- Home
- Entertainment
- TV Talk
- Bigg Boss ಸ್ಪಂದನಾ ದುಬಾರಿ ಷರ್ಟ್ ಕಳ್ಳಿನಾ? ಆ ದಿನ ನಡೆದ ಘಟನೆ ರಿವೀಲ್! ಲವ್ ಮಾರ್ಕ್ ಹಾಕಿದ ಡಾಗ್ ಸತೀಶ್
Bigg Boss ಸ್ಪಂದನಾ ದುಬಾರಿ ಷರ್ಟ್ ಕಳ್ಳಿನಾ? ಆ ದಿನ ನಡೆದ ಘಟನೆ ರಿವೀಲ್! ಲವ್ ಮಾರ್ಕ್ ಹಾಕಿದ ಡಾಗ್ ಸತೀಶ್
ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್, ತಮ್ಮ ದುಬಾರಿ ಷರ್ಟ್ ಅನ್ನು ಸ್ಪಂದನಾ ಕದ್ದಿದ್ದಾರೆ ಎಂಬ ಆರೋಪಕ್ಕೆ, ಸ್ಪಂದನಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾನು ಆ ಷರ್ಟ್ ತೆಗೆದುಕೊಂಡಿಲ್ಲ ಮತ್ತು ಅದನ್ನು ಅರ್ಧ ಬೆಲೆಗೆ ಮಾರುವ ಬುದ್ಧಿ ತನಗಿಲ್ಲ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಟ್ರೋಲ್ ಮೂಲಕ ಫೇಮಸ್
ಬಿಗ್ಬಾಸ್ (Bigg Boss) ನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಸ್ಪರ್ಧಿಗಳು ಕೆಲ ದಿನಗಳ ಮಟ್ಟಿಗೆ ಸೆಲೆಬ್ರಿಟಿಗಳಾಗುತ್ತಾರೆ. ಎಲ್ಲಾ ಮಾಧ್ಯಮಗಳಲ್ಲಿ ಅವರೇ ಹೈಲೈಟ್. ಅದೇ ರೀತಿ ಟ್ರೋಲ್ ಮೂಲಕವೇ ಫೇಮಸ್ ಆಗ್ತಿರೋರಲ್ಲಿ ಒಬ್ಬರು ಡಾಗ್ ಸತೀಶ್!
ಸ್ಪಂದನಾ ಷರ್ಟ್ ಕಳ್ಳಿ!
ತಾವು ಧರಿಸೋ ಬಟ್ಟೆಯಿಂದ ಹಿಡಿದು ಮಾತೆತ್ತಿದರೆ ಕೋಟಿ ಕೋಟಿಯಲ್ಲಿಯೇ ಮಾತನಾಡೋ, ತಾವು ಸುರಸುಂದರಾಂಗ ಎಂದು ಬಣ್ಣಿಸಿಕೊಳ್ತಿರೋ ಡಾಗ್ ಸತೀಶ್ ನೆಗೆಟಿವ್ ಕಮೆಂಟ್ಸ್ ಮೂಲಕವೇ ಪ್ರಚಾರದಲ್ಲಿ ಇದ್ದಾರೆ! ಅದರಲ್ಲಿ ಒಂದು ಅವರು ತಮ್ಮ ದುಬಾರಿ ಷರ್ಟ್ ಅನ್ನು ಸ್ಪಂದನಾ ಅವರು ಕದ್ದರು ಎಂದು ಹೇಳಿದ್ದು.
ಡಾಗ್ ಸತೀಶ್ ದುಬಾರಿ ಷರ್ಟ್
ಅದರ ಬಗ್ಗೆ ಸುದೀಪ್ ಕೂಡ ಬಿಗ್ಬಾಸ್ನಲ್ಲಿ ಚರ್ಚಿಸಿದ್ದರು. ಡಾಗ್ ಸತೀಶ್ ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಸ್ಪಂದನಾ ಅವರಿಗೆ ಒಂದು ದುಬಾರಿ ಶರ್ಟ್ ಕೊಟ್ಟಿದ್ದರಂತೆ. ಆ ಶರ್ಟ್ ಸ್ಪಂದನಾ ಹಾಳು ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಡಾಗ್ ಸತೀಶ್ ಹೇಳಿಕೆ ಕೊಡುತ್ತಿರುವ ಬಗ್ಗೆ ಏಷ್ಯಾನೆಟ್ ಸುವರ್ಣಗೆ(Asianet Suvarna Inteview) ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಾನೇನ್ ಮಾಡ್ಲಪ್ಪಾ?
ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಅಯ್ಯಯ್ಯೋ ಅವರ ಷರ್ಟ್ ತಗೊಂಡು ನಾನೇನು ಮಾಡ್ಲಪ್ಪಾ ಎಂದು ಕೇಳಿದರು. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡಿದಾಗ, ಮನೆಯಲ್ಲಿ ಎಲ್ಲರೂ ನನ್ನನ್ನು ರೇಗಿಸ್ತಾ ಇದ್ದರು. ಸ್ಪಂದನಾನ್ನು ಹೊರಗಡೆಯೂ ಫೇಮಸ್ ಮಾಡ್ತಾ ಇದ್ದಾರೆ ಅಂತ. ನಿಜವಾಗ್ಲೂ ಆ ಷರ್ಟ್ ನಾನು ತೆಗೆದುಕೊಂಡಿಲ್ಲ ಎಂದಿದ್ದಾರೆ.
ಹಾಫ್ ರೇಟ್ಗೆ ಷರ್ಟ್!
ಅವರ ಷರ್ಟ್ ನನ್ನ ಹತ್ತಿರ ಇಲ್ಲ. ನಾನು ತಗೊಂಡು ಏನು ಮಾಡಲಿ. ಹಾಫ್ ರೇಟ್ಗೆ ಮಾರಿಕೊಳ್ಳುವ ಬುದ್ಧಿ ಅಂತೂ ನನಗೆ ಇಲ್ಲ. ವೀಕೆಂಡ್‌ನಲ್ಲಿ ಒಮ್ಮೆ ಷರ್ಟ್ ಕೊಡಿ ಎಂದು ಎತ್ತಿಕೊಂಡಿದ್ವಿ. ಆದರೆ ಅದನ್ನು ಇಮ್ಮೀಡಿಯೆಟ್ ಆಗಿ ಅವರು ವಾಪಾಸ್ ತೆಗೆದುಕೊಂಡಿದ್ರು ಎಂದಿದ್ದಾರೆ. ಕುತೂಹಲ ಎಂದರೆ, ಈ ವಿಡಿಯೋಗೆ ಡಾಗ್ಸತೀಶ್ ಕೂಡ ಲವ್ ಮಾರ್ಕ್ ಹಾಕಿದ್ದಾರೆ! ಅದಕ್ಕೆ ಹಲವಾರು ಮಂದಿ ಬೈದು ರಿಪ್ಲೈ ಮಾಡಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

