ಜಾವಾ ಇದೀಗ 42 ಮೋಟರ್‌ಸೈಕಲನ್ನು ಹೊಸ ಅವತಾರದಲ್ಲಿ, ಹೊಸ ಬಣ್ಣ ಹಾಗೂ ಅದ್ಭುತ ವಿಶೇಷತೆಗೊಳೊಂದಿಗೆ ಬಿಡುಗಡೆ ಮಾಡಿದೆ. ಜಾವಾ 42 ಎಫ್‌ಜೆ ಬೈಕ್‌ ಬೆಲೆ, ಫೀಚರ್ ಸೇರಿದಂತೆ ಸಂಪೂರ್ಣ ಡಿಟೇಲ್ ಇಲ್ಲಿದೆ.

ಮುಂಬೈ (ಆ.27) ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್ ಎಡಿಶನ್ ಬೈಕ್ ಬಿಡುಗಡೆಯಾಗಿದೆ. ಸ್ಪೆಷಲ್ ಎಡಿಶನ್ ಬೈಕ್ ಇದಾಗಿದೆ. ಹೀಗಾಗಿ ಹೊಸ ಬಣ್ಣದಲ್ಲಿ ಲಭ್ಯವಿದೆ. ಆಕರ್ಷಕ ಲುಕ್‌ನಲ್ಲಿ ಬೈಕ್ ಬಿಡುಗಡೆಯಾಗಿದೆ. ಇನ್ನು ಎಂಜಿನ್, ಪವರ್ ಸೇರಿದಂತೆ ಇತರ ಪ್ರಮುಖ ವಿಚಾರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಚ್ಚ ಹೊಸ ಜಾವಾ 42 FJ ಆಲ್ ಸ್ಟಾರ್ಸ್ ಎಡಿಶನ್ ಬೈಕ್ ಬುಕಿಂಗ್ ಆರಂಭಗೊಂಡಿದ್ದು, ಅಧಿಕೃತ ಡೀಲರ್ ಮೂಲಕ ಗ್ರಾಹಕರು ಬುಕ್ ಮಾಡಿಕೊಳ್ಳಬಹುದು.

ಜಾವಾ 42 FJ ಆಲ್ ಸ್ಟಾರ್ಸ್ ಬೈಕ್ ಬೆಲೆ

ನೂತನ ಜಾವಾ 42 FJ ಆಲ್ ಸ್ಟಾರ್ಸ್ ಎಡಿಶನ್ ಬೈಕ್ ಆರಂಭಿಕ ಬೆಲೆ 2.02 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಜಾವಾ 42 FJ ಹಾಗೂ ಆಲ್ ಸ್ಟಾರ್ಸ್ ಬೈಕ್‌ನ ಎಂಜಿನ್, ಚಾಸಿಸ್, ಬ್ರೇಕ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಕ್ರೋಮ್ ಫೀನಿಶಿಂಗ್ ಬೈಕ್ ಬೆಲೆ 2.16 ಲಕ್ಷ ರೂಪಾಯಿ (ಎಕ್ಸ್ ಶೋರೂಂ)ಬೆಲೆಯಲ್ಲಿ ಲಭ್ಯವಿದೆ. ಎರಡು ವರ್ಷ ಹಿಂದೆ ಜಾವಾ 42 FJ ಬೈಕ್ ಲಾಂಚ್ ಆಗಿತ್ತು. ಅಷ್ಟೇ ವೇಗದಲ್ಲಿ ಬೈಕ್ ಜಾವಾದ ಗರಿಷ್ಠ ಮಾರಾಟದ ಬೈಕ್ ಆಗಿ ಮಾರ್ಪಟ್ಟಿತ್ತು. ಎರಡು ವರ್ಷ ಹಿಂದೆ 1.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಾಂಚ್ ಆಗಿತ್ತು.

ಜಾವಾ 42 FJ ಆಲ್ ಸ್ಟಾರ್ಸ್ ಎಡಿಶನ್ ಬೈಕ್ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 30.64 BHP ಪವರ್ ಹಾಗೂ 29.5 nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್, ಡ್ಯುಯೆಲ್ ಚಾನೆಲ್ ಎಬಿಎಸ್ ಬ್ರೇಕ್, ಎಲ್ಇಡಿ ಹೆಡ್‌ಲ್ಯಾಂಪ್ಸ್, ಡಿಜಿಟಲ್-ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಲಾಯ್ ವೀಲ್‌ಗಳು, ರೆಟ್ರೋ-ಮಾಡರ್ನ್ ಡಿಸೈನ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ.

ರೆಟ್ರೋ ಪ್ರಿಯರಿಗೆ ಇಷ್ಟ

ರೆಟ್ರೋ ಶೈಲಿಯ ಬೈಕ್ ಇಷ್ಟುಪಡುವ ಮಂದಿಗೆ ಜಾವಾ 42 FJ ಆಲ್ ಸ್ಟಾರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಹೊಸ ಲುಕ್, ಹೊಸ ಬಣ್ಣ ಸೇರಿದಂತೆ ಹಲವು ವಿಶೇಷತೆಗಳ ಮೂಲಕ ಜಾವಾ 42 FJ ಆಲ್ ಸ್ಟಾರ್ಸ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.