ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದಲ್ಲಿ ತುರ್ತು ದುರಸ್ತಿ ಕಾಮಗಾರಿ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು (ಸೆ.20): ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 22ರಂದು (ಮಂಗಳವಾರ) ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದ ಜಲರೇಚಕ ಯಂತ್ರಾಗಾರದಲ್ಲಿ ತುರ್ತು ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ (BWSSB) ತಿಳಿಸಿದೆ.

ದುರಸ್ತಿ ಕಾಮಗಾರಿ ವಿವರ:

ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದ ಜಲರೇಚಕ ಯಂತ್ರಾಗಾರದಲ್ಲಿ ಪಂಪ್ ಸಂಖ್ಯೆ-4 ರ Isolation Sluice Valve Bypass ಹಾಗೂ Expansion Bellow ತುರ್ತು ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಕಾರಣದಿಂದ ಜಲರೇಚಕ ಯಂತ್ರಾಗಾರಗಳನ್ನು ದಿನಾಂಕ 22-09-2026 ರಂದು ಬೆಳಿಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಒಟ್ಟು 06 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.

ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:

West-1: ಮಾಗಡಿ ರಸ್ತೆ (Magadi Road), South-1: ಕದಿರೇನಹಳ್ಳಿ, ಮಿನಾಜ್ ನಗರ, ಗಂಗಾಧರ್ ನಗರ, ಪ್ರಗತಿಪುರ, ಪದ್ಮನಾಭನಗರ, ಆರ್.ಕೆ. ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬಿಂದ್ರೆನಗರ, ಕುಮಾರಸ್ವಾಮಿ ಲೇಔಟ್ 1 ಮತ್ತು 2ನೇ ಹStage, ಚಂದ್ರನಗರ, ಮರುತಿ ಲೇಔಟ್, ವಿಠ್ಠಲ್ ನಗರ, ಇಸ್ರೋ ಲೇಔಟ್, ಟೀಚರ್ಸ್ ಕಾಲೋನಿ, ಯೆಚೇನಹಳ್ಳಿ, ಕನಕಪುರ ಮುಖ್ಯ ರಸ್ತೆ, ಇಲಿಯಾಜ್ ನಗರ, ಪೂರ್ಣಪ್ರಜ್ಞಾ ಲೇಔಟ್, ಉತ್ತರಾಹಳ್ಳಿ ಗ್ರಾಮ, ಕೆಎಸ್‌ಆರ್‌ಟಿಸಿ ಲೇಔಟ್, ಅಂಕಪ್ಪ ಲೇಔಟ್, ಗುಮ್ಮಯ್ಯ ಲೇಔಟ್, ಬನಶಂಕರಿ 5ನೇ ಹಂತ, ಎಜಿಎಸ್ ಲೇಔಟ್, ಸರ್ವಭೌಮ ನಗರ, ಸುಬ್ರಹ್ಮಣ್ಯಪುರ, ಬಿಎಚ್‌ಸಿಎಸ್ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಕಾಕಥಿಯ ನಗರ.

South-3 & South-West (3 & 4): ಸುಡಗುಂಟಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್, ವೆಂಕಟೇಶ್ವರ ಲೇಔಟ್, ಬೃಂದಾವನ ಲೇಔಟ್, ಮಡಿವಾಳ, ಚಿನ್ನಮ್ಮ ಲೇಔಟ್, ಶ್ರೀನಗರ, ಬಿಎಎಸ್‌ಕೆ 1ನೇ ಹಂತ, ಅಶೋಕ್‌ನಗರ ಪೈಪ್‌ಲೈನ್ ರಸ್ತೆ, ಜಯನಗರ 4ನೇ ಮತ್ತು ಟಿ ಬ್ಲಾಕ್, ತಿಲಕ್ ನಗರ, ಮದ್ವನ ಪಾರ್ಕ್, ಹೊಂಬೇಗೌಡನಗರ, ಲಕ್ಕಸಂದ್ರ, ಆಡುಗೋಡಿ. South-East (1 & 3): ಕೋರಮಂಗಲ 2, 4, 5, 6, 7 & 8ನೇ ಬ್ಲಾಕ್, ಮಡಿವಾಳ, ಚಿಕ್ಕಾಡುಗೋಡಿ, ಸೇಂಟ್ ಜಾನ್ಸ್ ಆಸ್ಪತ್ರೆ, ರಾಜೇಂದ್ರನಗರ, ಆಡುಗೋಡಿ, ಜಾನ್ಸನ್ ಮಾರ್ಕೆಟ್, ಸಿಎಲ್‌ಆರ್, ಶಾಂತಿನಗರ, ಲಾಂಗ್‌ಫೋರ್ಡ್ ಟೌನ್, ಎಂ.ಜಿ. ರಸ್ತೆ, ರಿಚ್ಮಂಡ್ ಟೌನ್, ಅಶೋಕ್‌ನಗರ, ನೀಲಸಂದ್ರ, ಆಸ್ಟಿನ್ ಟೌನ್, ವಿವೇಕ್ ನಗರ, ಎಜಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ದೊಮ್ಮಲೂರು ಲೇಔಟ್, ದೊಮ್ಮಲೂರು ಗ್ರಾಮ, ಕೋಡಿಹಳ್ಳಿ, ಉಲ್ಸೂರು, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್ ಹಾಗೂ South-West-1: ಚಾಮರಾಜಪೇಟೆ.

ಸಂಬಂಧಪಟ್ಟ ಪ್ರದೇಶಗಳ ನಾಗರಿಕರು ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.