Actor Yash Toxic Movie: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಅವರ ರಾಯ ಪಾತ್ರದ ಟೀಸರ್‌ ರಿಲೀಸ್‌ ಆಗಿದೆ. ಈ ಟೀಸರ್‌ ನೋಡಿದ ಅನೇಕರು ಹಸಿಬಿಸಿ ದೃಶ್ಯಗಳ ಬಗ್ಗೆ ಬೇಸರ ಹೊರಹಾಕಿದ್ದರು. ಈಗ ಟಾಕ್ಸಿಕ್‌ ವಿರುದ್ಧ ದೂರು ದಾಖಲಾಗಿದೆ.

ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಟೀಸರ್‌ ಪ್ರಸಾರ ( Yash Toxic Movie ) ನಿಲ್ಲಿಸುವಂತೆ ಅಥವಾ ಗೈಡ್‌ಲೈನ್ಸ್‌ ಸಮೇತ ಟೀಸರ್‌ ಪ್ರಸಾರ ಮಾಡಿ ಎಂದು ವಕೀಲ ಲೋಹಿತ್‌ ಅವರು ಸೆನ್ಸಾರ್‌ ಮಂಡಳಿಗೆ ದೂರ ಸಲ್ಲಿಕೆ ಮಾಡಿದ್ದಾರೆ. ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆಯಲು ರೆಡಿಯಿದ್ದಾರೆ. ಇನ್ನು ಮಾಧ್ಯಮದ ಜೊತೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಲೋಹಿತ್‌ ಏನು ಹೇಳುತ್ತಿದ್ದಾರೆ?

ಯುಟ್ಯೂಬ್‌, ಫೇಸ್‌ಬುಕ್‌ನಲ್ಲಿ ವಯಸ್ಕರಿಗೆ ಮಾತ್ರ ಎಂದು ಕಮ್ಯುನಿಟಿ ಗೈಡ್‌ಲೈನ್ಸ್‌ ಇದೆ. ಈಗಾಗಲೇ ಟಾಕ್ಸಿಕ್ ಟೀಸರ್ ಮೂಲಕ ಮಕ್ಕಳ ಕಾನೂನುಗಳ ಉಲ್ಲಂಘನೆ ಆಗಿದೆ. ಟೀಸರ್‌ನಲ್ಲಿ ಸಿಕ್ಕಾಪಟ್ಟೆ ಹಸಿಬಿಸಿ ದೃಶ್ಯಗಳಿದ್ದರೂ ಕೂಡ ಗೈಡ್‌ಲೈನ್ಸ್‌ ಇಲ್ಲ. ಈಗ ಗೈಡ್‌ಲೈನ್ಸ್ ಹಾಕಿದ್ದರೆ, ಅದನ್ನು ನೋಡಿ ಸಿನಿಮಾ ಟೀಸರ್‌ ನೋಡಬಹುದು, ನೋಡಬಾರದು ಎನ್ನೋದು ವೀಕ್ಷಕರು ನಿರ್ಧಾರವನ್ನು ಮಾಡಲಿ ಎಂದು ಲೋಹಿತ್‌ ಹೇಳಿದ್ದಾರೆ.

ಮಕ್ಕಳು ನೋಡೋಕೆ ಆಗೋದಿಲ್ಲ

ಈ ಬಗ್ಗೆ ಮಾತನಾಡಿದ ಲೋಹಿತ್‌ "ಸೆನ್ಸಾರ್‌ ಮಂಡಳಿವು A, U ಸೆರ್ಟಿಫಿಕೇಟ್‌ ಕೊಡ್ತಾರೆ. ಥಿಯೇಟರ್‌ನಲ್ಲಿ ಆಧಾರ್‌ ಕಾರ್ಡ್‌ ತೋರಿಸಿ ಸಿನಿಮಾ ನೋಡಲು ಹೋಗಬೇಕು. ನಾನು ಯಶ್‌ ಅಥವಾ ಚಿತ್ರರಂಗದ ವಿರುದ್ಧ ಇಲ್ಲ. ಟಾಕ್ಸಿಕ್‌ ಸಿನಿಮಾವನ್ನು ಕುಟುಂಬದ ಸಮೇತ ನೋಡಲು ಆಗೋದಿಲ್ಲ ಎಂದು ಹೇಳಿದ್ದಾರೆ.

ಇದು ಕುಟುಂಬ ಸಮೇತ ನೋಡುವ ಸಿನಿಮಾವಲ್ಲ, ಚಿಕ್ಕ ಮಕ್ಕಳಿಗೆ ಸಿನಿಮಾ ತೋರಿಸಲೇಬಾರದು ಎಂದು ಮುನ್ನಚ್ಚೆರಿಕೆಯಿಂದ ಹೇಳಬೇಕು. ಮಕ್ಕಳ ಜೊತೆಗೆ ಕುಟುಂಬದ ಜೊತೆಗೆ ಟೀಸರ್‌ ನೋಡಿದೆ ಎಂದು ಎಷ್ಟೋ ಜನರು ಬೇಸರ ಹೊರಹಾಕಿದ್ದಾರೆ” ಎಂದು ಲೋಹಿತ್‌ ಹೇಳಿದ್ದಾರೆ.

ಮಕ್ಕಳು ಮುಖ್ಯ!

ನನಗೆ ಯಶ್‌ ಅವರಿಗಿಂತ ನಮ್ಮ ಸಮಾಜದ ಮಕ್ಕಳು ಮುಖ್ಯ. ನಮ್ಮ ಮಕ್ಕಳನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ಈಗ ಟೀಸರ್‌ ಬಿಡುವಾಗಲೂ ಕೂಡ ಮಕ್ಕಳುನೋಡಬಾರದು ಎನ್ನೋ ಥರ ಗೈಡ್‌ಲೈನ್‌ ನೀಡಬೇಕು. ಹೀಗೆ ಮಾಡಿದ್ದರೆ ಮಾತ್ರ ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಬಹುದು. ಸೆನ್ಸಾರ್‌ ಮಂಡಳಿಯವರು ಈಗ ಇರುವ ಟೀಸರ್‌ ಹಿಂಪಡೆಯಬೇಕು, ಗೈಡ್‌ಲೈನ್ಸ್‌ ಕೊಟ್ಟರೆ ಮಾತ್ರ ಟೀಸರ್‌ ರಿಲೀಸ್‌ ಮಾಡಬಹುದು ಎಂದು ಹೇಳಬಹುದು. ಸೆರ್ಟಿಫಿಕೇಟ್‌ ಕಾಶನ್‌ ಕೊಟ್ಟು ಟೀಸರ್‌ ಬಿಡಬಹುದು ಎಂದು ಲೋಹಿತ್‌ ಹೇಳಿದ್ದಾರೆ.

ಯಾವುದೇ ಪ್ರಚಾರಕ್ಕೋಸ್ಕರ ಈ ರೀತಿ ಮಾಡಿಲ್ಲ. ಡಾ ರಾಜ್‌ಕುಮಾರ್‌ ಸಿನಿಮಾ ನೋಡಿ ನಮ್ಮ ತಾತನವರು ಕೃಷಿ ಮಾಡಬೇಕು ಎಂದುಕೊಂಡರು. ನಿರ್ಮಾಪಕರಾದವರು ಸಿನಿಮಾ ಮಾಡಿ, ಆದರೆ ವೈಭವೀಕರಣ ಮಾಡಬೇಡಿ ಎಂದು ಅವರು ಹೇಳಿದ್ದಾರೆ.