ಯಶ್‌ ಅವರ ‘ಟಾಕ್ಸಿಕ್‌’ ಚಿತ್ರದ ಕಾರ್‌ ಸೀನ್‌ನಲ್ಲಿರುವ ನಟಿ ಯಾರು ಎನ್ನುವ ಚರ್ಚೆಗಳು ಆ ಸೀನ್‌ನಷ್ಟೇ ಬಿಸಿಬಿಸಿಯಾಗಿದೆ. ಈ ನಟಿಯ ಇನ್‌ಸ್ಟಾಗ್ರಾಮ್‌ ಐಡಿ ಸೇರಿದಂತೆ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಆಗಲೇ ಪತ್ತೆ ಮಾಡಿದ್ದಾರೆ.

ಸಿನಿವಾರ್ತೆ

ಯಶ್‌ ಅವರ ‘ಟಾಕ್ಸಿಕ್‌’ ಚಿತ್ರದ ಕಾರ್‌ ಸೀನ್‌ನಲ್ಲಿರುವ ನಟಿ ಯಾರು ಎನ್ನುವ ಚರ್ಚೆಗಳು ಆ ಸೀನ್‌ನಷ್ಟೇ ಬಿಸಿಬಿಸಿಯಾಗಿದೆ. ಈ ನಟಿಯ ಇನ್‌ಸ್ಟಾಗ್ರಾಮ್‌ ಐಡಿ ಸೇರಿದಂತೆ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಆಗಲೇ ಪತ್ತೆ ಮಾಡಿದ್ದಾರೆ. ಹೀಗಾಗಿ ಟೀಸರ್‌ನಷ್ಟೇ, ಈ ನಟಿಯ ಹಿನ್ನೆಲೆ ಕುರಿತ ಹುಡುಕಾಟ ಕೂಡ ಜೋರಾಗಿದೆ. ಅಂದಹಾಗೆ ‘ಟಾಕ್ಸಿಕ್‌’ ಚಿತ್ರದ ಆ ಕಾರ್‌ ಸೀನ್‌ನಲ್ಲಿ ಮತ್ತೇರಿಸುವಂತೆ ನಟಿಸಿರುವ ನಟಿಯ ಹೆಸರು, ನಟೇಲಿ ಬರ್ನ್‌.

ಅಡಿಕೆ ಮರದಂತೆ ತೆಳ್ಳಗೆ, ಮಾರುದ್ದ ಇರುವ ನಟೇಲಿ

ಅಡಿಕೆ ಮರದಂತೆ ತೆಳ್ಳಗೆ, ಮಾರುದ್ದ ಇರುವ ನಟೇಲಿ ಬರ್ನ್‌, ಮೂಲತಃ ಉಕ್ರೇನ್‌ನ ಕೈವ್‌ ನಗರದ ನಿವಾಸಿ. ಈಕೆ ನಟಿ, ನಿರ್ಮಾಪಕಿ, ಬರಹಗಾರ್ತಿಯೂ ಕೂಡ. ‘ದಿ ಎಕ್ಸ್​ಪ್ಯಾಂಡೆಬಲ್ಸ್ 3’, ‘ಮೆಕ್ಯಾನಿಕ್ ರಿಸರಕ್ಷನ್’, ‘ಫಾರ್ಸೆಸ್ಟ್ರೆಸ್’ ಸೇರಿದಂತೆ ಹಲವಾರು ಹಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದಾರೆ. 7 ಹೆವೆನ್‌ ಹೆಸರಿನ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ನಟೇಲಿ ಬರ್ನ್, ಒಂದಿಷ್ಟು ಚಿತ್ರಗಳಿಗೆ ಬಂಡವಾಳ ಹೂಡಿ ನಿರ್ಮಾಪಕಿಯೂ ಆಗಿದ್ದಾರೆ. ‘ಬಾರ್ನ್ ಟು ಬರ್ನ್’ ಹೆಸರಿನ ನಟನಾ ತರಬೇತಿ ಸಂಸ್ಥೆಗೆ ಸಿಇಓ ಕೂಡ ಆಗಿದ್ದಾರೆ.

ಆಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್‌ ಅಕಾಡೆಮಿಯ ಸದಸ್ಯೆ

ಅಲ್ಲದೆ ಆಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್‌ ಅಕಾಡೆಮಿಯ ಸದಸ್ಯೆಯೂ ಆಗಿರುವ ನಟೇಲಿ ಬರ್ನ್‌, ‘ಟಾಕ್ಸಿಕ್‌’ ಚಿತ್ರದ ಟೀಸರ್‌ನಲ್ಲಿ ಬರುವ ಹಸಿಬಿಸಿ ದೃಶ್ಯಗಳ ಮೂಲಕ ಸಂಚಲನ ಮೂಡಿಸಿದ್ದು, ಈಕೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿವೆ.