ನವದೆಹಲಿ[ಮೇ.29]: ವಿಕಲಾಂಗ Zomato ಡೆಲಿವರಿ ಬಾಯ್ ರಾಮು ಭಾರೀ ಸದ್ದು ಮಾಡಿದ್ದರು. ಮೂರು ಚಕ್ರದ ಸೈಕಲ್ ನಲ್ಲಿ ಕುಳಿತು ಮನೆ ಮನೆಗೂ ಫುಡ್ ಡೆಲಿವರಿ ಮಾಡುವ ಈತನ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕಾಯಕವೇ ಕೈಲಾಸ ಎಂಬಂತೆ ದುಡಿಯುತ್ತಿದ್ದ ರಾಮು ಸ್ವಾಭಿಮಾನಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಆದರೀಗ ಈತನ ಕಾಯಕಕ್ಕೆ ತಲೆದೂಗಿರುವ Zomato ಕಂಪೆನಿ ರಾಮುಗೆ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ನೀಡಿದೆ.

Zomato ಫುಡ್ ಡೆಲಿವರಿ ಮಾಡುವ ವಿಶೇಷ ಚೇತನ: ವೀಡಿಯೋ ಫುಲ್ ವೈರಲ್

Zomato ಫುಡ್ ಡೆಲಿವರಿ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ದೀಪೀಂದರ್ ಗೋಯೆಲ್ ತಮ್ಮ ಟ್ವಿಟರ್ ಖಾತೆಯಲ್ಲಿ, ರಾಮು ಎಲೆಕ್ಟ್ರಿಕ್ ವಾಹನವನ್ನು ಚಲಾಯಿಸುವ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, 'ನಮ್ಮ ಫುಡ್ ಡೆಲಿವರಿ ಪಾರ್ಟ್ನರ್ ರಾಮು ಸಾಹು ನವು ಕೊಟ್ಟ ಎಲೆಕ್ಟ್ರಿಕ್ ವಾಹನವನ್ನು ಸಹೃದಯದಿಂದ ಸ್ವೀಕರಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. 

ಅನಾಥ ಮಕ್ಕಳ ಪಾಲಿನ ಅನ್ನದಾತ ಈ Zomato ಡೆಲಿವರಿ ಬಾಯ್!

ಇತ್ತೀಚೆಗಷ್ಟೇ ರಾಮು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಶಂಸೆಯ ಮಹಾಪೂರ ಹರಿದು ಬಂದಿತ್ತು. ಅಲ್ಲದೇ ಚಿಕ್ಕ ಸಮಸ್ಯೆ ಎದುರಾದರೆ ಕೈ ಕಟ್ಟಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಇದು ಬಡಿದೆಬ್ಬಿಸುವಂತಿತ್ತು.