- Home
- Entertainment
- TV Talk
- ಜಿಮ್, Crash Diet ಇಲ್ಲದೆ 14kg ಸಣ್ಣಗಾದ 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ!
ಜಿಮ್, Crash Diet ಇಲ್ಲದೆ 14kg ಸಣ್ಣಗಾದ 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ!
Actress Gowthami Gowda: ನಮ್ಮ ಜೀವನ ಶೈಲಿ, ಆಹಾರ, ಮಾನಸಿಕ ಆರೋಗ್ಯದ ನಿಮಿತ್ತ ಇಂದು ಹೆಣ್ಣು ಮಕ್ಕಳಿಗೆ PCOD, PCOS ಬರುತ್ತಿದೆ. ತಾಯಿಯಾದ ಬಳಿಕ ದಪ್ಪ ಆಗ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರಧಾರಿ ಗೌತಮಿ ಗೌಡ ತಾಯಿಯಾದಮೇಲೆ ದಪ್ಪಗಾಗಿದ್ದರು, ಈಗ ತೂಕ ಇಳಿಸಿಕೊಂಡಿದ್ದಾರೆ.

ಜಾರ್ಜ್ ಕ್ರಿಸ್ಟಿ ಜೊತೆ ಮದುವೆ
ನಟಿ ಗೌತಮಿ ಗೌಡ ಅವರು ಜಾರ್ಜ್ ಕ್ರಿಸ್ಟಿ ಎನ್ನುವವರನ್ನು ಮದುವೆ ಆಗಿದ್ದಾರೆ. ಇವರದ್ದು ಲವ್ ಮ್ಯಾರೇಜ್. ಪರಸ್ಪರ ಇಬ್ಬರೂ ಎರಡು ಧರ್ಮಗಳ ಮೇಲೆ ನಂಬಿಕೆ ಇಟ್ಟಿದ್ದು, ಎಲ್ಲ ಹಬ್ಬಗಳನ್ನು ಖುಷಿಯಿಂದ ಆಚರಿಸುತ್ತಾರೆ. ಈ ದಂಪತಿಗೆ ಓರ್ವ ಮಗಳಿದ್ದಾಳೆ.
ಕನ್ನಡ ಕಿರುತೆರೆಯಲ್ಲಿ ವಿವಿಧ ಪಾತ್ರಗಳ ಮೂಲಕ ಹೆಸರು ಮಾಡಿರುವ ನಟಿ ಗೌತಮಿ ಗೌಡ ಅವರು ತೂಕ ಇಳಿಸಿಕೊಂಡಿದ್ದು ಹೇಗೆ? ಕೂದಲು, ಚರ್ಮದ ಆರೋಗ್ಯದ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ.
ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದಾರೆ
‘ಅಮ್ಮ ನಿನಗಾಗಿ’, ‘ಚಿ ಸೌ ಸಾವಿತ್ರಿ’, ‘ಚೆಲುವಿ’, ‘ತಾಯವ್ವ’, ‘ಚಲಿಸುವ ಮೋಡಗಳು’, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಆರಂಭದ ಕೆಲ ತಿಂಗಳುಗಳ ಕಾಲ ಶ್ರೇಷ್ಠ ಪಾತ್ರದಲ್ಲಿ ನಟಿಸಿದ್ದರು, ಆಮೇಲೆ ಈ ಸೀರಿಯಲ್‌ನಿಂದ ಹೊರಬಂದಿದ್ದರು
ನಟಿ ಗೌತಮಿ ಗೌಡ ಅವರು ತಾಯ್ತನದ ಜೊತೆಗೆ ಕಂಪೆನಿಯೊಂದರಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಎಷ್ಟು ತೂಕ ಇಳಿಸಿಕೊಂಡರು?
ಮಗು ಹುಟ್ಟಿದ ಬಳಿಕ ನಾನು 75kg ತೂಕ ಆಗಿದ್ದೆ, ಈಗ 61kg ಆಗಿದ್ದೇನೆ, 14kg ತೂಕ ಇಳಿಸಿಕೊಂಡಿದ್ದೇನೆ. ಮನೆಯ ಊಟ ಮಾಡಿಕೊಂಡು, ಜಿಮ್‌ಗೆ ಹೋಗದೆ ಸಣ್ಣ ಆದೆ ಎಂದಿದ್ದಾರೆ.
ಡಯೆಟ್ ಹೇಗಿತ್ತು?
“ಪ್ರೋಟೀನ್ ಆಹಾರಗಳನ್ನು ಹೆಚ್ಚು ತಿಂದೆ, ಅನ್ನ-ಚಪಾತಿಯಂಥ ಕಾರ್ಬೋರೆಟೆಡ್ ಆಹಾರಗಳನ್ನು ಕಡಿಮೆ ಮಾಡಿದ್ದೇನೆ. ನೀರು ಹೆಚ್ಚು ಕುಡಿದೆ. Portion Control ಮಾಡಿಕೊಂಡು ತಿಂದಿದ್ದೇನೆ. ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ತಿಂದೆ. ದಿನಕ್ಕೆ ಒಂದು ಕಾಫಿ ಕುಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಸಕ್ಕರೆಯನ್ನು ಬಳಸುತ್ತಿಲ್ಲ. ಯಾವಾಗಾದರೂ ಚೀಟ್ ಡೇ ಇದ್ದ ದಿನ, ಒಂದು ದಿನ ಡೆಸರ್ಟ್ ಅಥವಾ ಸ್ವೀಟ್ ತಿಂದಿದ್ದೇನೆ. ಯಾವುದೇ ವಿಶೇಷ ಡ್ರಿಂಕ್ಸ್ ತಗೊಂಡಿಲ್ಲ” ಎಂದಿದ್ದಾರೆ.
ಇತ್ತೀಚೆಗೆ ಪಾಲಿಸುತ್ತಿರುವ ನಿಯಮಗಳು
ಈಗ ಮನೆಯಲ್ಲಿ ಮಾಡುತ್ತಿರುವ ವ್ಯಾಯಾಮದಲ್ಲಿ ಹೆಚ್ಚಿನ Weight ಎತ್ತುತ್ತಿರುವುದರಿಂದ ಬೆಳಗ್ಗೆ ಓಟ್ಸ್, ಡ್ರೈ ಫ್ರೂಟ್ಸ್, ಪ್ರೋಟೀನ್ ಪೌಡರ್ ಹಾಕಿ ಸ್ಮೂದಿ ಕುಡಿಯುತ್ತೇನೆ. ಆಮೇಲೆ ತರಕಾರಿ, ಹಣ್ಣುಗಳಿಂದ ಕೂಡಿದ ಆಹಾರ ಸೇವನೆ ಮಾಡ್ತೀನಿ.
ಪರಿಣಾಮಗಳು
ತಾಯಿಯಾದಮೇಲೆ ನನಗೆ ಕೂದಲು ಉದುರುವುದು, ಚರ್ಮ ಸುಕ್ಕುಗುಟ್ಟುವುದು ಆಯ್ತು. ಆದರೆ ಈ ಡಯೆಟ್, ವರ್ಕೌಟ್ ಆರಂಭಿಸಿದಮೇಲೆ ಕೂದಲು ಉದುರುವುದು ಕಡಿಮೆ ಆಗಿದೆ, ಚರ್ಮ ಕೂಡ ಮೊದಲಿನ ಸ್ಥಿತಿಗೆ ಬಂದಿದೆ. ತೂಕ ಇಳಿಸಿಕೊಳ್ಳುವುದರ ಜೊತೆಗೆ ನಾನು ಫಿಟ್ ಆಗಿರೋದು, ಆರೋಗ್ಯದಿಂದ ಇರುವುದು ನನ್ನ ಉದ್ದೇಶವಾಗಿತ್ತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

