LIVE NOW
Published : Jan 10, 2026, 07:17 AM ISTUpdated : Jan 10, 2026, 10:35 PM IST

Karnataka News Live: ಬೆಳಗಾವಿ, ಚಿತ್ರದುರ್ಗದಲ್ಲಿ ಭೀಕರ ಅಪಘಾತ - ಸವದತ್ತಿ ಯಾತ್ರಾರ್ಥಿಗಳ ವಾಹನ ಪಲ್ಟಿ, ಹಿರಿಯೂರಿನಲ್ಲಿ ಲಾರಿ-ಕಾರು ಡಿಕ್ಕಿ!

ಸಾರಾಂಶ

ಬೆಂಗಳೂರಿನಲ್ಲಿ ಫರ್ನಿಚರ್ ಗೋಡೌನಲ್ಲಿ ಬೆಂಕಿ ದುರಂತ ನಡೆದಿದೆ. ಬಾಣಸವಾಡಿಯ ಕಲ್ಕೆರೆ ಸಮೀಪದ ಗೋಡೌನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಮೊದಲು ಫರ್ನೀಚರ್ ಗೋಡೌನ‌್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ನಾಲ್ಕು ಇತರ ಗೋಡೌನ್‌ಗೆ ಬೆಂಕಿ ವ್ಯಾಪಿಸಿದೆ. ನಾಲ್ಕು ಅಗ್ನಿಶಾಮಕ ದಳ ವಾಹನ ಬೆಂಕಿ ನಂದಿಸಲು ಹರಸಾಹಸ ಪಟ್ಟಿದೆ. ಬೆಂಕಿ ಅವಘಡ, ರಾಜ್ಯ ರಾಜಕಾರಣ, ಬಳ್ಳಾರಿ ಗಲಭೆ ಪ್ರಕರಣದಲ್ಲಿನ ಮಹತ್ವದ ಬೆಳವಣಿಗೆ ಸೇರಿದಂತೆ ರಾಜ್ಯದ ಸಮಗ್ರ ಸುದ್ದಿಯ ಲೈವ್ ಅಪ್‌ಡೇಟ್.

 

10:35 PM (IST) Jan 10

ಬೆಳಗಾವಿ, ಚಿತ್ರದುರ್ಗದಲ್ಲಿ ಭೀಕರ ಅಪಘಾತ - ಸವದತ್ತಿ ಯಾತ್ರಾರ್ಥಿಗಳ ವಾಹನ ಪಲ್ಟಿ, ಹಿರಿಯೂರಿನಲ್ಲಿ ಲಾರಿ-ಕಾರು ಡಿಕ್ಕಿ!

ಬೆಳಗಾವಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಸವದತ್ತಿ ಯಲ್ಲಮ್ಮನ ದರ್ಶನ ಮುಗಿಸಿ ಬರುತ್ತಿದ್ದ ಯಾತ್ರಾರ್ಥಿಗಳ ವಾಹನ ಪಲ್ಟಿಯಾಗಿ ಏಳು ಮಂದಿ ಗಾಯಗೊಂಡರೆ, ಹಿರಿಯೂರಿನಲ್ಲಿ ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read Full Story

09:36 PM (IST) Jan 10

ಕೊಡಗಿನಲ್ಲಿ ಬುಲ್ಡೋಜರ್ ಭೀತಿ - ಅರಣ್ಯ ಕಾಯ್ದೆಯ ಹೆಸರಲ್ಲಿ ಬೀದಿಗೆ ಬೀಳಲಿದೆಯೇ 50 ಕುಟುಂಬ?

ಕೊಡಗಿನ ಸುಂದರನಗರದಲ್ಲಿ 50 ವರ್ಷಗಳಿಂದ ವಾಸಿಸುತ್ತಿರುವ 50ಕ್ಕೂ ಹೆಚ್ಚು ಕುಟುಂಬಗಳು 'ಸಿ ಅಂಡ್ ಡಿ' ಭೂಮಿ ನಿಯಮದಿಂದಾಗಿ ಮನೆ ಕಳೆದುಕೊಳ್ಳುವ ಆತಂಕದಲ್ಲಿವೆ. ಅರಣ್ಯ ಇಲಾಖೆಯು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದು, ನಿವಾಸಿಗಳು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story

09:13 PM (IST) Jan 10

'ನೀನು ಸತ್ತರೆ ಒಳ್ಳೆಯದು' ಅಂದಿದ್ದಕ್ಕೆ ಪ್ರಾಣ ಬಿಟ್ಟ ಯುವತಿ! ಕಾರವಾರದಲ್ಲಿ ಒನ್‌ಸೈಡ್ ಲವ್ & ಕ್ರೈಂ ಸ್ಟೋರಿ!

ಕಾರವಾರದಲ್ಲಿ 21 ವರ್ಷದ ಯುವತಿ ರಿಶೆಲ್ ಡಿಸೋಜಾ, ಸಹಪಾಠಿ ಚಿರಾಗ್ ಕೊಠಾರಕರ್‌ನ ಪ್ರೀತಿಯ ಕಿರುಕುಳಕ್ಕೆ ಬೇಸತ್ತು ಆತ್ಮ೧ಹತ್ಯೆ  'ನನ್ನನ್ನು ಪ್ರೀತಿಸದಿದ್ದರೆ ಸತ್ತು ಹೋಗು' ಎಂದು ಆರೋಪಿ ಪ್ರಚೋದನೆ ನೀಡಿದ್ದರಿಂದ ಮನನೊಂದು ಆಕೆ ಈ ಕೃತ್ಯ ಎಸಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು.

Read Full Story

08:37 PM (IST) Jan 10

ಬೆಂಗಳೂರು - ರಾಜೀವ್ ಗಾಂಧಿ ವಸತಿ ನಿಗಮ ಫಲಾನುಭವಿಗಳ ಮನೆ ಹಂಚಿಕೆ ಯಾವಾಗ? ತಿಳ್ಕೊಳ್ಳಿ

ಬೆಂಗಳೂರಿನ 550 ಬಡ ಕುಟುಂಬಗಳಿಗೆ ಮನೆ ನೀಡಲು ಬಿಬಿಎಂಪಿ ಹಣ ಜಮೆ ಮಾಡಿದ್ದರೂ, ಫಲಾನುಭವಿಗಳ ಪಟ್ಟಿಯನ್ನು ನೀಡದ ಕಾರಣ ಮನೆ ಹಂಚಿಕೆ ಸ್ಥಗಿತಗೊಂಡಿದೆ. ರಾಜೀವ್ ಗಾಂಧಿ ವಸತಿ ನಿಗಮದ ಪ್ರಕಾರ, ಪಟ್ಟಿ ಬಂದ ತಕ್ಷಣ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ ಮನೆ ಹಂಚಲಾಗುವುದು ಮತ್ತು ಹಣ ಸುರಕ್ಷಿತವಾಗಿದೆ.

Read Full Story

08:16 PM (IST) Jan 10

ಕೊಪ್ಪಳ - ದಾಸೋಹದಲ್ಲಿ ಹೆಗಲಮೇಲೆ ಅಕ್ಕಿ ಮೂಟೆ ಹೊತ್ತ ಗವಿಸಿದ್ದೇಶ್ವರ ಶ್ರೀಗಳು!

ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ, ಗವಿಸಿದ್ದೇಶ್ವರ ಸ್ವಾಮೀಜಿಗಳು ಸ್ವತಃ ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ್ದಾರೆ. ಶ್ರೀಗಳ ಈ ಸರಳತೆ ಮತ್ತು 'ಕಾಯಕವೇ ಕೈಲಾಸ' ತತ್ವದ ಪಾಲನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

07:34 PM (IST) Jan 10

ಬಳ್ಳಾರಿ ರಾಜಶೇಖರ್ ಸಾವು ಆಕಸ್ಮಿಕ ಅಲ್ಲ; ನಾಳೆ ಜನಾರ್ದನ ರೆಡ್ಡಿ ಬಿಡುಗಡೆ ಮಾಡಲಿರೋ ಆ ವಿಡಿಯೋ ಬಾಂಬ್‌ನಲ್ಲಿ ಏನಿದೆ?

ರಾಜಶೇಖರ ರೆಡ್ಡಿ ಹತ್ಯೆ ಪ್ರಕರಣ ಮತ್ತು ತಮ್ಮ ಮೇಲಿನ ಹತ್ಯೆ ಸಂಚಿನ ಬಗ್ಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಿಬಿಐ ತನಿಖೆಗೆ ಆಗ್ರಹ. ರಾಜ್ಯ ಸರ್ಕಾರದ ಸಿಐಡಿ ತನಿಖೆ ತಿರಸ್ಕರಿಸಿರುವ ಅವರು, ಜ. 17 ರಂದು ಬೃಹತ್ ಪಾದಯಾತ್ರೆ, ಸ್ಮಶಾನಕ್ಕೆ ಸಂಬಂಧಿಸಿದ ಸ್ಫೋಟಕ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಣೆ!

Read Full Story

07:14 PM (IST) Jan 10

'ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗ್ಬಹುದು..' ಓವೈಸಿ ಮಾತಿಗೆ ಕಿಡಿಕಿಡಿಯಾದ ಬಿಜೆಪಿ!

ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುವುದರಿಂದ, 'ಹಿಜಾಬ್ ಧರಿಸಿದ ಮಗಳು' ಒಂದು ದಿನ ದೇಶದ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.

 

Read Full Story

07:00 PM (IST) Jan 10

ಕೇವಲ ಎರಡು ವರ್ಷದಲ್ಲಿ ಶಿರಾಡಿ ರೈಲ್ವೆ ಮಾರ್ಗದ ವಿದ್ಯುದ್ಧೀಕರಣ ಪೂರ್ಣ, ಪಶ್ಚಿಮಘಟ್ಟದ ರೈಲು ಹಾದಿಗೆ ಹೊಸ ಚೈತನ್ಯ

ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ 55 ಕಿ.ಮೀ. ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾರ್ಯವು ಕೇವಲ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಾಧನೆಯು ಪಶ್ಚಿಮಘಟ್ಟದ ಮೂಲಕ ರೈಲು ಸಂಚಾರಕ್ಕೆ ಹೊಸ ಚೈತನ್ಯ ನೀಡಲಿದೆ.

Read Full Story

06:56 PM (IST) Jan 10

ಅಪ್ಪು ಬೆಳ್ಳಗಾಗ್ಲಿ ಎಂದು ಇದ್ದಬಿದ್ದ ಕ್ರೀಮ್​ ಎಲ್ಲಾ ಹಚ್ಚುತ್ತಿದ್ಲು ಅವಳು - ಪುನೀತ್​ ರಾಜ್​ರ ಆ ದಿನಗಳ ಮೆಲುಕು

ಪುನೀತ್ ರಾಜ್‌ಕುಮಾರ್ ಅವರ ಕಪ್ಪು ಬಣ್ಣದ ಕಾರಣಕ್ಕೆ ಮನೆಯಲ್ಲಿ ಬೇಸರಗೊಂಡಿದ್ದ ಘಟನೆಯನ್ನು ಪಾರ್ವತಮ್ಮ ರಾಜ್‌ಕುಮಾರ್ ಹಳೆಯ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಪೂರ್ಣಿಮಾ ಕ್ರೀಮ್ ಹಚ್ಚುತ್ತಿದ್ದ ಬಗ್ಗೆ ಹಾಗೂ ಡಾ. ರಾಜ್‌ಕುಮಾರ್ 'ಕಪ್ಪು ಕಸ್ತೂರಿ' ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

Read Full Story

06:54 PM (IST) Jan 10

ಮಹತ್ವದ ರೈಲ್ವೇ ಸುದ್ದಿಗಳು - ಸಂಕ್ರಾಂತಿಗೆ ಮೈಸೂರು-ಟ್ಯುಟಿಕಾರನ್‌ ಮಧ್ಯೆ ವಿಶೇಷ ರೈಲು, ಕರಾವಳಿ ರೈಲ್ವೆಗೆ ಹೊಸ ಬೇಡಿಕೆ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ಮತ್ತು ಟ್ಯುಟಿಕಾರನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ. ಮಂಗಳೂರು  ರೈಲ್ವೆ ಅಭಿವೃದ್ಧಿ, ರೈಲು ವಿಳಂಬ, ವಂದೇ ಭಾರತ್ ಸೇರಿದಂತೆ ಹೊಸ ರೈಲುಗಳ ಬೇಡಿಕೆ ಮತ್ತು ನಿಲ್ದಾಣ ಅಭಿವೃದ್ಧಿ ಕುರಿತು ಸಂಸದ ಕ್ಯಾ. ಬ್ರಜೇಶ್ ಚೌಟ ಅವರೊಂದಿಗೆ ಚರ್ಚೆ ನಡೆಸಲಾಗಿದೆ.

Read Full Story

06:48 PM (IST) Jan 10

ಥಣಿಸಂದ್ರ ಮನೆ ತೆರವು - ಮುಸ್ಲಿಂ-ದಲಿತರ ಮನೆಗಳನ್ನೇ ಟಾರ್ಗೆಟ್ ಮಾಡ್ತಿದೆಯೇ ಸರ್ಕಾರ? ಸಿಎಂ ವಿರುದ್ಧ ಎಸ್‌ಡಿಪಿಐ ಮಜೀದ್ ವಾಗ್ದಾಳಿ!

ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆ ರಾಜಕೀಯ ತಿರುವು ಪಡೆದಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಂತ್ರಸ್ತರನ್ನು ಭೇಟಿ ಮಾಡಿ, ಕಾನೂನುಬದ್ಧ ದಾಖಲೆಗಳಿದ್ದರೂ ಮನೆ ಕೆಡವಿರುವುದನ್ನು 'ಬುಲ್ಡೋಜರ್ ಭಾಗ್ಯ' ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

06:48 PM (IST) Jan 10

ದೇಶಕ್ಕಾಗಿ ಒಲಂಪಿಕ್ಸ್ ಪದಕ ಗೆದ್ದ ಪ್ರಸಾದ್ ಈಗ ಹೌಸ್ ಕೀಪಿಂಗ್ ನೌಕರ; ಸರ್ಕಾರದ ನಿರ್ಲಕ್ಷ್ಯಕ್ಕೆ ನರಕವಾದ ಬದುಕು!

2015ರ ವಿಶೇಷ ಒಲಂಪಿಕ್ಸ್‌ನಲ್ಲಿ ಅಮೇರಿಕಾದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ವಿಶೇಷ ಚೇತನ ಪ್ರತಿಭೆ ಆರ್. ಪ್ರಸಾದ್, ಇಂದು ಯಾವುದೇ ಸರ್ಕಾರಿ ಪ್ರೋತ್ಸಾಹವಿಲ್ಲದೆ ಜೀವನ ಸಾಗಿಸಲು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ನರಕಸದೃಶ ಜೀವನ ನಡೆಸುತ್ತಿದ್ದಾರೆ.

Read Full Story

06:38 PM (IST) Jan 10

ಚಿಕ್ಕಬಳ್ಳಾಪುರ - ಜನ್ಮದಿನದಂದೇ ಸ್ವಾಮೀಜಿ ಮೇಲೆ ಹಲ್ಲೆ, ಮಠಕ್ಕೆ ನುಗ್ಗಿ ಹೊಡೆದ ವೃದ್ಧೆಯ ಕುಟುಂಬಸ್ಥರು !

ಚಿಕ್ಕಬಳ್ಳಾಪುರ ತಾಲೂಕಿನ ಓಂಕಾರ ಜ್ಯೋತಿ ಮಠದ ಉಮಾಮಹೇಶ್ವರ ಸ್ವಾಮೀಜಿ ಅವರ ಹುಟ್ಟುಹಬ್ಬದ ದಿನವೇ ಅವರ ಮೇಲೆ ಹಲ್ಲೆ ನಡೆದಿದೆ. ಮಠದ ಜಾಗವನ್ನು ಗಿಫ್ಟ್ ಡೀಡ್ ಮಾಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ವೃದ್ಧೆಯ ಕುಟುಂಬಸ್ಥರು ಈ ಕೃತ್ಯ ಎಸಗಿದ್ದು, ಗಾಯಾಳು ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

06:35 PM (IST) Jan 10

ಕೊನೆಗೂ ಗೌರವ ಕಳೆದುಕೊಂಡ ಕಿಚ್ಚನ ಚಪ್ಪಾಳೆ, ಬಿಗ್‌ಬಾಸ್‌ ನಿರ್ಧಾರಕ್ಕೆ ಜನರ ಅಸಮಾಧಾನ ಯಾಕೆ?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಅಂತಿಮ ಹಂತ ತಲುಪಿದ್ದು, ಕೊನೆಯ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡಗೆ ಮತ್ತು ಈ ಸೀಸನ್‌ನ ಚಪ್ಪಾಳೆಯನ್ನು ಧ್ರುವಂತ್‌ಗೆ ನೀಡಿದ್ದು, ಇದು ವೀಕ್ಷಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

06:28 PM (IST) Jan 10

ಪಾಳುಬಿದ್ದ ವಿವಾದಿತ ಪರಶುರಾಮ ಥೀಮ್ ಪಾರ್ಕ್, ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆ ಜವಾಬ್ದಾರಿ

ಕಾರ್ಕಳದ ಪಾಳುಬಿದ್ದ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ನಿರ್ವಹಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿರ್ಮಿತಿ ಕೇಂದ್ರವೇ ಸಂಪೂರ್ಣ ಜವಾಬ್ದಾರಿಯಾಗಿ

Read Full Story

06:12 PM (IST) Jan 10

ಡೆಂಟಲ್ ಕಾಲೇಜು ವಿದ್ಯಾರ್ಥಿನಿಗೆ 'ಸ್ಲಂನಿಂದ ಬಂದ ಕೋತಿ' ಎಂದಿದ್ದ ಲೆಕ್ಚರ್ - ಸಾವಿನ ಹಿಂದಿದೆ ಕಿರುಕುಳದ ಕಥೆ!

ಬೊಮ್ಮನಹಳ್ಳಿಯ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ ಆತ್ಮ*ಹತ್ಯೆಗೆ ಶರಣಾಗಿದ್ದು, ಕಾಲೇಜು ಉಪನ್ಯಾಸಕರ ನಿರಂತರ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಸಹಪಾಠಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

Read Full Story

05:56 PM (IST) Jan 10

2 ಕೋಟಿ ಉದ್ಯೋಗ ಕೊಡೋದಾಗಿ ಅಧಿಕಾರ ಹಿಡಿದ ಬಿಜೆಪಿ ಗಾಂಧಿಯನ್ನೇ ಹೊರ ಹಾಕಲೆತ್ನಿಸುತ್ತಿದೆ - ಮಧು ಬಂಗಾರಪ್ಪ

ಎರಡು ಕೋಟಿ ಉದ್ಯೋಗ ಕೊಡ್ತಿವಿ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ಇದೀಗ ಮಹಾತ್ಮ ಗಾಂಧಿಯವರನ್ನೇ ದೇಶದಿಂದ ಹೊರಗೆ ಹಾಕುವ ಯತ್ನ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Read Full Story

05:53 PM (IST) Jan 10

ಲಕ್ಕುಂಡಿ - ಮನೆ ಅಡಿಪಾಯ ತೋಡುವಾಗ ಪುರಾತನ ನಿಧಿ ಪತ್ತೆ! 101 ದೇವಸ್ಥಾನಗಳ ಊರಲ್ಲಿದೆ ಚಿನ್ನದ ಗಣಿ?

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಹಳೆಯ ಮನೆಯ ಅಡಿಪಾಯ ತೋಡುವಾಗ ಪುರಾತನ ಚಿನ್ನಾಭರಣಗಳಿದ್ದ ನಿಧಿ ಪತ್ತೆಯಾಗಿದೆ. ಈ ಆಭರಣಗಳು ಸಮೀಪದ ಲಕ್ಷ್ಮೀ ದೇವಸ್ಥಾನಕ್ಕೆ ಸೇರಿದ್ದೆಂದು ಶಂಕಿಸಲಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ.
Read Full Story

05:50 PM (IST) Jan 10

BBK 12 - ಅಶ್ವಿನಿ ಗೌಡ, ಧ್ರುವಂತ್​ ಮೋಸದಿಂದ ಟಾಸ್ಕ್​ ಗೆದ್ರಾ? ಸಾಕ್ಷಿ ತೋರಿದ ನೆಟ್ಟಿಗರು! ಏನಿದು ಬಿಸಿಬಿಸಿ ಚರ್ಚೆ?

ಬಿಗ್​ಬಾಸ್​ ಸೀಸನ್​ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಟಾಸ್ಕ್​ವೊಂದರಲ್ಲಿ ವಿವಾದ ಭುಗಿಲೆದ್ದಿದೆ. ಕಂಬ ಹಿಡಿದು ನಿಲ್ಲುವ ಟಾಸ್ಕ್​ನಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ನಿಯಮ ಉಲ್ಲಂಘಿಸಿ ಮೋಸದಿಂದ ಗೆದ್ದಿದ್ದಾರೆ ಎಂದು ವೀಕ್ಷಕರು ಆರೋಪಿಸುತ್ತಿದ್ದಾರೆ. ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

 

Read Full Story

05:41 PM (IST) Jan 10

ಸಿದ್ದರಾಮಯ್ಯರನ್ನು ಲೀಸ್ ಸಿಎಂ ಎಂದು ಅಣಕಿಸಿದ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಖಡಕ್ ಪ್ರಶ್ನೆ, 'ಡ್ಯಾಡಿ' ಯಾರು?

ಮಾಜಿ ಸಿಎಂ  ಹೆಚ್‌ಡಿಕೆ ಅವರು ಸಿಎಂ ಕುರಿತು ನೀಡಿದ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರವಾಗಿದ್ದು,  ಅವರ ಬೆಳವಣಿಗೆಯನ್ನು ಸಹಿಸಲಾಗದೆ ಜೆಡಿಎಸ್ ನಾಯಕರು ಅವರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story

05:20 PM (IST) Jan 10

ಮಕ್ಕಳ ಅನ್ನದಲ್ಲಿ ಇಲಿ-ಹಲ್ಲಿಗಳ ಮಲ - ಮಕ್ಕಳಿಂದಲೇ ಶೌಚಾಲಯ ಕ್ಲೀನಿಂಗ್; ಇದು ಇಂದಿರಾ ಗಾಂಧಿ ವಸತಿ ಶಾಲೆಯೋ? ನರಕವೋ?

ಹಳಿಯಾಳ ತಾಲೂಕಿನ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ ಪೋಷಕರು, ಅಕ್ಕಿ ಮೂಟೆಗಳ ಮೇಲಿನ ಇಲಿ-ಹಲ್ಲಿ ಮಲ, ಕೊಳೆತ ತರಕಾರಿ ಮತ್ತು ಕಳಪೆ ನೈರ್ಮಲ್ಯ ಕಂಡು ಆಘಾತ. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ದೂರು ನೀಡಿದರೆ ಟಿಸಿ ಕೊಡುವ ಬೆದರಿಕೆ ಹಾಕುತ್ತಿರುವ ಬಗ್ಗೆ ತಿಳಿದು, ಪೋಷಕರು ಆಕ್ರೋಶ.

Read Full Story

04:51 PM (IST) Jan 10

ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೆ ಗನ್ ಹಿಡಿದು ಓಡಾಡಿದ ಭೂಪ, 112 ಸಂಖ್ಯೆಗೆ ಕರೆ ಮಾಡಿ ಪ್ರಾಣ ಉಳಿಸಿಕೊಂಡ ಯುವತಿ!

ನೆಲಮಂಗಲದಲ್ಲಿ, ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಕೊಲ್ಲಲು ಬಿಹಾರ ಮೂಲದ ಯುವಕನೊಬ್ಬ ಆನ್‌ಲೈನ್‌ನಲ್ಲಿ ಖರೀದಿಸಿದ ಗನ್‌ನೊಂದಿಗೆ ಬಂದಿದ್ದ. ಯುವತಿಯ ಸಮಯಪ್ರಜ್ಞೆಯಿಂದ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ, ಆರೋಪಿಯನ್ನು ಬಂಧಿಸಲಾಗಿದ್ದು, ದೊಡ್ಡ ಅನಾಹುತ ತಪ್ಪಿದೆ.
Read Full Story

04:41 PM (IST) Jan 10

ಮಗು ನಂದೇ ಆದ್ರೆ ಮದುವೆಯಾಗಿಲ್ಲ - ಸಿನೆಮಾ ಸ್ಟೈಲ್‌ನಲ್ಲೇ ನಡೆದ ನಟನ ರಿಯಲ್ ಲೈಫ್ ಕ್ರೈಂ ಸ್ಟೋರಿ!

ಬೆಂಗಳೂರಿನ ನಟ ಮೋಹನ್ ರಾಜ್ ವಿರುದ್ಧ ವಿಚ್ಛೇದಿತ ಮಹಿಳೆಯೊಬ್ಬರು 36 ಲಕ್ಷ ರೂ. ವಂಚನೆ, ಲಿವಿಂಗ್-ಇನ್ ಬಳಿಕ ಕೈಕೊಟ್ಟ ಆರೋಪ. ಆದರೆ, ಮೋಹನ್ ರಾಜ್ ಈ ಆರೋಪ ನಿರಾಕರಿಸಿದ್ದು, ಮಹಿಳೆಯೇ ತಮಗೆ ಹಣ ನೀಡಬೇಕಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಈ ಪ್ರಕರಣ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲು

Read Full Story

04:37 PM (IST) Jan 10

ಕೋಡಿಶ್ರೀ ಭಯಾನಕ ಭವಿಷ್ಯ; ಸಂಸ್ಕಾರವಾಗದ ಕೋಟ್ಯಂತರ ಅತೃಪ್ತ ಆತ್ಮಗಳ ಸಂಚಾರದಿಂದ ಮನುಕುಲಕ್ಕೆ ಆಪತ್ತು!

ಅತೃಪ್ತ ಆತ್ಮಗಳು ಮತ್ತು ಪಂಚಭೂತಗಳ ದೋಷದಿಂದ ಜಾಗತಿಕವಾಗಿ ಸಾವು-ನೋವುಗಳು ಹೆಚ್ಚಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜೊತೆಗೆ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಎಂದು ತಿಳಿಸಿದ್ದಾರೆ.

Read Full Story

04:28 PM (IST) Jan 10

'ಏನ್​ ಬ್ರೋ' ಅಂತೀರಾ? Bro ಅರ್ಥ ತಿಳಿದ್ರೆ ಅಪ್ಪಿತಪ್ಪಿಯೂ ನೀವೂ ಹೇಳಲ್ಲ ಎಂದ ನಟಿ ಅನು ಜನಾರ್ದನ!

'ಸತ್ಯ' ಸೀರಿಯಲ್ ಖ್ಯಾತಿಯ ನಟಿ ಅನು ಜನಾರ್ದನ್ ಅವರು 'ಬ್ರೋ' ಪದದ ಬಳಕೆಯನ್ನು ಏಕೆ ನಿಲ್ಲಿಸಿದರು ಎಂಬುದನ್ನು ವಿವರಿಸಿದ್ದಾರೆ. ಸಹನಟ ಒಬ್ಬರು 'ಬ್ರೋ' ಶಬ್ದದ ಅರ್ಥ ಹೇಳಿದ ಮೇಲೆ ಅಲ್ಲಿಂದ ಎಂದಿಗೂ ಬಳಲಿಲ್ಲ ಎಂದಿದ್ದಾರೆ. ಹಾಗಿದ್ರೆ ಏನದು ಅರ್ಥ? 

Read Full Story

04:13 PM (IST) Jan 10

ಶಿಗ್ಗಾವಿ - ವರದಕ್ಷಿಣೆ ಕಿರುಕುಳ, 9 ತಿಂಗಳ ಹಿಂದೆ ವಿವಾಹವಾಗಿದ್ದ ಗರ್ಭಿಣಿ ಸಾವು, ಕೊಲೆ ಮಾಡಿ ನೇಣು ಹಾಕಿರುವ ಶಂಕೆ!

ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ, ಮದುವೆಯಾಗಿ 9 ತಿಂಗಳಾಗಿದ್ದ ಎರಡು ತಿಂಗಳ ಗರ್ಭಿಣಿ ಸುನೀತಾ ದೊಡ್ಡಮನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವರದಕ್ಷಿಣೆಗಾಗಿ ಪತಿ ಮತ್ತು ಆತನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದು, ಇದು ಕೊಲೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
Read Full Story

03:54 PM (IST) Jan 10

BBK 12 ರಕ್ಷಿತಾ ಶೆಟ್ಟಿಯನ್ನು ಹುಡುಕಿಕೊಂಡು ಬಂದ ಭರ್ಜರಿ ಮದುವೆ ಸಂಬಂಧ; ಜಾತಕವನ್ನೂ ಕೇಳಿದ್ರು!

Bigg Boss Kannada Season 12 Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರ ಹುಡುಗ ಹೇಗಿರಬೇಕು ಎಂದು ಚರ್ಚೆ ಆಗಿದೆ. ಆ ವೇಳೆ ಅವರು ಉತ್ತರವನ್ನು ಕೂಡ ನೀಡಿದ್ದಾರೆ. ಈಗ ಅವರಿಗೆ ಪ್ರಪೋಸಲ್‌ ಬಂದಿದೆ.

 

Read Full Story

03:50 PM (IST) Jan 10

Bigg Boss​​ ಗಿಲ್ಲಿ ಗೆದ್ದುಬಿಟ್ರೆ ಹೀಗೆ ಮಾಡ್ತಾರಂತೆ ಡಾಗ್​ ಸತೀಶ್​ - ಭಯಂಕರ ಚಾಲೆಂಜ್​ಗೆ ಫ್ಯಾನ್ಸ್​ ಸುಸ್ತು!

ಬಿಗ್​ಬಾಸ್​ 12ರ ಸ್ಪರ್ಧಿ ಗಿಲ್ಲಿ ನಟನ ಗೆಲುವಿನ ಬಗ್ಗೆ ಡಾಗ್ ಸತೀಶ್ ವಿಚಿತ್ರ ಪಣ ತೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆಯಲು, ಗಿಲ್ಲಿ ನಟ ಒಂದು ವೇಳೆ ಬಿಗ್ ಬಾಸ್ ಗೆದ್ದರೆ, ತಾನು ಅವರ ಕಾಲ ಕೆಳಗೆ ಇರುವುದಾಗಿ ಸವಾಲು ಹಾಕಿದ್ದಾರೆ.
Read Full Story

03:30 PM (IST) Jan 10

ಮಗು ಆದ್ಮೇಲೆ 14kg ತೂಕ ಇಳಿಸಿಕೊಂಡೆ - 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ; Interview

Actress Gowthami Gowda: ನಮ್ಮ ಜೀವನ ಶೈಲಿ, ಆಹಾರ, ಮಾನಸಿಕ ಆರೋಗ್ಯದ ನಿಮಿತ್ತ ಇಂದು ಹೆಣ್ಣು ಮಕ್ಕಳಿಗೆ PCOD, PCOS ಬರುತ್ತಿದೆ. ತಾಯಿಯಾದ ಬಳಿಕ ದಪ್ಪ ಆಗ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರಧಾರಿ ಗೌತಮಿ ಗೌಡ ತಾಯಿಯಾದಮೇಲೆ ದಪ್ಪಗಾಗಿದ್ದರು, ಈಗ ತೂಕ ಇಳಿಸಿಕೊಂಡಿದ್ದಾರೆ.

 

Read Full Story

03:27 PM (IST) Jan 10

ಬಿಗ್ ಬಾಸ್ ಸೀಸನ್ 12ರ ಅಂತಿಮ 'ಕಿಚ್ಚನ ಚಪ್ಪಾಳೆ' ಗಿಟ್ಟಿಸಿದ ಅಶ್ವಿನಿ ಗೌಡ, ಧ್ರುವಂತ್‌; ಕಾರಣವೇನು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಎರಡು ಗುಂಪಾಗಿ ಮನೆಯಲ್ಲಿ ಆಟವಾಡಿದವರ ನಡುವೆ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ಚಪ್ಪಾಳೆ ಕೊಡುವುದಕ್ಕೆ ಕಾರಣವೇನು ನೀವೇ ನೋಡಿ..

Read Full Story

03:04 PM (IST) Jan 10

ಧಾರವಾಡ - ಇದ್ದಿಲು ಹೊಗೆಗೆ ಉಸಿರುಗಟ್ಟಿ ಹೊಟೇಲ್ ಕಾರ್ಮಿಕ ಸಾವು, 6 ಮಂದಿ ನೇಪಾಳಿಗರು ತೀವ್ರ ಅಸ್ವಸ್ಥ!

ಧಾರವಾಡದ ನಂದಿನಿ ಲೇಔಟ್‌ನಲ್ಲಿ, ಮುಚ್ಚಿದ ಕೋಣೆಯಲ್ಲಿ ಇದ್ದಿಲು ಒಲೆಯ ಹೊಗೆಯಿಂದ ಉಸಿರುಗಟ್ಟಿ ನೇಪಾಳಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಇದೇ ಘಟನೆಯಲ್ಲಿ ಆರು ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ 'ಚಿಂಗ್ಸ್ ಚೌ' ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
Read Full Story

03:00 PM (IST) Jan 10

Bigg Boss ಸ್ಪಂದನಾ ದುಬಾರಿ ಷರ್ಟ್​ ಕಳ್ಳಿನಾ? ಆ ದಿನ ನಡೆದ ಘಟನೆ ರಿವೀಲ್​! ​ಲವ್​ ಮಾರ್ಕ್​ ಹಾಕಿದ ಡಾಗ್​ ಸತೀಶ್

ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್, ತಮ್ಮ ದುಬಾರಿ ಷರ್ಟ್ ಅನ್ನು ಸ್ಪಂದನಾ ಕದ್ದಿದ್ದಾರೆ ಎಂಬ ಆರೋಪಕ್ಕೆ, ಸ್ಪಂದನಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾನು ಆ ಷರ್ಟ್ ತೆಗೆದುಕೊಂಡಿಲ್ಲ ಮತ್ತು ಅದನ್ನು ಅರ್ಧ ಬೆಲೆಗೆ ಮಾರುವ ಬುದ್ಧಿ ತನಗಿಲ್ಲ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Read Full Story

02:58 PM (IST) Jan 10

Bigg Boss, ನೀವು ವೀಕೆಂಡ್‌ನಲ್ಲಿ ಈ ವಿಡಿಯೋ ಹಾಕಲೇಬೇಕು - ಪಟ್ಟು ಹಿಡಿದ ಕೂತ Gilli Nata

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ, ಧ್ರುವಂತ್‌ ಒಮ್ಮೆ ಜಗಳ ಆಡುತ್ತಾರೆ, ಇನ್ನೊಮ್ಮೆ ಸ್ನೇಹದಿಂದ ಕೂಡ ಇರುತ್ತಾರೆ. ಅಶ್ವಿನಿ ಅವರ ಬಗ್ಗೆ ಧ್ರುವಂತ್‌ ಅವರು ಬಿಗ್‌ ಬಾಸ್‌ ಕ್ಯಾಮರಾದ ಮುಂದೆ ಬಂದು ಮಾತನಾಡಿದ್ದುಂಟು. ಈಗ ಗಿಲ್ಲಿ ಮುಂದೆ ಮಾತನಾಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

 

Read Full Story

02:29 PM (IST) Jan 10

BBK 12 - ಗಿಲ್ಲಿ ನಟನಿಗೆ ಎರಡು ಮುಖವಿದೆ - Nanda Gokula Serial ನಂದ ಹೀಗೆ ಹೇಳಿದ್ಯಾಕೆ? ಟಿವಿಯಲ್ಲಿ ಬಂದಿಲ್ಲ

Bigg Boss Kannada Season 12 Episoe: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮನೆಗೆ ನಂದಗೋಕುಲ ಧಾರಾವಾಹಿ ಟೀಂ ಬಂದಿದೆ. ಮಾಧವನ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದರು. ಆ ವೇಳೆ ಮದುವೆ ಬಗ್ಗೆ ಚರ್ಚೆಯಾಗಿದೆ. ಈ ನಡುವೆ ಗಿಲ್ಲಿ ನಟನ ಬಗ್ಗೆ ನಂದಕುಮಾರ್‌ ಮಾತನಾಡಿದ್ದಾರೆ.

 

Read Full Story

02:16 PM (IST) Jan 10

ಗದಗ - ಜಮೀನಿನಿಂದ ಬೆಳ್ಳಂಬೆಳಗ್ಗೆ ಬೆಳೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಆಸಾಮಿಗೆ ಕಡಲೆ ಹಾರ ಹಾಕಿ ಶಾಸ್ತಿ!

ಗದಗ ನಗರದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು, ರೈತರು ಆತನಿಗೆ ಕಡಲೆಕಾಯಿ ಹಾರ ಹಾಕಿ ಕಂಬಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ಕುಡಿಯಲು ಹಣವಿಲ್ಲದ ಕಾರಣ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ ಕಳ್ಳತನ

Read Full Story

01:33 PM (IST) Jan 10

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟೂಕೊಡಲ್ಲ, ಇಳಿಯೋದು ಇಲ್ಲ; ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ!

ಕೋಡಿಮಠದ ಶ್ರೀಗಳು ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ, ಸಿದ್ದರಾಮಯ್ಯ ಅಧಿಕಾರ ಬಿಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಯುಗಾದಿವರೆಗೂ ಸಿಎಂ ಬದಲಾವಣೆ ಕಷ್ಟ ಎಂದಿರುವ ಅವರು, ದೇಶಕ್ಕೆ ದೊಡ್ಡ ಅಪಾಯ ಹಾಗೂ ಇಬ್ಬರು ಮಹನೀಯರ ಸಾವಿನ ಮುನ್ಸೂಚನೆಯನ್ನೂ ನೀಡಿದ್ದಾರೆ.
Read Full Story

01:25 PM (IST) Jan 10

ರೈತರ ಭೂಸ್ವಾಧೀನ ಹಣಕ್ಕೆ ಬಡ್ಡಿ ಕೊಡದ ಸರ್ಕಾರ; ರಾಷ್ಟ್ರೀಯ ಹೆದ್ದಾರಿ ಕಚೇರಿ ಜಪ್ತಿ ಮಾಡಿದ ಕೋರ್ಟ್!

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ನೀಡಬೇಕಿದ್ದ ಸುಮಾರು 10 ಕೋಟಿ ರೂಪಾಯಿ ಬಡ್ಡಿ ಹಣವನ್ನು ಪಾವತಿಸದ ಕಾರಣ, ಧಾರವಾಡ ಜಿಲ್ಲಾ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ರೈತರ ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ.

Read Full Story

12:45 PM (IST) Jan 10

Yash ಅವರಿಗಿಂತ ಸಮಾಜದ ಮಕ್ಕಳು ಮುಖ್ಯ; Toxic Movie ವಿರುದ್ಧ ವಕೀಲರಿಂದಲೇ ದೂರು ದಾಖಲು

Actor Yash Toxic Movie: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಅವರ ರಾಯ ಪಾತ್ರದ ಟೀಸರ್‌ ರಿಲೀಸ್‌ ಆಗಿದೆ. ಈ ಟೀಸರ್‌ ನೋಡಿದ ಅನೇಕರು ಹಸಿಬಿಸಿ ದೃಶ್ಯಗಳ ಬಗ್ಗೆ ಬೇಸರ ಹೊರಹಾಕಿದ್ದರು. ಈಗ ಟಾಕ್ಸಿಕ್‌ ವಿರುದ್ಧ ದೂರು ದಾಖಲಾಗಿದೆ.

Read Full Story

12:40 PM (IST) Jan 10

ಡಿವೋರ್ಸ್ ನೋಟೀಸ್ ನೀಡಿದ ಹೆಂಡ್ತಿಯನ್ನು ಶೂಟ್ ಮಾಡಿದ ಗಂಡ; 3ನೇ ವ್ಯಕ್ತಿ ಹಸ್ತಕ್ಷೇಪ ಕೇಳಿ ಪೊಲೀಸರೇ ಶಾಕ್!

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ನಿ ಭುವನೇಶ್ವರಿಯನ್ನು ಗುಂಡಿಕ್ಕಿ ಕೊಂದ ಪತಿ ಬಾಲಮುರುಗನ್,  ಪೊಲೀಸರ ವಿಚಾರಣೆಯಲ್ಲಿ 3ನೇ ವ್ಯಕ್ತಿಯ  ಹಸ್ತಕ್ಷೇಪ ಇರುವುದನ್ನೂ ಬಾಯಿ ಬಿಟ್ಟಿದ್ದಾನೆ. ಈ ಕೊಲೆ ಕೇಸ್ ಗಂಡ ಹೆಂಡತಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದ ಪೊಲೀಸರಿಗೆ ಇದು ಶಾಕ್ ಆಗಿದೆ.

Read Full Story

12:31 PM (IST) Jan 10

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?

ಯಶ್‌ ಅವರ ‘ಟಾಕ್ಸಿಕ್‌’ ಚಿತ್ರದ ಕಾರ್‌ ಸೀನ್‌ನಲ್ಲಿರುವ ನಟಿ ಯಾರು ಎನ್ನುವ ಚರ್ಚೆಗಳು ಆ ಸೀನ್‌ನಷ್ಟೇ ಬಿಸಿಬಿಸಿಯಾಗಿದೆ. ಈ ನಟಿಯ ಇನ್‌ಸ್ಟಾಗ್ರಾಮ್‌ ಐಡಿ ಸೇರಿದಂತೆ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಆಗಲೇ ಪತ್ತೆ ಮಾಡಿದ್ದಾರೆ.

Read Full Story

More Trending News