲಿ ವಿಳಂಬವಾಗುತ್ತಿde
ಅಮಿತ್: ನೀವು ರೈಡರ್ ಬದಲಾಯಿಸುತ್ತೀರಾ?
Zomato: ನಿಮ್ಮ ಸಮಸ್ಯೆ ಏನೆಂದು ನಾವು ತಿಳಿದುಕೊಳ್ಳಬಹುದೇ?
ಅಮಿತ್: ಶ್ರಾವಣ ಮಾಸ ಆರಂಭವಾಗಿದೆ. ಹೀಗಾಗಿ ಮುಸ್ಲಿಂ ವ್ಯಕ್ತಿ ಫುಡ್ ಡೆಲಿವರಿ ಮಾಡುವುದು ಬೇಡ.
Zomato: ನೀವೀಗ ಆರ್ಡರ್ ಕ್ಯಾನ್ಸಲ್ ಮಾಡಿದ್ರೆ 237ರೂ ಕ್ಯಾನಸ್ಲಿಂಗ್ ಚಾರ್ಜ್ ಬೀಳುತ್ತದೆ.
ಅನಾಥ ಮಕ್ಕಳ ಪಾಲಿನ ಅನ್ನದಾತ ಈ Zomato ಡೆಲಿವರಿ ಬಾಯ್!
ಸದ್ಯ ಅಮಿತ್ ಶುಕ್ಲಾರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ Zomato 'ಊಟಕ್ಕೆ ಯಾವ ಧರ್ಮವೂ ಇರುವುದಿಲ್ಲ. ಅದೇ[ಊಟವೇ] ಒಂದು ಧರ್ಮ' ಎಂದಿದೆ.
ಈ ಟ್ವೀಟ್ ವಾರ್ ಬೆನ್ನಲ್ಲೇ Zomato ಸಂಸ್ಥಾಪಕ ದೀಪಿಂದರ್ ಗೋಯಲ್ ಟ್ವೀಟ್ ಮಾಡಿದ್ದು, 'ನಮಗೆ ಭಾರತದ ಬಗ್ಗೆ ಹೆಮ್ಮೆ ಇದೆ, ಜೊತೆಗೆ ನಮ್ಮ ವಿವಿಧ ಗ್ರಾಹಕರು ಹಾಗೂ ಪಾಲೂದಾರರನ್ನೂ ಗೌರವಿಸುತ್ತೇವೆ. ಹೀಗೆಂದು ನಮ್ಮ ಮೌಲ್ಯಗಳಿಗೆ ಧಕ್ಕೆಯುಂಟು ಮಾಡುವ ಉದ್ಯಮವನ್ನು ಕಳೆದುಕೊಳ್ಳುವ ಪ್ರಸಂಗ ಎದುರಾದರೆ ನಮಗೆ ಬೇಜಾರಿಲ್ಲ, ಅದಕ್ಕೆ ಕ್ಷಮೆ ಯಾಚಿಸುವುದಿಲ್ಲ' ಎಂದಿದ್ದಾರೆ.
ಸದ್ಯ Zomato ಸಂಸ್ಥೆಯ ಈ ಜಾತ್ಯಾತೀತ ನಡೆ ಹಾಗೂ ಟ್ವೀಟರ್ ನ್ಲಲಿ ನೀಡಿರುವ ಪ್ರತ್ಯುತ್ತರ ಎಲ್ಲೆಡೆ ವೈರಲ್ ಆಗುತ್ತಿದೆ. Zomato ನಡೆಯನ್ನು ಶ್ಲಾಘಿಸಿರುವ ಟ್ವಿಟರ್ ಬಳಕೆದಾರನೊಬ್ಬ ನಿಮ್ಮ ಈ ಉತ್ತರಕ್ಕಾಗಿಯಾದರೂ ಮುಂದಿನ 5 ಫುಡ್ ಆರ್ಡರ್ Zomatoನಲ್ಲೇ ಮಾಡುತ್ತೇನೆ ಎಂದಿದ್ದಾರೆ.